- ಬ್ರಹ್ಮಾವರ ಪೊಲೀಸರ ವಶದಲ್ಲಿ ಮಹೇಶ್ ತಿಮರೋಡಿ (Mahesh Shetty Timarodi in police custody)
- ಬಿಜೆಪಿ ನಾಯಕ ಬಿಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ
- ನೋಟಿಸ್‌ಗೆ ಸೂಕ್ತ ಉತ್ತರ ನೀಡದ ಕಾರಣ ಮಹೇಶ್ ತಿಮರೋಡಿ ವಶಕ್ಕೆ ಪಡೆದ ಪೊಲೀಸರು
Brahmavara: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್(BL Santosh) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ(Mahesh Shetty Timarodi) ಮತ್ತೆ ಸುದ್ದಿಯಲ್ಲಿದ್ದಾರೆ.
ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯು(Brahmavar Police Station) ಸಮನ್ಸ್ ನೀಡಿದ್ದರೂ, ಅವರು ನಿನ್ನೆ ವಿಚಾರಣೆಗೆ ಹಾಜರಾಗದೆ ಇದ್ದ ಕಾರಣ ಇಂದು ಬೆಳ್ತಂಗಡಿ ತಾಲ್ಲೂಕಿನ ಉಜಿರೆಯಲ್ಲಿರುವ
ಅವರ ಮನೆಯಲ್ಲಿ ಪೊಲೀಸರು ಅಚಾನಕ್ ಹಾಜರಾಗಿದ್ದಾರೆ. ಬೆಳಿಗ್ಗೆ ಉಜಿರೆಯ ತಿಮರೋಡಿ ನಿವಾಸದ ಬಳಿ ಭಾರೀ ಹೈಡ್ರಾಮಾ ನಡೆಯಿತು.
ಸುಮಾರು 30 ಪೊಲೀಸರ ತಂಡ ಎಂಟು ವಾಹನಗಳಲ್ಲಿ ಬಂದು ಮನೆಯನ್ನು ಸುತ್ತುವರಿಸಿದಾಗ, ಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಬೆಂಬಲಿಗರು ಕೂಡಲೇ ಜಮಾಯಿಸಿ ಬಂಧನಕ್ಕೆ ವಿರೋಧ ವ್ಯಕ್ತಪಡಿಸಿದರು.
ತಿಮರೋಡಿಯನ್ನು ಸ್ಥಳದಲ್ಲೇ ವಿಚಾರಣೆ ನಡೆಸಿ ಬಿಡಬೇಕು ಎಂಬ ಒತ್ತಡವನ್ನು ಅವರು ಪೊಲೀಸರ ಮೇಲೆ ಹೇರಿದರು.ಆದರೆ ದೀರ್ಘ ಮಾತುಕತೆಯ ನಂತರ ಪೊಲೀಸರು ತಿಮರೋಡಿಯನ್ನು ವಶಕ್ಕೆ ಪಡೆದು,

ಅವರ ಖಾಸಗಿ ಕಾರಿನಲ್ಲೇ ಉಡುಪಿಯ(Udupi) ಬ್ರಹ್ಮಾವರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು.
ಇನ್ನು ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ತಿಮರೋಡಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ನನ್ನ ಜೀವಕ್ಕೆ ಏನಾದರೂ ಅಪಾಯ ಉಂಟಾದರೆ
ಅದಕ್ಕೆ ಸರ್ಕಾರ ಹಾಗೂ ಬಿಜೆಪಿ ನಾಯಕರು ಹೊಣೆಗಾರರು. ನಾನು ಪೊಲೀಸರ ಮುಂದೆ ಹೇಳಿಕೆ ನೀಡಲು ಸಿದ್ಧನಿದ್ದೇನೆ” ಎಂದು ಸ್ಪಷ್ಟಪಡಿಸಿದರು.ತಿಮರೋಡಿ ವಿರುದ್ಧದ ಪ್ರಕರಣದ ಮೂಲ,
ಅವರೇ ಫೇಸ್‌ಬುಕ್‌ನಲ್ಲಿ(Facebook) ಹಂಚಿಕೊಂಡಿದ್ದ ಒಂದು ವಿಡಿಯೋ. ಆ ವಿಡಿಯೋದಲ್ಲಿ ಅವರು ಬಿ ಎಲ್ ಸಂತೋಷ್ ಸೇರಿದಂತೆ ಹಲವರ ವಿರುದ್ಧ ಕಟುವಾಗಿ ಟೀಕಿಸಿ, ಅವಾಚ್ಯ ಶಬ್ದಗಳನ್ನು ಬಳಸಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ರಾಜೀವ್ ಕುಲಾಲ್(Rajiv Kulal) ಎಂಬವರು ದೂರು ಸಲ್ಲಿಸಿದ್ದು, ಅದರ ಆಧಾರದ ಮೇಲೆ ಬ್ರಹ್ಮಾವರ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್(Indian Penal Code Sec)
196 (1), 352 ಮತ್ತು 353 (2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಬಂಧನದ ಸಮಯದಲ್ಲಿ ತಿಮರೋಡಿ ಬೆಂಬಲಿಗರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಅಲ್ಲಿಯೇ ಸ್ಥಳದಲ್ಲಿದ್ದ ಗಿರೀಶ್ ಮಟ್ಟಣ್ಣನವರ್(Girish Mattannavar) ಸೇರಿದಂತೆ ಹಲವರು ಪೊಲೀಸರ ಕ್ರಮಕ್ಕೆ ಪ್ರಶ್ನೆ ಎತ್ತಿ ವಾಗ್ವಾದ ನಡೆಸಿದರು.
ಆದರೆ ಪೊಲೀಸರು ಶಾಂತಿ ಕಾಪಾಡುವ ದೃಷ್ಟಿಯಿಂದ ಅರ್ಧಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿ ನಂತರ ತಿಮರೋಡಿಯನ್ನು ವಶಕ್ಕೆ ಪಡೆದರು.
ತಿಮರೋಡಿ ತಮ್ಮ ವಿರುದ್ಧ ನಡೆದಿರುವ ಕ್ರಮವನ್ನು ರಾಜಕೀಯ ಪ್ರೇರಿತ(Politically motivated) ಎಂದು ತಿರಸ್ಕರಿಸಿದ್ದಾರೆ. “ನನ್ನ ಮಾತುಗಳನ್ನು ತಿರುಗಿಸಿ ತಪ್ಪಾಗಿ ಅರ್ಥೈಸಲಾಗಿದೆ.
ಈ ಹಿಂದೆ ಸರ್ಕಾರದ ವಿರುದ್ಧ ಟೀಕೆ ಮಾಡಿದ ಕಾರಣ ಈಗ ನನ್ನ ಮೇಲೆ ಒತ್ತಡ ಹೇರಲಾಗುತ್ತಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇಡೀ ಘಟನೆಯಿಂದ ಉಜಿರೆ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯರು ಮತ್ತು ತಿಮರೋಡಿ ಬೆಂಬಲಿಗರು ಪೊಲೀಸರು ಹೋದ ನಂತರವೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. (Mahesh Shetty Timarodi in police custody)