- ಎಸ್ಸೆಸ್ಸೆಲ್ಸಿ-ದ್ವಿತೀಯ ಪಿಯು 3ನೇ ಪರೀಕ್ಷೆಗೆ ಕೊಕ್
- ಅಗತ್ಯ, ಅನಗತ್ಯತೆಗಳ ಪಟ್ಟಿ ಸಿದ್ಧಪಡಿಸುತ್ತಿರುವ ಶಿಕ್ಷಣ ಇಲಾಖೆ (Major changes in SSLC and PUC exams)
- ಪರೀಕ್ಷೆ ಬರೆಯುವವರ ಸಂಖ್ಯೆ ಕೂಡ ಕಡಿಮೆ ಇರೋದ್ರಿಂದ ಹೊಸ ಬದಲಾವಣೆ
Bengaluru: ಶೈಕ್ಷಣಿಕ ವರ್ಷ 2025-26ರಲ್ಲಿ ನಡೆಯುವ ಎಸ್ಎಸ್ಎಲ್ಸಿ (SSLC) ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ (PUC Exam) ಶಿಕ್ಷಣ ಇಲಾಖೆ ಕೆಲ ಬದಲಾವಣೆ ತರುವ ಯೋಚನೆಯಲ್ಲಿದೆ .
ಮಕ್ಕಳ ಬುದ್ಧಿಮಟ್ಟದ ಜೊತೆಗೆ ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಹೊಣೆ ಶಿಕ್ಷಣ ಇಲಾಖೆ (Education Department) ಮೇಲಿರುವ ಕಾರಣದಿಂದಾಗಿ ಈ ವರ್ಷದಿಂದ ಮತ್ತಷ್ಟು ಹೊಸ ಹೊಸ ಕ್ರಮಗಳನ್ನು ಹಾಗೂ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ.
ಅದರಂತೆ ಇದೀಗ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆ ಹಾಗೂ ಪಠ್ಯ ಪುಸ್ತಕಕ್ಕೆ ಸಂಬಂಧಿಸಿದಂತೆ ಕೆಲವು ನಿರ್ಧಾರಗಳನ್ನು ಕೈಗೊಂಡಿದೆ.
ಇನ್ನು ಕಳೆದ ಎರಡು ವರ್ಷಗಳಿಂದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಮೂರು ಪರೀಕ್ಷೆಗಳನ್ನು ನಡೆಸುವ ವ್ಯವಸ್ಥೆ ಜಾರಿಯಲ್ಲಿದೆ.

ಆದರೆ ಇದೀಗ ಈ ವ್ಯವಸ್ಥೆಯಲ್ಲಿ ಪರಿಷ್ಕರಣೆ ಮಾಡಲು ಉನ್ನತ ಮಟ್ಟದಲ್ಲಿ ಚರ್ಚೆಗಳು ಆರಂಭವಾಗಿದೆ. ಈಗಾಗಲೇ ಶಿಕ್ಷಣ ಇಲಾಖೆ ತನ್ನ ಉನ್ನತ ಅಧಿಕಾರಿಗಳ ಮಂಡಳಿಗೆ ಮೌಖಿಕ ಸೂಚನೆ ನೀಡಿರುವುದಾಗಿ ಹೇಳಿದೆ.
ಇದೀಗ ವಿದ್ಯಾರ್ಥಿಗಳಿಗೆ ಮೂರನೇ ಪರೀಕ್ಷೆಯ ಅಗತ್ಯತೆ ಬಗ್ಗೆ ಸಭೆಗಳನ್ನು ನಡೆಸುತ್ತಿರುವ ಮಂಡಳಿ, ಪರೀಕ್ಷೆಗಳಿಂದಾಗುವ ಲಾಭ-ನಷ್ಟಗಳ ಪಟ್ಟಿ ರೂಪಿಸುತ್ತಿದೆ.
ಇನ್ನು ಮಂಡಳಿಯ ಮೂಲಗಳ ಪ್ರಕಾರ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಮೂರನೇ ಪರೀಕ್ಷೆ ಅಗತ್ಯವಿಲ್ಲ ಎಂಬ ಅಭಿಪ್ರಾಯ ಕೇಳಿ ಬಂದಿದೆ.
ಈಗಾಗಲೇ ಹಲವು ಕಡೆಗಳಲ್ಲಿ ಪರೀಕ್ಷೆ-3 ಅಗತ್ಯತೆ ಹೆಚ್ಚಿಲ್ಲ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಅಲ್ಲದೇ ಅನೇಕ ಹಿರಿಯ ವಿದ್ಯಾರ್ಥಿಗಳು ಕೂಡ 3 ನೆಯ ಪರೀಕ್ಷೆಯ ಅಗತ್ಯವಿಲ್ಲ ಎಂದಿದ್ದಾರೆ.
ಇನ್ನು ಈ ಪರೀಕ್ಷೆಯ ಸಾಧಕ ಬಾಧಕಗಳನ್ನು ನೋಡುವುದಾದರೆ ಮೊದಲನೆಯದಾಗಿ ಪರೀಕ್ಷೆ-3 ಅನ್ನು ಸಾಮಾನ್ಯವಾಗಿ ಶಾಲೆ / ಕಾಲೇಜು ಆರಂಭವಾದ ಕೆಲವೇ ಕೆಲವು ದಿನಗಳಲ್ಲಿ ಅಂದರೆ ಜೂನ್ ಅಥವಾ ಜುಲೈ ತಿಂಗಳಲ್ಲಿ ನಡೆಸಲಾಗುತ್ತೆ.
ಆದರೆ ಈ ವೇಳೆಯಲ್ಲಿ ರಾಜ್ಯದಲ್ಲಿ ಅಧಿಕ ಮಳೆ ಸುರಿಯುತ್ತದೆ.ಅದರಲ್ಲೂ ಕರಾವಳಿ, ಮಲೆನಾಡು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವುದು ಸಹ ಕಷ್ಟವಾಗುತ್ತೆ. ಅಲ್ಲದೇ ಕೆಲ ಭಾಗಗಳಲ್ಲಿ ಮಳೆಯಿಂದಾಗಿ ರಜೆ ಘೋಷಣೆ ಮಾಡಲಾಗುತ್ತದೆ.
ಅಂತಹ ಸಮಯದಲ್ಲಿ ಪರೀಕ್ಷೆ ತಯಾರಿ ಮಾಡಿಕೊಂಡರೂ ಎಲ್ಲವೂ ವ್ಯರ್ಥವಾಗುತ್ತದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಇನ್ನು ಈ ಸಲ ಪರೀಕ್ಷೆಯ ವೇಳೆ ಕೆಲ ಗೊಂದಲ ಏರ್ಪಟ್ಟಿದ್ದವು.
ಇವಿಷ್ಟೇ ಅಲ್ಲದೆ ಈ ಮೂರನೇ ಪರೀಕ್ಷೆ ಬರೆಯುವವಿಧ್ಯಾರ್ಥಿಗಳ ಸಂಖ್ಯೆ, ಪಾಸಾಗುವವರ ಸಂಖ್ಯೆ ಕೂಡ ಕಡಿಮೆ ಇರುತ್ತದೆ.
ಒಟ್ಟಿನಲ್ಲಿ ಕೆಲವರಿಗೆ ಅನುಕೂಲವೆನಿಸಿದ್ರೂ ಕೂಡ ಇದು ಅನಗತ್ಯ ಎನ್ನುವ ಮಾತು ಕೇಳಿಬರ್ತಿದೆ. (Major changes in SSLC and PUC exams)