ಬ್ಯಾಂಕಿಂಗ್ ರ್ಯಾಲಿ ಬೆಂಬಲ; ಅದಾನಿ, ಟಾಟಾ, ಜಿಯೋ ಸೇರಿದಂತೆ (major stocks in stock market) ಹಲವು ಕಂಪನಿಗಳ ಮೇಲೆ ಕಣ್ಣಿಟ್ಟ ಹೂಡಿಕೆದಾರರು
ಬ್ಲಾಕ್ ಡೀಲ್, ತ್ರೈಮಾಸಿಕ ಫಲಿತಾಂಶ ಮತ್ತು ಹೊಸ ಯೋಜನೆಗಳಿಂದ ಹೂಡಿಕೆದಾರರ ಗಮನ ಸೆಳೆದ ಕಂಪನಿಗಳು
ತ್ರೈಮಾಸಿಕ ಲಾಭ, ಬ್ಲಾಕ್ ಡೀಲ್ ಮತ್ತು ವಿಸ್ತರಣಾ ಯೋಜನೆಗಳಿಂದ ಮಾರುಕಟ್ಟೆಯಲ್ಲಿ ಚರ್ಚೆ
ಭಾರತೀಯ ಷೇರು ಮಾರುಕಟ್ಟೆ ಗುರುವಾರ ಉತ್ತಮ ಚೇತರಿಕೆಯನ್ನು (major stocks in stock market) ಕಂಡು ಸತತ ಎರಡನೇ ದಿನವೂ ಲಾಭದೊಂದಿಗೆ ಮುಕ್ತಾಯಗೊಂಡಿದೆ.
ಜಾಗತಿಕ ಮಾರುಕಟ್ಟೆಗಳಿಂದ ಬಂದ ಪಾಸಿಟಿವ್ ಸೂಚನೆಗಳು ಹಾಗೂ ಹೆವಿವೈಟ್ (Heavyweight) ಷೇರುಗಳ ಖರೀದಿ ಚಟುವಟಿಕೆ ಮಾರುಕಟ್ಟೆಯ ಏರಿಕೆಗೆ ಬಲ ನೀಡಿವೆ.

ವಿಶೇಷವಾಗಿ ಬ್ಯಾಂಕಿಂಗ್ (Banking) ವಲಯದ ಷೇರುಗಳು ಉತ್ತಮ ಪ್ರದರ್ಶನ ನೀಡಿದ್ದು, ಹೂಡಿಕೆದಾರರಲ್ಲಿ ಹೊಸ ವಿಶ್ವಾಸ ಮೂಡಿಸಿದೆ. ಆದರೆ ಐಟಿ ವಲಯದಲ್ಲಿ ಇನ್ನೂ ಒತ್ತಡ ಮುಂದುವರಿದಿರುವುದು ಗಮನಾರ್ಹವಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಶುಕ್ರವಾರದ ವಹಿವಾಟಿಗೆ ಮುನ್ನ ಹಲವು (major stocks in stock market) ಪ್ರಮುಖ ಕಂಪನಿಗಳ ಷೇರುಗಳು ಹೂಡಿಕೆದಾರರ ಗಮನ ಸೆಳೆದಿವೆ.
ಅದಾನಿ ಎಂಟರ್‌ಪ್ರೈಸಸ್, ಟಾಟಾ ಮೋಟಾರ್ಸ್, ಜಿಯೋ ಫೈನಾನ್ಷಿಯಲ್ (Jio Financial) , ಟಾಟಾ ಸ್ಟೀಲ್, ಐಟಿಸಿ ಹೋಟೆಲ್ಸ್ (ITC Hotels) ಸೇರಿದಂತೆ ಅನೇಕ ಕಂಪನಿಗಳ ಬಗ್ಗೆ ಬಂದಿರುವ ಪ್ರಮುಖ ಬೆಳವಣಿಗೆಗಳು ಮಾರುಕಟ್ಟೆಯಲ್ಲಿ ಚರ್ಚೆಗೆ ಕಾರಣವಾಗಿವೆ.
ಜೊತೆಗೆ ಪವರ್ ಗ್ರಿಡ್, ಸೈಲ್, ಹಿಂದೂಸ್ತಾನ್ ಕಾಪರ್, ಕೊಚ್ಚಿನ್ ಶಿಪ್‌ಯಾರ್ಡ್ (Cochin Shipyard) ಮತ್ತು ಪ್ರೀಮಿಯರ್ ಎನರ್ಜೀಸ್ ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳ ಮೇಲೂ ಹೂಡಿಕೆದಾರರು ಕಣ್ಣಿಟ್ಟಿದ್ದಾರೆ.
ಅದಾನಿ ಎಂಟರ್‌ಪ್ರೈಸಸ್‌ನಲ್ಲಿ ಸುಮಾರು 1,435 ಕೋಟಿ ರೂಪಾಯಿ ಮೌಲ್ಯದ ದೊಡ್ಡ ಬ್ಲಾಕ್ ಡೀಲ್ ನಡೆದಿದ್ದು, ಇದರಲ್ಲಿ ಜಿಕ್ಯೂಜಿ ಪಾರ್ಟ್ನರ್ಸ್ ಮತ್ತು ಎಸ್‌ಬಿಐ ಮ್ಯೂಚುವಲ್ ಫಂಡ್ ಪ್ರಮುಖ ಪಾತ್ರವಹಿಸಿವೆ.
ಇದೇ ವೇಳೆ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ತನ್ನ ನಾಲ್ಕನೇ ತ್ರೈಮಾಸಿಕದಲ್ಲಿ ಲಾಭದಲ್ಲಿ ಇಳಿಕೆ ಕಂಡಿದ್ದರೂ, ಹೂಡಿಕೆದಾರರಿಗೆ ಡಿವಿಡೆಂಡ್ (Dividend) ಘೋಷಣೆ ಮಾಡಿರುವುದು ಗಮನ ಸೆಳೆದಿದೆ.
ಮತ್ತೊಂದೆಡೆ ಭಾರ್ತಿ ಏರ್‌ಟೆಲ್ ಮುಂದಿನ ಎರಡು ವರ್ಷಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ 56 ಎಡ್ಜ್ ಡೇಟಾ ಸೆಂಟರ್‌ಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿರುವುದಾಗಿ ತಿಳಿಸಿದೆ.
ರಿಯಲ್ ಎಸ್ಟೇಟ್ (Real Estate) ಕ್ಷೇತ್ರದಲ್ಲೂ ಚಟುವಟಿಕೆ ಹೆಚ್ಚಾಗಿದ್ದು, ಡಿಎಲ್‌ಎಫ್ ಈ ಹಣಕಾಸು ವರ್ಷದಲ್ಲಿ 20,000 ಕೋಟಿ ರೂಪಾಯಿ ಮೌಲ್ಯದ ಮಾರಾಟ ಗುರಿ ಹೊಂದಿದೆ. ಮುಂಬೈ, ಗುರುಗ್ರಾಮ ಹಾಗೂ ಗೋವಾದಲ್ಲಿ ಹೊಸ ವಸತಿ ಯೋಜನೆಗಳನ್ನು ಆರಂಭಿಸುವ ಮೂಲಕ ಕಂಪನಿ ತನ್ನ ವ್ಯಾಪಾರ ವಿಸ್ತರಣೆಗೆ ಮುಂದಾಗಿದೆ.
ಇನ್ನೊಂದೆಡೆ ಓಲಾ ಎಲೆಕ್ಟ್ರಿಕ್ ತನ್ನ ಗಿಗಾಫ್ಯಾಕ್ಟರಿಯಿಂದ ಲಿಥಿಯಂ-ಐಯಾನ್ ಬ್ಯಾಟರಿ (Lithium-ion battery) ಪೂರೈಕೆಗಾಗಿ ದೇಶೀಯ ಮತ್ತು ವಿದೇಶಿ ವಾಹನ ತಯಾರಕರೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ವರದಿಯಾಗಿದೆ.
ಔಷಧ ತಯಾರಿಕಾ ಕ್ಷೇತ್ರದಲ್ಲಿ ಅಲೆಂಬಿಕ್ ಫಾರ್ಮಾ ಪ್ರೋಸ್ಟೇಟ್ (Alembic Pharma Prostate) ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದ ಜೆನೆರಿಕ್ ಔಷಧಕ್ಕೆ ಅಮೆರಿಕದ ನಿಯಂತ್ರಣ ಸಂಸ್ಥೆಯಿಂದ ತಾತ್ಕಾಲಿಕ ಅನುಮೋದನೆ ಪಡೆದಿದೆ.
ಇದೇ ವೇಳೆ ಜೆಎಸ್‌ಡಬ್ಲ್ಯೂ ಸ್ಟೀಲ್ ಮತ್ತು ಹುಡ್ಕೊ ಕಂಪನಿಗಳು ಭರ್ಜರಿ ಲಾಭದೊಂದಿಗೆ ಮಾರುಕಟ್ಟೆಗೆ ಪಾಸಿಟಿವ್ ಸಂದೇಶ ನೀಡಿವೆ. ಜೆಎಸ್‌ಡಬ್ಲ್ಯೂ ಸ್ಟೀಲ್ (JSW Steel) ತನ್ನ ಲಾಭವನ್ನು 11 ಪಟ್ಟು ಹೆಚ್ಚಿಸಿಕೊಂಡಿರುವುದು ಹೂಡಿಕೆದಾರರ ಗಮನ ಸೆಳೆದರೆ, ಹುಡ್ಕೊ ಕೂಡ ನಾಲ್ಕನೇ ತ್ರೈಮಾಸಿಕದಲ್ಲಿ ಭಾರಿ ಏರಿಕೆ ದಾಖಲಿಸಿದೆ.
ಒಟ್ಟಿನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ವಿಶ್ವಾಸ ಮರುಕಳಿಸಿರುವ ಲಕ್ಷಣಗಳು ಕಾಣುತ್ತಿದ್ದು, ಇಂದಿನ ವಹಿವಾಟಿನಲ್ಲಿ ಈ ಪ್ರಮುಖ ಷೇರುಗಳು ಹೆಚ್ಚು ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ. ಹೂಡಿಕೆದಾರರು ಕಂಪನಿಗಳ ಫಲಿತಾಂಶಗಳು ಹಾಗೂ ಜಾಗತಿಕ ಮಾರುಕಟ್ಟೆಯ ಚಲನವಲನಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.