ಪಶ್ಚಿಮ ಬಂಗಾಳದ(West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಅವರು ಜುಲೈ 12, ಮಂಗಳವಾರ ಡಾರ್ಜಿಲಿಂಗ್‌ನ(Darjeeling) ಸ್ಟಾಲ್ ನಲ್ಲಿ ಪುಚ್ಕಾ(Puchka) ತಯಾರಿಸಿ ಬಡಿಸಲು ಪ್ರಾರಂಭಿಸಿದನ್ನು ಕಂಡ ಸ್ಥಳೀಯರು ಅಶ್ಚರ್ಯಚಕಿತರಾಗಿದ್ದಾರೆ. ಗೂರ್ಖಾಲ್ಯಾಂಡ್ ಪ್ರಾದೇಶಿಕ ಆಡಳಿತದ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೂರು ದಿನಗಳ ಕಾಲ ಗಿರಿಧಾಮದಲ್ಲಿ ವಾಸ್ತವ್ಯ ಹೂಡಿದ್ದಾರೆ.

ಮಮತಾ ಬ್ಯಾನರ್ಜಿ ಅವರು ಪುಚ್ಚ್ಕಾ ತಯಾರಿಸಿ ಮಕ್ಕಳಿಗೆ ಹಾಗೂ ನೆರೆದಿದ್ದವರಿಗೆ ಬಡಿಸುವ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆದಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ವಿಡಿಯೋದಲ್ಲಿ ಮಮತಾ ಬ್ಯಾನರ್ಜಿ ಡಾರ್ಜಿಲಿಂಗ್‌ನ ಮಾಲ್ ರೋಡ್‌ನಲ್ಲಿರುವ ಪುಚ್ಕಾ ಸ್ಟಾಲ್‌ನಲ್ಲಿ ನಿಂತಿರುವುದು ಕಂಡುಬಂದಿದೆ. ಪುಚ್ಕಾ ಮಾಡಿ ಅಲ್ಲಿ ನಿಂತಿದ್ದವರಿಗೆ ಬಡಿಸಿದ್ದಾರೆ. ಮುಖ್ಯಮಂತ್ರಿಗಳು ಬಡಿಸಿದ ಬೀದಿ ಬದಿಯ ತಿಂಡಿಯನ್ನು ಮಕ್ಕಳು ಸವಿಯುವುದನ್ನು ವೀಡಿಯೊದಲ್ಲಿ ಕಾಣಬಹುದು.
https://www.facebook.com/watch/?v=1962302180621937
ಡಾರ್ಜಿಲಿಂಗ್‌ಗೆ ಭೇಟಿ ನೀಡಿದಾಗ, ಮಮತಾ ಬ್ಯಾನರ್ಜಿ ಸ್ಥಳೀಯರನ್ನು ಮೊಮೊ ಸ್ಟಾಲ್‌ಗೆ ಕರೆದೊಯ್ದರು. ಅವರು ಮೊಮೊಗಳನ್ನು ತಯಾರಿಸುವಲ್ಲಿ ಮಾರಾಟಗಾರರಿಗೆ ಸಹಾಯ ಮಾಡಲು ಮುಂದಾದರು. ಮಮತಾ ಬ್ಯಾನರ್ಜಿ ಅವರು ಮೊಮೊಗಾಗಿ ಹಿಟ್ಟಿನಲ್ಲಿ ಹೂರಣವನ್ನು ಹಾಕುವ ಮತ್ತು ಅದನ್ನು ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗಿದೆ.