Bengaluru : 71 ವರ್ಷದ ವ್ಯಕ್ತಿಯನ್ನು 1 ಕಿ.ಮೀ ಸ್ಕೂಟರ್‌ನಲ್ಲಿ ಎಳೆದುಕೊಂಡ ಹೋದ ಯುವಕನ ಉದ್ಧಟತನದ ವೀಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ (man dragged old man) ಭಾರಿ ವೈರಲ್ ಆಗಿದೆ.
ಮಂಗಳವಾರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಸ್ಕೂಟರ್‌ನಲ್ಲಿ ಬಂದ ಯುವಕನೊಬ್ಬ 71 ವರ್ಷದ ವ್ಯಕ್ತಿಯನ್ನು ಸುಮಾರು
1 ಕಿ.ಮೀ ವರೆಗೂ ರಸ್ತೆಯಲ್ಲಿ ಎಳೆದುಕೊಂಡು ಹೋಗಿರುವ ಘಟನೆ ಬಗ್ಗೆ ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
25 ವರ್ಷದ ಸ್ಕೂಟರ್ ಸವಾರ ಸಾಹಿಲ್ (Sahil) ಎಂದು ಗುರುತಿಸಲಾಗಿದ್ದು, ಸುದ್ದಿ ಸಂಸ್ಥೆ ANI ನೀಡಿರುವ ಮಾಹಿತಿ ಪ್ರಕಾರ,
ಹಿರಿಯ ವ್ಯಕ್ತಿಯ ಕಾರಿಗೆ ಬೈಕ್ ಸವಾರ ಸಾಹಿಲ್ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ.
ಇದನ್ನು ಪ್ರಶ್ನಿಸಲು ಹಿರಿಯ ವ್ಯಕ್ತಿ ತನ್ನ ಕಾರಿನಿಂದ ಹೊರಬಂದ ಕೂಡಲೇ ಸಾಹಿಲ್ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ.
ಓಡಿ ಹೋಗಲು ಯತ್ನಿಸಿದ ಸಾಹಿಲ್ ಸ್ಕೂಟರ್ (man dragged old man) ತುದಿಯನ್ನು ಭದ್ರವಾಗಿ ಹಿಡಿದ ಹಿರಿಯ ವ್ಯಕ್ತಿ ಮುತ್ತಪ್ಪ ಧಾವಿಸಿ,
ಆತ ತಪ್ಪಿಸಿಕೊಳ್ಳದಂತೆ ಬಲವಾಗಿ ಹಿಡಿದಿದ್ದಾರೆ. ಆದರೆ ಸ್ಕೂಟರ್ ಅನ್ನು ವೇಗವಾಗಿ ಚಲಾಯಿಸಿದ ಸಾಹಿಲ್, ಅವರಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ.
ಈ ಕಾರಣ ಸ್ಕೂಟರ್ ಸಮೇತ ವ್ಯಕ್ತಿಯನ್ನು ಎಳೆದೊಯ್ದ ಸಾಹಿಲ್, ನಗರದ ಮಾಗಡಿ ರಸ್ತೆಯಲ್ಲಿ (Magadi road) ಸುಮಾರು ಒಂದು ಕಿ.ಮೀ ವರೆಗೂ ಎಳೆದುಕೊಂಡು ವೇಗವಾಗಿ ಹೋಗಿದ್ದಾನೆ.
ಈ ಘಟನೆಯ ಭಯಾನಕ ದೃಶ್ಯಗಳನ್ನು ಮೊಬೈಲ್ ಕ್ಯಾಮರಾದಲ್ಲಿ ಸ್ಥಳೀಯರು ಸೆರೆಹಿಡಿದಿದ್ದಾರೆ.
Biker Dragged old man on Bengaluru : Viral Video
ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಕಾರು ಚಾಲಕ ಮುತ್ತಪ್ಪ ಧಾವಿಸಿ, ಅವನು ದುರಹಂಕಾರಿಯಾಗಿದ್ದನು, ನನ್ನ ಬೊಲೆರೋ(Bolero) ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ನಂತರ ನಿಲ್ಲಿಸದೆ ಓಡಿಹೋಗಲು ಪ್ರಯತ್ನಿಸಿದನು.
ನಾನು ಯಾವುದೇ ಕಾರಣಕ್ಕೂ ಆತ ತಪ್ಪಿಸಿಕೊಳ್ಳಬಾರದು ಎಂಬ ಕಾರಣಕ್ಕೆ ಅವನನ್ನು ಬಿಡಲು ಬಯಸಲಿಲ್ಲ! ಅವನು ತಪ್ಪಿಸಿಕೊಳ್ಳಲು ಯತ್ನಿಸಿದನು.
ನಾನು ಕೂಡಲೇ ಗಾಡಿಯ ಹಿಂಬದಿ ಹಿಡಿದೆ, ಅವನು ವೇಗವಾಗಿ ಸ್ಕೂಟರ್ ಅನ್ನು ಓಡಿಸಿಕೊಂಡೆ ಹೋದ.
ಇದನ್ನೂ ಓದಿ: https://vijayatimes.com/tejaswi-opened-emergency-exit/
ನನ್ನನ್ನು ರಸ್ತೆಯಲ್ಲಿ ಎಳೆದು ಹೋಗುವಾಗ, ಒಂದೆರಡು ಯುವಕರು ಅವನನ್ನು ಹಿಂಬಾಲಿಸಿ ಬಂದು,
ಸ್ಕೂಟರ್ ಅನ್ನು ಅಡಗಟ್ಟಿ, ಅವನನ್ನು ತಡೆದರು. ಒಂದೆರಡು ಆಟೋ ಚಾಲಕರು ಮತ್ತು ಬೈಕ್ ಚಾಲಕರು ಅವನನ್ನು ತಡೆದು ಪ್ರಶ್ನಿಸಿದ್ದಾರೆ ಎಂದು ಮುತ್ತಪ್ಪ(Muthappa) ಅವರು ಮಾಹಿತಿ ನೀಡಿದ್ದಾರೆ.
ಈ ಪ್ರಕರಣ ದಾಖಲಿಸಿಕೊಂಡಿರುವ ಬೆಂಗಳೂರು ಪೊಲೀಸರು ಸಾಹಿಲ್‌ನನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.