Visit Channel

ಮೈಲಾರಲಿಂಗೇಶ್ವರನಿಗೆ ಬೆಳ್ಳಿ ಹೆಲಿಕಾಪ್ಟರ್ ಕಾಣಿಕೆ ನೀಡಿದ ಡಿಕೆಶಿ

WhatsApp Image 2020-12-18 at 2.03.49 PM

ಬಳ್ಳಾರಿ, ಡಿ. 18: ಜಿಲ್ಲೆಯ ಸುಪ್ರಸಿದ್ಧ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಿಕುಮಾರ್​ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ವೇಳೆ ದೇಗುಲಕ್ಕೆ ಬೆಳ್ಳಿ ಹೆಲಿಕಾಪ್ಟರ್‌ ಅನ್ನು ಕಾಣಿಕೆ ನೀಡಿದರು.

ದೇವಸ್ಥಾನದಲ್ಲಿ ಡಿಕೆಶಿ ದೀರ್ಘದಂಡ ನಮಸ್ಕಾರ, ರುದ್ರಸ್ನಾನದ ವಿಧಿ ನೆರವೇರಿಸಿದರು. ಮೈಲಾರಲಿಂಗೇಶ್ವರನಿಗೆ ಪೂಜೆ ಸಲ್ಲಿಸಿ, 1 ಕೆ.ಜಿ‌ ತೂಕದ ಬೆಳ್ಳಿಯಿಂದ ಮಾಡಿರುವ ಹೆಲಿಕಾಪ್ಟರ್‌ ಕಾಣಿಕೆ ನೀಡಿ ಹರಕೆ ತೀರಿಸಿದರು.

ಬೆಳ್ಳಿ ಹೆಲಿಕಾಪ್ಟರ್‌ ನೀಡಿದ್ದೇಕೆ ಗೊತ್ತೆ?
2018ರಲ್ಲಿ ಮೈಲಾರಲಿಂಗೇಶ್ವರ ದೇವಸ್ಥಾನದ ಮೇಲೆ ಡಿ.ಕೆ.ಶಿವಕುಮಾರ್​ ಅವರ ಹೆಲಿಕಾಪ್ಟರ್ ಹಾದುಹೋಗಿತ್ತಂತೆ. ಇದರಿಂದ ದೇವರಿಗೆ ಅಪಚಾರ ಆಗಿತ್ತೆಂದು ಮತ್ತು ಡಿ.ಕೆ.ಶಿವಕುಮಾರ್​ಗೆ ಭಾರಿ ಸಮಸ್ಯೆಗಳು ಎದುರಾಗಿದ್ದವು ಎಂದು ಹೇಳಲಾಗಿತ್ತು. ಹೀಗಾಗಿ, ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕಾಣಿಕೆ ನೀಡಿದರು.

Latest News

bjp
ರಾಜಕೀಯ

ಕಾಂಗ್ರೆಸ್ಸಿಗರಿಗೇಕೆ ಜಿಹಾದಿಗಳ ಮೇಲೆ ಇಷ್ಟೊಂದು ಪ್ರೀತಿ? : ಬಿಜೆಪಿ ಪ್ರಶ್ನೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಕ್ಕೆ ಮಸಿ ಬಳಿಯಲು ಯತ್ನಿಸಿದ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಲಾಗಿದೆ ಎಂದು ಬಿಜೆಪಿ ತಿಳಿಸಿದೆ.

Pingali
ಮಾಹಿತಿ

ನಮ್ಮ ರಾಷ್ಟ್ರಧ್ವಜವನ್ನು ನಿರ್ಮಿಸಿದ ಪಿಂಗಳಿ ವೆಂಕಯ್ಯ, ಮೊದಲು ಬ್ರಿಟಿಷ್ ಸೈನ್ಯದಲ್ಲಿದ್ದರು ; ಇಲ್ಲಿದೆ ಓದಿ ಅಚ್ಚರಿಯ ಮಾಹಿತಿ

ದೇಶಕ್ಕೊಂದು ಧ್ವಜಕೊಟ್ಟು 100 ವರ್ಷ ಕಳೆದರೂ ಪಿಂಗಳಿ ಅವರ ನೆನಪು ಅಜರಾಮರವಾಗಿದೆ. ಪಿಂಗಳಿ ವೆಂಕಯ್ಯ ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಮುಂದೆ ಓದಿ.

JK
ದೇಶ-ವಿದೇಶ

ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರನ್ನು ಹತ್ಯೆಗೈದ ಭಯೋತ್ಪಾದಕರು!

ಕಾಶ್ಮೀರಿ ಪಂಡಿತರೊಬ್ಬರನ್ನು(Kashmiri Pandits) ಗುಂಡಿಕ್ಕಿ ಕೊಂದು ಆತನ ಸಹೋದರನನ್ನು ಗಾಯಗೊಳಿಸಿದ್ದಾರೆ. ಸಂತ್ರಸ್ತ ಸಹೋದರನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.