ಬೆಂಗಳೂರು, ಡಿ. 05: ಐಎಂಎ ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಮಾಜಿ ಸಚಿವ ರೋಷನ್ ಬೇಗ್ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.
ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ ನಿಂದ ಅಕ್ರಮವಾಗಿ ಹಣ ಪಡೆದಿದ್ದ ಆರೋಪದ ಮೇರೆಗೆ ರೋಷನ್ ಬೇಗ್ ಅವರನ್ನು ಸಿಬಿಐ ಅಧಿಕಾರಿಗಳು ನ.22ರಂದು ಬಂಧಿಸಿದ್ದರು. ಈ ನಡುವೆ ಅನಾರೋಗ್ಯ ಹಿನ್ನೆಲೆಯಲ್ಲಿ ರೋಷನ್ ಬೇಗ್ ಅವರಿಗೆ ಸಿಬಿಐ ವಿಶೇಷ ಕೋರ್ಟ್ ಜಾಮೀನು ನೀಡಿದೆ. ಅಲ್ಲದೇ ತಿಂಗಳ 2ನೇ ಮತ್ತು 4ನೇ ಸೋಮವಾರ ತನಿಖಾಧಿಕಾರಿಗಳೆದರು ಹಾಜರಾಗಬೇಕು, ತನಿಖೆಗೆ ಸಹಕಾರ ನೀಡಬೇಕು, ಸಾಕ್ಷ್ಯ ನಾಶಪಡಿಸಬಾರದು ಹಾಗೂ ತನಿಖಾಧಿಕಾರಿಗಳ ಸುಪರ್ದಿಗೆ ಪಾಸ್ ಪೋರ್ಟ್ ಒಪ್ಪಿಸಬೇಕೆಂಬುದು ಸೇರಿದಂತೆ ಮತ್ತಿತರೆ ಷರತ್ತುಗಳೊಂದಿಗೆ ವಿಶೇಷ ಕೋರ್ಟ್ ಜಾಮೀನು ನೀಡಿದೆ.