Kolkata : ಭಾರತೀಯ ಜನತಾ ಪಕ್ಷವು (BJP) ರಾಹುಲ್ ಗಾಂಧಿಯನ್ನು (Rahul Gandhi) ನಾಯಕನಾಗಿ ಇರಿಸಿಕೊಳ್ಳಲು ಬಯಸುತ್ತದೆ. ರಾಹುಲ್ ಗಾಂಧಿ ಪ್ರತಿಪಕ್ಷಗಳ ಮುಖವಾಗಿದ್ದರೆ, ಯಾರೂ ಪ್ರಧಾನಿ ಮೋದಿಯನ್ನು (Narendra Modi) ಟೀಕಿಸಲು ಸಾಧ್ಯವಾಗುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ(mamata banerjee statement) ಮಮತಾ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರು ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದ ಪಕ್ಷದ ಆಂತರಿಕ
ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರ ಅತಿದೊಡ್ಡ ಟಿಆರ್‌ಪಿ (TRP),
ರಾಹುಲ್‌ಗಾಂಧಿ ಪ್ರತಿಪಕ್ಷಗಳ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಷ್ಟು ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಹೆಚ್ಚುತ್ತದೆ.
ಬಿಜೆಪಿಗೆ ಅನೇಕ ವಿಷಯಗಳಲ್ಲಿ ರಾಹುಲ್‌ಗಾಂಧಿ ಆಹಾರವಾಗುತ್ತಾರೆ. ರಾಹುಲ್‌ಗಾಂಧಿ ಅವರನ್ನು ಬಳಸಿಕೊಂಡೇ ಬಿಜೆಪಿ ಪ್ರಚಾರ ನಡೆಸುತ್ತದೆ. ಇನ್ನೊಂದೆಡೆ ರಾಹುಲ್‌ಗಾಂಧಿ ಪ್ರತಿಪಕ್ಷಗಳ ಮುಖವಾಗಿದ್ದರೆ,
ಇದನ್ನೂ ಓದಿ : https://vijayatimes.com/eshwarappa-new-controversy/
ಬಿಜೆಪಿಗೆ ಅದು ಹೆಚ್ಚು ಅನುಕೂಲವಾಗಲಿದೆ ಎಂದು ಟಿಎಂಸಿ (TMC) ಕಾರ್ಯಕರ್ತರಿಗೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ (Mamata Banerjee) ಅವರು ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದ ಪಕ್ಷದ
ಆಂತರಿಕ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು,
ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರ ಅತಿದೊಡ್ಡ ಟಿಆರ್‌ಪಿ. ರಾಹುಲ್‌ಗಾಂಧಿ ಪ್ರತಿಪಕ್ಷಗಳ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಷ್ಟು ಪ್ರಧಾನಿ ನರೇಂದ್ರ ಮೋದಿ (mamata banerjee statement) ಅವರ ಜನಪ್ರಿಯತೆ ಹೆಚ್ಚುತ್ತದೆ.
ಬಿಜೆಪಿಗೆ ಅನೇಕ ವಿಷಯಗಳಲ್ಲಿ ರಾಹುಲ್‌ಗಾಂಧಿ ಆಹಾರವಾಗುತ್ತಾರೆ.

ರಾಹುಲ್‌ಗಾಂಧಿ ಅವರನ್ನು ಬಳಸಿಕೊಂಡೇ ಬಿಜೆಪಿ ಪ್ರಚಾರ ನಡೆಸುತ್ತದೆ. ಇನ್ನೊಂದೆಡೆ ರಾಹುಲ್‌ಗಾಂಧಿ ಪ್ರತಿಪಕ್ಷಗಳ ಮುಖವಾಗಿದ್ದರೆ,
ಬಿಜೆಪಿಗೆ ಅದು ಹೆಚ್ಚು ಅನುಕೂಲವಾಗಲಿದೆ ಎಂದು ಟಿಎಂಸಿ ಕಾರ್ಯಕರ್ತರಿಗೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇನ್ನು ಸಂಸತ್ತು ಮುಕ್ತವಾಗಿರಬೇಕೆಂದು ನಾವು ಬಯಸುತ್ತೇವೆ.
ಅದಾನಿ ಸಮಸ್ಯೆ ಮತ್ತು ಎಲ್ಐಸಿ ವಿಷಯದ ಬಗ್ಗೆ ಮಾತುಕತೆ ನಡೆಸಬೇಕು. ಆದರೆ ಅದಾನಿ ವಿಚಾರದಲ್ಲಿ ಏಕೆ ಮಾತುಕತೆ ನಡೆಯುತ್ತಿಲ್ಲ?
ಎಲ್‌ಐಸಿ ಕುರಿತು ಏಕೆ ಮಾತುಕತೆ ನಡೆಯುತ್ತಿಲ್ಲ? ಗ್ಯಾಸ್ ಬೆಲೆಯ ಬಗ್ಗೆ ಏಕೆ ಚರ್ಚೆಯಾಗುತ್ತಿಲ್ಲ? ಇದೆಲ್ಲದರ ನಡುವೆ ಏಕರೂಪ ನಾಗರಿಕ ಸಂಹಿತೆ ಪ್ರತಿಯನ್ನು ಜಾರಿಗೆ ತರಲಾಗಿದೆ.
ಇದನ್ನೂ ಓದಿ : https://vijayatimes.com/drug-network-in-bangalore/
ನಾವು ಏಕರೂಪ ನಾಗರಿಕ ಸಂಹಿತೆಯನ್ನು ಒಪ್ಪುವುದಿಲ್ಲ ಮತ್ತು ಅದನ್ನು ಜಾರಿಗೆ ತರಲು ನಾವು ಅನುಮತಿಸುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಟಿಎಂಸಿ ಕಾರ್ಯಕರ್ತರಿಗೆ ಹೇಳಿದ್ದಾರೆ.
ಇತ್ತೀಚೆಗಷ್ಟೇ ಬ್ರಿಟನ್ ಪ್ರವಾಸದ ವೇಳೆ ರಾಹುಲ್ ಗಾಂಧಿ ಮಾಡಿದ ಟೀಕೆಗಳ ಕುರಿತು ಸಂಸತ್ತಿನಲ್ಲಿ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ತೃಣಮೂಲ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಈ ಹೇಳಿಕೆ ನೀಡಿದ್ದಾರೆ.
ಇನ್ನೊಂದೆಡೆ 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (Congress) ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ.
ನಾವು ಏಕಾಂಗಿಯಾಗಿ ಹೋರಾಟ ನಡೆಸುತ್ತೇವೆ. ಚುನಾವಣೆ ಪೂರ್ವ ಮೈತ್ರಿಗಳ ಬಗ್ಗೆ ನಾವು ಒಲವು ಹೊಂದಿಲ್ಲ ಎಂದು ಇತ್ತೀಚೆಗೆ ಮಮತಾ ಬ್ಯಾನರ್ಜಿ ಹೇಳಿದ್ದರು.