Viral news: ಚೀನಾದಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಹಣದಲ್ಲಿ ಲಾಟರಿ(Lottery) ಖರೀದಿಸಿದ್ದಾನೆ. ಅವನ ಅದೃಷ್ಟಕ್ಕೆ 12 ಕೋಟಿ ಲಾಟರಿ (man caught by wife) ಹೊಡೆದಿದೆ.
ಆದರೆ ಆತ ಆ ವಿಷಯವನ್ನು ತನ್ನ ಹೆಂಡತಿಯಿಂದಲೇ ಮುಚ್ಚಿಟ್ಟಿದ್ದಾನೆ. ಕೊನೆಗೆ ಪ್ರೇಯಸಿಗೆ ಪ್ಲ್ಯಾಟ್ ಕೊಡಿಸಲು ಹೋಗಿ ಹೆಂಡತಿಯ ಕೈಗೆ ಸಿಕ್ಕಿಬಿದ್ದು ಇದೀಗ ಲಾಟರಿ ಹಣವನ್ನು ಕಳೆದುಕೊಂಡಿದ್ದಾನೆ.

ಚೀನಾದ ಸೌತ್ ಚೀನಾ(South China) ಮಾರ್ನಿಂಗ್ ಪತ್ರಿಕೆ ವರದಿಯ ಪ್ರಕಾರ, ಝೌ ಎಂಬ ವ್ಯಕ್ತಿಯೊಬ್ಬನಿಗೆ ಎರಡು ವರ್ಷಗಳ ಹಿಂದೆಯೇ 12 ಕೋಟಿ ರೂಪಾಯಿಗಳ ಲಾಟರಿ (man caught by wife) ಹೊಡೆದಿದೆ.
ಆದರೆ ಆ ವಿಷಯವನ್ನು ಆತ ತನ್ನ ಹೆಂಡತಿಗೆ ತಿಳಿಸಿಲ್ಲ. 12 ಕೋಟಿ ಲಾಟರಿ ಹಣದಲ್ಲಿ ತೆರಿಗೆ ಕಡಿತವಾಗಿ ಸುಮಾರು 8 ಕೋಟಿ ರೂಪಾಯಿ ಝೌನ ಬ್ಯಾಂಕ್ ಖಾತೆಗೆ ಬಂದಿದೆ.
ತಾನೊಬ್ಬನೆ ಈ ಹಣವನ್ನು ಝೌ ಬಳಸಿಕೊಳ್ಳುತ್ತಿದ್ದ ಎನ್ನಲಾಗಿದೆ. ಈ ನಡುವೆ ಝೌ ತನಗೆ ಲಾಟರಿಯಿಂದ ಬಂದ 10 ಮಿಲಿಯನ್‌ಹಣದಲ್ಲಿ 2 ಮಿಲಿಯನ್‌ಹಣವನ್ನು ತನ್ನ ಸಹೋದರಿಗೆ ನೀಡಿದ್ದಾನೆ.
ಇದನ್ನೂ ಓದಿ: ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾದ ನಟ, ನಿರ್ದೇಶಕ ರಿಷಬ್ ಶೆಟ್ಟಿ…!
ಈ ಸಂಗತಿಯನ್ನು ಆತ ತನ್ನ ಹೆಂಡಿತಿಗೆ ಹೇಳಿಲ್ಲ. ಇದಾದ ನಂತರ 70000 ಯುವಾನ್ ಹಣವನ್ನು ತನ್ನ ಮಾಜಿ ಪ್ರೇಯಸಿಗೆ ಮನೆ ಖರೀದಿ ಮಾಡಲೆಂದು ಅವಳಿಗೆ ನೀಡಿದ್ದನು.
ತನ್ನ ಪತಿ ಯಾವುದೇ ಕೆಲಸ ಮಾಡದೇ ಬೇಕಾಬಿಟ್ಟಿ ಹಣ ಖರ್ಚು ಮಾಡುತ್ತಿರುವುದನ್ನು ಗಮನಿಸಿದ ಹೆಂಡತಿ ಲೀನ್‌ಗೆ ಕೊನೆಗೆ ಲಾಟರಿ ವಿಷಯದ ಜೊತೆಗೆ ಪ್ರೇಯಸಿಗೆ ಪ್ಲ್ಯಾಟ್(Flat) ಕೊಡಿಸಿರುವ ವಿಷಯವೂ ಗೊತ್ತಾಗಿದೆ.
ಪತಿಗೆ ಪಾಠ ಕಲಿಸುವ ಉದ್ದೇಶದಿಂದ, ಕೂಡಲೇ ನ್ಯಾಯಾಲಯದಲ್ಲಿ(Court) ಪ್ರಕರಣ ದಾಖಲಿಸಿ ಲೀನ್ ವಿಚ್ಛೇದನಕ್ಕೆ ಅರ್ಜಿಯನ್ನೂ(Divorce) ಸಲ್ಲಿಸಿದ್ದಳು.

ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಲೀನ್ ಪರವಾಗಿ ತೀರ್ಪು ನೀಡಿದೆ. ನ್ಯಾಯಾಲಯದ ತೀರ್ಪಿನ ಪ್ರಕಾರ,
ಲಾಟರಿ ಹಣದಲ್ಲಿ ಮೂರನೇ ಎರಡರಷ್ಟು ಹಣವನ್ನು ಪತ್ನಿಯಾದ ಲೀನ್‌ಗೆ ಪರಿಹಾರವಾಗಿ ನೀಡುವಂತೆ ಝೌ ಗೆ ಆದೇಶಿಸಿದೆ.
ಇದರೊಂದಿಗೆ ವಿಚ್ಚೇದನವನ್ನೂ ನೀಡಿದೆ. ಈ ಮೂಲಕ ಲಾಟರಿ ಟಿಕೆಟ್ ಅನ್ನು ಪತ್ನಿಯ ಹಣದಿಂದಲೇ ಖರೀದಿಸಿ, ಗೆದ್ದ ಹಣವನ್ನು ದೋಚುವ ಪ್ರಯತ್ನದಲ್ಲಿದ್ದ ಝೌ ಈಗ ಲಾಟರಿ ಹಣದ ಜೊತೆಗೆ ಹೆಂಡತಿಯನ್ನು ಕಳೆದುಕೊಂಡಿದ್ದಾನೆ.