- ಹಿಂಬಾಗಿಲಿನಿಂದ ಎನ್‌ಆರ್‌ಸಿಯ ಅನುಷ್ಠಾನಕ್ಕೆ ಚುನಾವಣಾ ಆಯೋಗ ಯತ್ನ
- ಚುನಾವಣಾ ಆಯೋಗ ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿದೆ (Mamata Banerjee accuses BJP)
- ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಹಿಂಬಾಗಿಲಿನಿಂದ ಅನುಷ್ಠಾನಗೊಳಿಸುವ ಪ್ರಯತ್ನ ಬೇಸರ ಮೂಡಿಸಿದೆ
Kolkata: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ಭಾರತೀಯ ಚುನಾವಣಾ ಆಯೋಗದ (ಇಸಿಐ) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು,
ಮತದಾರರ ಪಟ್ಟಿ (Electoral Roll) ಪರಿಷ್ಕರಣೆಗೆ ಅದರ ಇತ್ತೀಚಿನ ಮಾರ್ಗಸೂಚಿಗಳು (Guidelines) ಪ್ರಜಾಪ್ರಭುತ್ವ ವಿರೋಧಿ ಮಾತ್ರವಲ್ಲ,
ದೇಶಾದ್ಯಂತ ಎನ್‌ಆರ್‌ಸಿ (NRC) ತರಹದ ನೀತಿಗಳನ್ನು ಜಾರಿಗೆ ತರುವ ರಹಸ್ಯ ಪ್ರಯತ್ನವೂ (Covert attempt) ಆಗಿದೆ ಎಂದು ಆರೋಪಿಸಿದ್ದಾರೆ.
ಆಯೋಗವು (Commission) ಬದಲಾವಣೆಗಳು ಪ್ರಸ್ತುತ ಬಿಹಾರಕ್ಕೆ ಎಂದು ಹೇಳಿಕೊಂಡರೂ, ಶೀಘ್ರದಲ್ಲೇ ಅವುಗಳನ್ನು ಎಲ್ಲಾ ರಾಜ್ಯಗಳಿಗೆ (The States) ವಿಸ್ತರಿಸಲಾಗುವುದು,
ವಿಶೇಷವಾಗಿ ಪಶ್ಚಿಮ ಬಂಗಾಳ (West Bengal) ಮತ್ತು ಅದರ ವಲಸೆ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಎಂದು ಬ್ಯಾನರ್ಜಿ ಹೇಳಿದರು.
ಅವರು ಪೋಷಕರ ಜನನ (Birth of parents) ಪ್ರಮಾಣಪತ್ರಗಳನ್ನು ಕೇಳುತ್ತಿದ್ದಾರೆ. ಆದರೆ ಬಡವರು ಆ ದಾಖಲೆಗಳನ್ನು ಎಲ್ಲಿ ಪಡೆಯುತ್ತಾರೆ?
ಯುವ ಪೀಳಿಗೆಗೆ (Younger generation) ಇನ್ನು ಮುಂದೆ ಮತದಾನದ ಹಕ್ಕಿಲ್ಲವೇ? ಇದು NRC ಯ ವೇಷಧಾರಿ ರೂಪವೇ? ಎಂದು ಅವರು ಪ್ರಶ್ನಿಸಿದರು.
ಮತದಾರರ ಪಟ್ಟಿಗಳ (Electoral Rolls) ವಿಶೇಷ ತೀವ್ರ ಪರಿಷ್ಕರಣೆ ಹೆಸರಲ್ಲಿ 1987 ಜುಲೈ ಹಾಗೂ 2004 ಡಿಸೆಂಬರ್ ನಡುವೆ ಜನಿಸಿದ ಮತದಾರರನ್ನು ಪ್ರತ್ಯೇಕಿಸುತ್ತಿರುವುದಕ್ಕೆ

ಹಾಗೂ ಅವರ ಪೌರತ್ವಕ್ಕೆ ದಾಖಲೆರೂಪದ (citizenship) ಸಾಕ್ಷಗಳನ್ನು ಒದಗಿಸುವಂತೆ ಕೋರುತ್ತಿರುವುದಕ್ಕೆ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಚುನಾವಣಾ ಆಯೋಗವನ್ನು
ಗುರುವಾರ ತರಾಟೆಗೆ ತೆಗೆದುಕೊಂಡಿದ್ದಾರೆ. ಚುನಾವಣಾ ಆಯೋಗ ಬಿಜೆಪಿಯ (BJP) ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಆರೋಪಿಸಿದ ಅವರು,
ಈ ಕ್ರಮ ರಾಷ್ಟ್ರೀಯ ಪೌರತ್ವ (National citizenship) ನೋಂದಣಿಯನ್ನು ಹಿಂಬಾಗಿಲಿನಿಂದ ಅನುಷ್ಠಾನಗೊಳಿಸುವ (Implementing) ಪ್ರಯತ್ನವೇ ಎಂದು ಕೇಳಿದ್ದಾರೆ.
ಇನ್ನು ಪೂರ್ಬ ಮೇಧಿನಪುರದ ಕರಾವಳಿ (East Medinipur Coast) ಪಟ್ಟಣವಾದ ದಿಘಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ತಾನು ಅತ್ಯಂತ ಕಳವಳಕಾರಿ ವಿಚಾರದ (Concern) ಬಗ್ಗೆ ತಿಳಿಸಲು ಈ ಪತ್ರಿಕಾಗೋಷ್ಠಿ ಕರೆದಿದ್ದೇನೆ ಎಂದಿದ್ದಾರೆ.
ಈಗಾಗಲೇ ನಾನು ಚುನಾವಣಾ ಆಯೋಗದಿಂದ ಎರಡು ಪತ್ರಗಳನ್ನು (Two letters) ಸ್ವೀಕರಿಸಿದ್ದೇನೆ. ಪ್ರತಿ ಪತ್ರ 25-30 ಪುಟಗಳನ್ನು ಒಳಗೊಂಡಿದೆ.
ನನಗೆ ಆ ಪತ್ರಗಳನ್ನು ಇದುವರೆಗೆ ವಿವರವಾಗಿ ಓದಲು ಸಾಧ್ಯವಾಗಿಲ್ಲ. ಆದರೆ, ಮೇಲ್ನೋಟಕ್ಕೆ ಅರ್ಥ (First glance) ಮಾಡಿಕೊಂಡಿದ್ದೇನೆ.
ಅದರ ಪ್ರಕಾರ ಚುನಾವಣಾ ಆಯೋಗ (Election Commission) ಈಗ 1987 ಜುಲೈ 1ರಿಂದ 2004 ಡಿಸೆಂಬರ್ 2ರ ನಡುವೆ ಜನಿಸಿದ ಮತದಾರರಿಂದ ಘೋಷಣಾ ಪತ್ರವನ್ನು ಕೋರಿದೆ ಎಂದಿದ್ದಾರೆ.
ಚುನಾವಣಾ ಆಯೋಗದ ಈ ನಡೆ ಅಥವಾ ಈ ದಿನಾಂಕಗಳನ್ನು ಆಯ್ಕೆ ಮಾಡುವ ಹಿಂದಿರುವ ತಾರ್ಕಿಕತೆಯ (Reasoning behind) ಹಿಂದಿನ ಕಾರಣ ನನಗೆ ಇದುವರೆಗೆ ಅರ್ಥ ಆಗಿಲ್ಲ.
ಇದನ್ನು ಓದಿ : ನಂದಿನಿ ಹಾಲಿನ ಪ್ಯಾಕಿಂಗ್ ಗೆ ಇನ್ಮುಂದೆ ಹೊಸ ರೂಪ: ಮೆಕ್ಕೆಜೋಳದಲ್ಲಿ ತಯಾರಾಗಲಿದೆ ಹಾಲಿನ ಪ್ಯಾಕೆಟ್
ಅವರು ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಹಿಂಬಾಗಿಲಿನ ಮೂಲಕ ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತಿದ್ದಾರೆಯೇ (Mamata Banerjee accuses BJP)
ಎಂಬ ಬಗ್ಗೆ ನಾನು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೋರುತ್ತೇನೆ ಎಂದು ಅವರು ಹೇಳಿದ್ದಾರೆ.