ಭುಬನೇಶ್ವರ್: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ವೃದ್ಧೆಯನ್ನು ಕೊಲೆ ಮಾಡಿ ಆಕೆ ರುಂಡವನ್ನು ಒಂದು ಕಿ.ಮೀ ದೂರ ನಡೆದುಕೊಂಡೇ ಕ್ರಮಿಸಿ ಪೊಲೀಸರಿಗೆ ಶರಣಾಗಿರುವ ಘಟನೆ ಒಡಿಶಾದ ಜಾಜಪುರ್ ಜಿಲ್ಲೆಯ ಛತಾರಾ ಗ್ರಾಮದಲ್ಲಿ ಸಂಭವಿಸಿದೆ.
ಆರೋಪಿ ಕಾರ್ತಿಕ್ ಕೇರಾಯ್, ತನ್ನ ಸಂಬಂಧಿಕನೊಬ್ಬನ ಸಾವಿಗೆ ಕಾರಣರಾದರೆಂದು ಆರೋಪಿಸಿ 30 ವರ್ಷದ ನಂದಿನಿ ಪೂರ್ತಿ ಎಂಬರನ್ನು ಕೊಲೆ ಮಾಡಿದ್ದಾನೆ. ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಸಂಬಂಧಿಕನ ಸಾವಿಗೆ ನಂದಿನಿಯವರೇ ಕಾರಣ ಎಂದು ಭಾವಿಸಿ ಆಕೆಯ ಕೊಲೆ ಮಾಡಿದ್ದಾನೆನ್ನಲಾಗಿದೆ.
ಮಹಿಳೆ ಮಾಟ ಮಂತ್ರಕ್ಕೆ ಹೆಚ್ಚು ಫೇಮಸ್ ಆಗಿದ್ದು, ಕೆಲ ದಿನಗಳ ಹಿಂದೆ ಆಕೆಯ ಭೇಟಿಗೆ ಕಾರ್ತಿಕ್ ತನ್ನ ಅನಾರೋಗ್ಯ ಪೀಡಿತ ಸಂಬಂಧಿಯೊಂದಿಗೆ ತೆರಳಿದ್ದರು. ರೋಗ ಗುಣಪಡಿಸುತ್ತೇನೆ ಎಂದು ಹೇಳಿದ್ದ ಮಹಿಳೆ ನೀಡಿದ ಔಷಧಿ ಸೇವಿಸಿದ ಕಾರ್ತಿ ಸಂಬಂಧಿ ಸಾವಿಗೀಡಾಗಿದ್ದಾನೆ. ಇದರಿಂದ ಬೇಸರಗೊಂಡ ಕಾರ್ತಿಕ್ ಈ ಕೃತ್ಯ ಎಸಗಿರಬಹುದು ಎನ್ನಲಾಗಿದೆ.
ನಾವು ಮಹಿಳೆಯ ಶವವನ್ನು ವಶಕ್ಕೆ ಪಡೆದಿದ್ದೇವೆ. ತನಿಖೆಯಾಗುತ್ತಿದೆ. ಆರೋಪಿಯನ್ನು ವಿಚಾರಣೆಗೊಳಪಡಿಸಿದ್ದೇವೆ ಎಂದು ಜಾಜಪುರ್ ರೋಡ್ ವಿಭಾಗದ ಉಪವಿಭಾಗ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.