- ಪ್ರಧಾನಿ ಮೋದಿಯಿಂದಾಗಿ ಭಾರತಕ್ಕೆ ಎಲ್ಲರೂ ವೈರಿಗಳು
- ಹೊಸಬಾಳೆ ಹೇಳಿಕೆಗೆ ಖರ್ಗೆ ತಿರುಗೇಟು (Mallikarjun Kharge slams)
- ಸಂವಿಧಾನದಿಂದ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಪದಗಳನ್ನು ತೆಗೆದುಹಾಕಲು ಯಾರಿಂದಲೂ ಸಾಧ್ಯವಿಲ್ಲ
Hyderabad: ಬಿಜೆಪಿ(BJP) ಮತ್ತು ಕಾಂಗ್ರೆಸ್(Congress) ಮುಖಂಡರ ನಡುವಿನ ಹಗ್ಗಜಗ್ಗಾಟ ಜೋರಾಗಿದ್ದು ಸಂವಿಧಾನದಿಂದ ‘ಜಾತ್ಯತೀತ’(Secular) ಮತ್ತು ‘ಸಮಾಜವಾದಿ’(Socialist) ಪದಗಳನ್ನು ತೆಗೆದುಹಾಕಲು
ಯಾವುದೇ ನಾಯಕನಿಗೆ ಸಾಧ್ಯವಿಲ್ಲ ಎಂದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ(RSS) ಎಐಸಿಸಿ ಅಧ್ಯಕ್ಷ(AICC President) ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಸವಾಲು ಹಾಕಿದರು.
ಶುಕ್ರವಾರ ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ,
ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿರುವುದರ ಕೀರ್ತಿ ಕಾರ್ಯಕರ್ತರ ಶ್ರಮಕ್ಕೆ ಸಲ್ಲುತ್ತದೆ. ಕೆಸಿಆರ್‌ರಂತಹವರನ್ನು(KCR) ಸೋಲಿಸಿ,

ನೀವು ರಾಜ್ಯದಲ್ಲಿ ಕಾಂಗ್ರೆಸ್‌ನ ಬಲವಾದ ಸರ್ಕಾರವನ್ನು(Govt) ಸ್ಥಾಪಿಸಿದ್ದೀರಿ ಎಂದು ಕಾರ್ಯಕರ್ತರನ್ನು ಕೊಂಡಾಡಿದ್ದಾರೆ.
ಕೇಂದ್ರ ಸರ್ಕಾರದ(Central Govt) ವಿದೇಶಾಂಗ ನೀತಿಯನ್ನು(Foreign policy) ಟೀಕಿಸಿದ ಖರ್ಗೆ, ಚೀನಾ(China), ಪಾಕಿಸ್ತಾನ(Pakistan), ಮತ್ತು ಈಗ ನೇಪಾಳ(Nepal) ಕೂಡ ಭಾರತದಿಂದ(India) ದೂರವಾಗುತ್ತಿದೆ.
ಮೋದಿ(Modi) ಕೇವಲ ದೊಡ್ಡದಾಗಿ ಮಾತನಾಡುತ್ತಾರೆ, ಆದರೆ ಕಾರ್ಯವಿಲ್ಲ. ಇಂದಿರಾ ಗಾಂಧಿ(Indira Gandhi) ಅವರಿಗೆ ಅಮೆರಿಕದ ಭಯವಿರಲಿಲ್ಲ.
ಧೈರ್ಯದಿಂದ ಪಾಕಿಸ್ತಾನವನ್ನು ಎರಡು ಭಾಗವಾಗಿಸಿದರು. ಕಾಂಗ್ರೆಸ್‌ಗೆ ಯಾವುದೇ ಬಾಹ್ಯ ಶಕ್ತಿಯ(External power) ಭಯವಿಲ್ಲ ಎಂದು ಒತ್ತಿಹೇಳಿದರು.
ನಾವು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧರಿದ್ದೇವೆ, ಆದರೆ ಬಿಜೆಪಿ-ಆರ್‌ಎಸ್‌ಎಸ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ(freedom struggle) ಯಾವ ಕೊಡುಗೆಯನ್ನೂ ನೀಡಿಲ್ಲ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿಯವರನ್ನು(PM Narendra Modi) ಗುರಿಯಾಗಿಸಿಕೊಂಡ ಖರ್ಗೆ, ಪ್ರತಿಯೊಬ್ಬರಿಗೆ 15 ಲಕ್ಷ ರೂ., ವರ್ಷಕ್ಕೆ ಎರಡು ಕೋಟಿ ಉದ್ಯೋಗ, ರೈತರ ಆದಾಯ (Farmers’ income) ದ್ವಿಗುಣಗೊಳಿಸುವ ಮೋದಿ ಭರವಸೆಗಳು ಕೇವಲ ಸುಳ್ಳುಗಳಾಗಿವೆ ಎಂದು ಆರೋಪಿಸಿದ ಅವರು,
ಬಿಜೆಪಿ ಸಾರ್ವಜನಿಕರಿಗೆ(public) ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದೆ. ಹೈದರಾಬಾದ್‌ನಲ್ಲಿ ಸ್ಥಾಪಿಸಿದ 50 ಸಾರ್ವಜನಿಕ ಸಂಸ್ಥೆಗಳು(Public institutions) ಮತ್ತು ಕಾರ್ಖಾನೆಗಳು(Factories) ಕಾಂಗ್ರೆಸ್ ಸರ್ಕಾರದ ಕೊಡುಗೆ.
ಬಿಜೆಪಿ ಯಾವುದೇ ಕೊಡುಗೆ ನೀಡಿಲ್ಲ ಎಂದು ಕಿಡಿಕಾರಿದ್ದಾರೆ.ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ(Dattatreya Hosabale ) ಅವರ ಜಾತ್ಯತೀತ ಮತ್ತು ಸಮಾಜವಾದಿ ಪದಗಳನ್ನು ಸಂವಿಧಾನದಿಂದ(Constitution) ತೆಗೆದುಹಾಕಬೇಕು ಎಂಬ ಹೇಳಿಕೆಗೆ ತಿರುಗೇಟು ನೀಡಿದ ಖರ್ಗೆ,
ಇದನ್ನು ಓದಿ : ಆದಾಯ ಮೀರಿ ಅಕ್ರಮ ಆಸ್ತಿ ಗಳಿಸಿದ ಆರೋಪ: ಕೆಎಸ್ ಈಶ್ವರಪ್ಪ ಕುಟುಂಬಕ್ಕೆ ಎದುರಾಯ್ತು ಹೊಸ ಸಂಕಷ್ಟ, ಸೊಸೆ ಮಗನ ವಿರುದ್ಧ FIR ದಾಖಲು
ಬಿಜೆಪಿಯ ಸ್ವಂತ ಸಂವಿಧಾನದಲ್ಲಿ ಈ ಪದಗಳಿವೆ. ಮೋದಿ ಮತ್ತು ಶಾ(Shah) ಇವುಗಳನ್ನು ದ್ವೇಷಿಸುತ್ತಿದ್ದರೆ, (Mallikarjun Kharge slams) ತಮ್ಮ ಪಕ್ಷದ ಸಂವಿಧಾನದಿಂದ ಏಕೆ ತೆಗೆಯಲಿಲ್ಲ? ಎಂದು ಪ್ರಶ್ನಿಸಿದ್ದಾರೆ.