I am ready to resign for the good of the people; Declaration by Mamata Banerjee.
Kolkata: ರಾಜ್ಯದ ಜನರ ಹಿತಕ್ಕಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ನಾನು ರಾಜೀನಾಮೆ ನೀಡಲು ಸಿದ್ದ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamatha Banerjee) ಅವರು ಘೋಷಿಸಿದ್ದಾರೆ.
ಕೋಲ್ಕತ್ತಾದ ಆರ್ಜಿ ಕರ್ (Kolkata Doctor Murder Case) ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ವೈದ್ಯರೊಂದಿಗೆ ಮಾತುಕತೆ ನಡೆಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ ಮಮತಾ ಬ್ಯಾನರ್ಜಿ ಅವರು, ಹೆಚ್ಚಿನ ವೈದ್ಯರು ಸಭೆಯಲ್ಲಿ ಭಾಗಿಯಾಗಲು ಆಸಕ್ತಿ ಹೊಂದಿದ್ದಾರೆಂದು ನನಗೆ ತಿಳಿದಿದೆ.
ಆದರೆ ಬೆರಳೆಣಿಕೆಯಷ್ಟು ಜನರು ಸಮಸ್ಯೆಯನ್ನು ಸೃಷ್ಟಿಸಲು ಬಯಸಿದ್ದಾರೆ ಎಂಬುದನ್ನು ನಾವು ತಿಳಿದುಕೊಂಡಿದ್ದೇವೆ. ಈ ಪ್ರತಿಭಟನೆಗಳು ರಾಜಕೀಯ ಪ್ರೇರಿತವಾಗಿದ್ದು, ಎಡಪಕ್ಷಗಳ ಬೆಂಬಲವಿದೆ ಆರೋಪಿಸಿದ್ದಾರೆ.
ಸಾಮಾನ್ಯ ಜನರ ನ್ಯಾಯಕ್ಕಾಗಿ ನಾನು ಮುಖ್ಯಮಂತ್ರಿ ಹುದ್ದೆಯನ್ನು ತ್ಯಜಿಸಲು ಸಹ ಸಿದ್ಧನಿದ್ದೇನೆ. ಆದರೆ ಅವರಿಗೆ ನ್ಯಾಯ ಬೇಕಾಗಿಲ್ಲ. ಅವರಿಗೆ ಕೇವಲ ಕುರ್ಚಿ ಬೇಕು. ಸೆಪ್ಟೆಂಬರ್ (September) 10ರ ಸಂಜೆಯೊಳಗೆ ಕೆಲಸಕ್ಕೆ ಮರಳುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದರೂ ವೈದ್ಯರು ಮುಷ್ಕರ ಮುಂದುವರಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ತೃಣಮೂಲ ಕಾಂಗ್ರೆಸ್ (Congress) ಸರ್ಕಾರ ಮತ್ತು ಧರಣಿ ನಿರತ ವೈದ್ಯರ ನಡುವಿನ ಬಿಕ್ಕಟ್ಟು ಮುಂದುವರಿದಿದ್ದು, ಸತತ ಮೂರನೇ ದಿನವೂ ಯಾವುದೇ ಮಾತುಕತೆ ನಡೆಯದೆ ಮುಖ್ಯಮಂತ್ರಿಗಳ ಈ ಹೇಳಿಕೆ ಹೊರಬಿದ್ದಿದೆ. ಪ್ರತಿಭಟನಾನಿರತ ವೈದ್ಯರನ್ನು ಭೇಟಿ ಮಾಡಲು ರಾಜ್ಯ ಸಚಿವಾಲಯದಲ್ಲಿ ಎರಡು ಗಂಟೆಗಳ ಕಾಲ ಕಾದಿದ್ದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ವೈದ್ಯರು ಮುಖ್ಯಮಂತ್ರಿಗಳೊಂದಿಗಿನ ಸಭೆಯನ್ನು ನೇರಪ್ರಸಾರ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಆದರೆ ವೈದ್ಯರ ಈ ಬೇಡಿಕೆಯನ್ನು ಸಿಎಂ ಮಮತಾ ಬ್ಯಾನರ್ಜಿ ತಿರಸ್ಕರಿಸಿದ್ದು, ಪಾರದರ್ಶಕತೆ ಮತ್ತು ನಿಖರವಾದ ದಾಖಲಾತಿಗಾಗಿ ಸಭೆಯ ವಿಡಿಯೋ ದಾಖಲಿಸಲು ನಾವು ಸಂಪೂರ್ಣ ಸಹಮತ ಹೊಂದಿದ್ದೇವೆ. ಸುಪ್ರೀಂಕೋರ್ಟ್ನ (Supreme Court) ಒಪ್ಪಿಗೆಯೊಂದಿಗೆ ರೆಕಾರ್ಡಿಂಗ್ ಅನ್ನು ಹಂಚಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದ್ದಾರೆ.
Mamata Banerjee Resign News LIVE
Kolkata: West Bengal Chief Minister Mamata Banerjee has announced that she is ready to resign as chief minister for the sake of the people of the state.
Mamata Banerjee said that her government is committed to holding talks with the doctors who are protesting against the rape and murder of a trainee doctor at the RG Kar (Kolkata Doctor Murder Case) Medical College and Hospital in Kolkata, and I know that many doctors are interested in participating in the meeting.
But we have come to know that a handful of people want to create a problem. He alleged that these protests were politically motivated and had the support of the Left.
I am even ready to give up the post of Chief Minister for the justice of common people. But they don’t want justice. They just need a chair. The doctors have complained that despite the Supreme Court’s directive to return to work by the evening of September 10, the doctors have continued their strike.
The crisis between the Trinamool Congress (Congress) government and the doctors who are on strike continues, and this statement of the Chief Minister has come out without any talks for the third consecutive day. Despite waiting for two hours at the state ministry to see the protesting doctor CM Mamata Banerjee said that no response has been received from them. Doctors have demanded that the meeting with the Chief Minister should be telecast live.
But CM Mamata Banerjee rejected this demand of the doctors and we fully agree to video recording the meeting for transparency and accurate documentation. He said that we are ready to share the recording with the consent of the Supreme Court.