ಬೆಂಗಳೂರು, ಜ. 21: ಮಹಿಳಾ ಪ್ರತಿಭಟನಾಕಾರರನ್ನು ಹೇಗೆ ನಡೆಸಿಕೊಳ್ಳಬೇಕು ಎಂದು ತಿಳಿಯದ ನಿಮ್ಮದು ಯಾವ ಸೀಮೆಯ ಬೇಟಿ ಬಚಾವೋ? ಶಾಸಕಿ ಸೌಮ್ಯಾ ರೆಡ್ಡಿ ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ಮಸೂದೆ ಖಂಡಿಸಿ ರಾಜ್ಯ ಕಾಂಗ್ರೆಸ್ ವತಿಯಿಂದ ಹ
ರಾಜಭವನ ಚಲೋ ಪ್ರತಿಭಟನೆ ವೇಳೆ ಶಾಸಕಿ ಸೌಮ್ಯಾ ರೆಡ್ಡಿ, ಕರ್ತವ್ಯನಿರತ ಮಹಿಳಾ ಪೊಲೀಸ್ ಪೇದೆಯ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ಸಚಿವ ಶ್ರೀರಾಮುಲು ಟೀಕಿಸಿದ್ದರು.
ಈ ಹಿನ್ನೆಲೆಯಲ್ಲಿ ಸಚಿವ ಶ್ರೀರಾಮುಲು ಅವರಿಗೆ ತಿರುಗೇಟು ನೀಡಿರುವ ಶಾಸಕಿ ಸೌಮ್ಯಾ ರೆಡ್ಡಿ, ಮಹಿಳಾ ಪ್ರತಿಭಟನಾಕಾರರನ್ನು ಹೇಗೆ ನಡೆಸಿಕೊಳ್ಳಬೇಕು ಎಂದು ತಿಳಿಯದ ನಿಮ್ಮದು ಯಾವ ಸೀಮೆಯ ಬೇಟಿ ಬಚಾವೋ?
ರೈತರಿಗಾಗಿ ಹೋರಾಡುವ ಮಹಿಳೆಯರೊಂದಿಗೆ ನಿಮ್ಮ ಸರ್ಕಾರ ಇಷ್ಟು ಅಮಾನುಷವಾಗಿ ನಡೆದುಕೊಂಡಿದ್ದು ಸರಿಯೇ? ನಾನು ಇತ್ತೀಚಿಗೆ ಭೇಟಿ ನೀಡಿದ ಸಿಂಘು ನತ್ತು ಟಿಕ್ರಿ ಗಡಿ ಪ್ರದೇಶದಲ್ಲಿ ಮಹಿಯರನ್ನು ಹೆಚ್ಚು ಗೌರವದಿಂದ ನಡೆಸಿಕೊಳ್ಳಲಾಗುತ್ತಿತ್ತು.
ಇಷ್ಟೆಲ್ಲಾ ಮಾತಾಡುವ ನೀವು ಧೈರ್ಯವಿದ್ದರೆ ಅದೇ ಪೊಲೀಸರು ನನ್ನೊಂದಿಗೆ ಕೆಟ್ಟದಾಗಿ ವರ್ತಿಸಿದ, 20 ನಿಮಿಷಕ್ಕೂ ಹೆಚ್ಚು ಸಮಯ ಬಲವಂತವಾಗಿ ಹಿಡಿದು ಎಳೆದಾಡಿದ ವಿಡಿಯೋ ಹಂಚಿಕೊಳ್ಳಿ. ನನ್ನ ಜಾಗದಲ್ಲಿ ನಿಮ್ಮದೇ ಮಗಳೋ, ತಂಗಿಯೋ ಇದ್ದಿದರೆ ಇದೇ ಮಾತು ಹೇಳ್ತಿದ್ರಾ? ಎಂದು ಸಚಿವ ಶ್ರೀರಾಮುಲು ಅವರನ್ನು ಪ್ರಶ್ನಿಸಿದ್ದಾರೆ.