download app

FOLLOW US ON >

Tuesday, January 25, 2022
English English Kannada Kannada

ಪಾದಯಾತ್ರೆ ನಿಲ್ಲಿಸಬೇಡಿ – ಮಲ್ಲಿಕಾರ್ಜುನ ಖರ್ಗೆ

ಉತ್ತಮ ಯೋಜನೆಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಎಂ.ಬಿ. ಪಾಟಿಲ್‌ ರೂಪ ಕೊಟ್ಟಿದ್ದರು. ಡಿ.ಕೆ. ಶಿವಕುಮಾರ್‌(DK Shivakumar) ಅವರು ಜಲ ಸಂಪನ್ಮೂಲ ಸಚಿವರಾದಾಗ ಪರಿಷ್ಕೃತ ಡಿಪಿಆರ್‌ನ್ನು ಕೇಂದ್ರಕ್ಕೆ ಕಳುಹಿಸಿದ್ದಾರೆ. ಈ ಯೋಜನೆ ಜಾರಿಯಾದರೆ ಬೆಂಗಳೂರಿನ ನೀರಿನ ಸಮಸ್ಯೆ ನೀಗುತ್ತದೆ ಎಂದರು.

ಬೆಂಗಳೂರು ಜ 10 :  ಪಾದಯಾತ್ರೆಗೆ ಎಷ್ಷೇ ಅಡ್ಡಿ ಬಂದರೂ ಯಾವುದೇ ಕಾರಣಕ್ಕೂ ಪಾದಯಾತ್ರೆಯನ್ನು ನಿಲ್ಲಿಸಬೇಡಿ. ಪಾದಯಾತ್ರೆಯನ್ನು ಉದ್ದೇಶಪೂರ್ವಕವಾಗಿ ತಡೆಯಲು ಬಿಜೆಪಿ ಮತ್ತು ಜೆಡಿಎಸ್‌ ಯತ್ನಿಸುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.  ಪಾದಯಾತ್ರೆ(Padayatra) ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಜನೆಯಿಂದ ಬೆಂಗಳೂರಿಗೆ(Bengaluru) ಹಾಗೂ ಸುಮಾರು ಹಳ್ಳಿಗಳಿಗೆ 62 ಟಿಎಂಸಿ ಕುಡಿಯುವ ನೀರು(Drinking Water) ಸಿಗುತ್ತದೆ. ಜತೆಗೆ 400 ಮೆ.ವ್ಯಾ. ವಿದ್ಯುತ್‌ ಉತ್ಪಾದನೆ ಮಾಡಬಹುದು. ಜತೆಗೆ ತಮಿಳುನಾಡಿನ ಪಾಲಿನ ನೀರನ್ನು ಎಲ್ಲಾ ಕಾಲದಲ್ಲೂ ಬಿಡಲು ಸಹ ನೆರವಾಗುತ್ತದೆ. ಇಂತಹ ಉತ್ತಮ ಯೋಜನೆಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಎಂ.ಬಿ. ಪಾಟಿಲ್‌ ರೂಪ ಕೊಟ್ಟಿದ್ದರು. ಡಿ.ಕೆ. ಶಿವಕುಮಾರ್‌(DK Shivakumar) ಅವರು ಜಲ ಸಂಪನ್ಮೂಲ ಸಚಿವರಾದಾಗ ಪರಿಷ್ಕೃತ ಡಿಪಿಆರ್‌ನ್ನು ಕೇಂದ್ರಕ್ಕೆ ಕಳುಹಿಸಿದ್ದಾರೆ. ಈ ಯೋಜನೆ ಜಾರಿಯಾದರೆ ಬೆಂಗಳೂರಿನ ನೀರಿನ ಸಮಸ್ಯೆ ನೀಗುತ್ತದೆ ಎಂದರು.

ಪಾದಯಾತ್ರೆ ವಿಫಲಗೊಳಿಸಿ ಕಾಂಗ್ರೆಸ್ಸಿಗೆ ಶ್ರೇಯಸ್ಸು ಧಕ್ಕದಂತೆ ಮಾಡಲು ಬಿಜೆಪಿ, ಜೆಡಿಎಸ್‌, ಇನ್ನಿತರರು ಯತ್ನಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಈ ಹೋರಾಟ ನಿಲ್ಲಬಾರದು. ಅಂತಿಮ ಜಯ ಸಿಗುವವರೆಗೂ ಹೋರಾಟ ಮುಂದುವರೆಯಬೇಕು ಎಂದು ಕರೆ ನೀಡಿದರು.

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp

Submit Your Article