Bengaluru : ಬಜರಂಗದಳವನ್ನು (Bajrang Dal) ಪಿಎಫ್ಐ (PFI) ಸಂಘಟನೆಗಳಿಗೆ ಹೋಲಿಸಿದ ಪ್ರಕರಣದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (AICC President Mallikarjuna Kharge) ಅವರಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಬಜರಂಗದಳ ಹೂಡಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ಪಂಜಾಬ್ನ ಸಂಗ್ರೂರ್ ನ್ಯಾಯಾಲಯ ಸೋಮವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ಗೆ ಸಮನ್ಸ್ ಜಾರಿ ಮಾಡಿದೆ.

ಈ ಹಿಂದೆ ಕೂಡ ಖರ್ಗೆಯವರು ಪಿಎಫ್ ಐ ಜೊತೆ ಭಜರಂಗದಳ ಸಂಘಟನೆಯನ್ನು ಹೋಲಿಕೆ ಮಾಡಿದ್ದರು.
ಮಲ್ಲಿಕಾರ್ಜುನ ಖರ್ಗೆ ಅವರ ಮಾನನಷ್ಟಕ್ಕಾಗಿ 100 ಕೋಟಿ ರೂಪಾಯಿ ಪರಿಹಾರ ನೀಡುವಂತೆ ವಿಶ್ವ ಹಿಂದೂ ಪರಿಷತ್ ಚಂಡೀಗಢ ಇಲಾಖೆ ನೋಟಿಸ್ ನೀಡಿದೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ (Congress manifesto) ತನ್ನ ಯುವ ಘಟಕ ಬಜರಂಗದಳವನ್ನು ಅವಮಾನಿಸಲಾಗಿದೆ ಎಂದು ವಿಎಚ್ಪಿ ಹೇಳಿಕೊಂಡಿದೆ.
ವಿಶ್ವ ಹಿಂದೂ ಪರಿಷತ್ತಿನ ಚಂಡೀಗಢ ಘಟಕ ಮತ್ತು ಅದರ ಯುವ ಘಟಕ ಬಜರಂಗದಳ ಮೇ 4 ರಂದು 14 ದಿನಗಳ ಒಳಗೆ 100 ಕೋಟಿ ಪರಿಹಾರ ನೀಡುವಂತೆ ನೋಟಿಸ್ ನೀಡಿದೆ.
ಇದನ್ನೂ ಓದಿ : https://vijayatimes.com/dk-shivakumar-vs-siddaramaiah/
ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಏನಿದೆ?
ಕಾಂಗ್ರೆಸ್ ಹಲವು ಭರವಸೆಗಳ ಜೊತೆಗೆ, ಪ್ರಮುಖವಾಗಿ ಬಜರಂಗದಳ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (Popular Front of India) ನಂತಹ ಸಂಘಟನೆಗಳ
ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ (Congress) ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದೆ. ಅಷ್ಟೇ ಅಲ್ಲದೆ ಜಾತಿ,
ಧರ್ಮ ಮತ್ತು ಸಮುದಾಯಗಳ ನಡುವೆ ದ್ವೇಷವನ್ನು ಹರಡುವ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಕಾಂಗ್ರೆಸ್ ಬದ್ಧ ಎಂದಿದೆ. ಅಲ್ಲದೇ.
ಸಮಾಜದ ಶಾಂತಿಯನ್ನು ಕದಡುವಂತಹ ಈ ಸಂಘಟನೆಗಳನ್ನು ನಿಷೇಧಿಸಲಾಗುವುದು ಎಂದು ಭರವಸೆ ಕೂಡ ನೀಡಿದೆ.

ವಿಶ್ವ ಹಿಂದೂ ಪರಿಷತ್ ಕಾಂಗ್ರೆಸ್ಗೆ ಸವಾಲು :
ನೀವು ಬಜರಂಗದಳವನ್ನು ಭಯೋತ್ಪಾದನೆ ಚಟುವಟಿಕೆಗಳಲ್ಲಿ ತೊಡಗಿರುವ ಪಿಎಫ್ಐಗೆ ಹೋಲಿಸಿದ್ದೀರಿ. ಅಷ್ಟೇ ಅಲ್ಲದೆ ಬಜರಂಗದಳವನ್ನು ನಿಷೇಧಿಸುವುದಾಗಿ ಘೋಷಿಸಿದ್ದೀರಿ.
ಪಿಎಫ್ಐನಂತೆ ಬಜರಂಗದಳ ಯಾವ ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ ಎಂಬುದನ್ನು ನೀವು ಸಾಬೀತು ಪಡಿಸಬೇಕು ಎಂದು ಕಾಂಗ್ರೆಸ್ಗೆ ವಿಶ್ವ ಹಿಂದೂ ಪರಿಷತ್ (Vishwa Hindu Parishad to Congress) ಸವಾಲು ಹಾಕಿದೆ.
ಇದನ್ನೂ ಓದಿ : https://vijayatimes.com/gt-vs-srh-ipl-2023/
ಜಾತಿ ಮತ್ತು ಧರ್ಮದ ಆಧಾರದ ಮೇಲೆ ಸಮಾಜದಲ್ಲಿ ದ್ವೇಷ ಹರಡುವ ಆರೋಪ ಹೊತ್ತಿರುವ ಬಜರಂಗದಳ ಮತ್ತು ಪಿಎಫ್ಐನಂತಹ ಗುಂಪುಗಳನ್ನು ನಿಷೇಧಿಸುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿತ್ತು.
ಆದರೆ, ಬಜರಂಗದಳವನ್ನು ಪಿಎಫ್ಐ, ಸಿಮಿಯಂತಹ ಕಾನೂನುಬಾಹಿರ ಸಂಘಟನೆಗಳಿಗೆ ಹೋಲಿಸುವುದು ಮಾನಹಾನಿಕರವಾಗಿದೆ ಎಂದು ವಿಎಚ್ಪಿ ಪರ ವಕೀಲರು ನೋಟಿಸ್ನಲ್ಲಿ ದೂರಿದ್ದರು, ಆದರೆ ಬಗ್ಗೆ ಕಾಂಗ್ರೆಸ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
- ರಶ್ಮಿತಾ ಅನೀಶ್