ಬೆಂಗಳೂರು, ಡಿ. 12: ಮಾಜಿ ಅಬಕಾರಿ ಸಚಿವ ಪ್ರೇಮಾನಂದ್ ಎಸ್ ಜೈವಂತ್‌ರವರು ನಿಧನರಾಗಿದ್ದಾರೆ. ಅವರು ಶಿರಸಿ ಕ್ಷೇತ್ರದಿಂದ ಆಯ್ಕೆಯಾಗಿ ಅಬಕಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಇವರಿಗೆ ಬಹಳ ದಿನಗಳಿಂದ ಆರೋಗ್ಯ ಹದಗೆಟ್ಟಿತ್ತು. ಇದರಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ .
ಅವರು ಜನತಾ ಪರಿವಾರದಿಂದ ಗುರುತಿಸಿಕೊಂಡವರಾಗಿದ್ದರು. 1998ರಲ್ಲಿ ಅಂದಿನ ಮುಖ್ಯಮಂತ್ರಿ ಜೆ. ಎಚ್ ಪಾಟೀಲ್ ಸರ್ಕಾರದಲ್ಲಿ ಅಬಕಾರಿ ಸಚಿವರಾಗಿದ್ದರು ಎಂದು ತಿಳಿದು ಬಂದಿದೆ.