Visit Channel

ಮನೆ ಮುಟ್ಟುಗೋಲಿಗೆ ಬಂದ ಬ್ಯಾಂಕ್ ಅಧಿಕಾರಿಗಳ ಕಣ್ಮುಂದೆ ಮಹಿಳೆ ಆತ್ಮಹತ್ಯೆ

BL14CANARABANK

ಪುತ್ತೂರು,ಫೆ.19 : ಅಡವಿಟ್ಟ ಮನೆಯ ಸಾಲ ತೀರಿಸಲಾಗದಾಗ ಅದರ  ಮುಟ್ಟುಗೋಲಿಗೆ ಬಂದ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳ  ಕಣ್ಣ ಮುಂದೆಯೇ ಮನೆ ಮಾಲಕಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮನ ಕಲಕುವ ಘಟನೆ ಪುತ್ತೂರಿನಲ್ಲಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹಾರಾಡಿ ರೈಲ್ವೆ ಗೇಟ್ ಬಳಿಯ ನಿವಾಸಿಗಳಾದ ರಘುವೀರ್ ಪ್ರಭು, ಪುತ್ತೂರಿನ ಕೆನರಾ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದರು. ಸಾಲ ತೀರಿಸಲಾಗದ್ದರಿಂದ ಮನೆ ಮುಟ್ಟುಗೋಲಿಗೆ ಬ್ಯಾಂಕ್ ಅಧಿಕಾರಿಗಳು ಆಗಮಿಸಿದ್ದರು.

ಇದರಿಂದಾಗಿ ಮಾನ ಮರ್ಯಾದೆಗೆ ಹೆದರಿದ ಹಾಗೂ ಸಾಲ ಮರುಪಾವತಿಸಲು ಅಶಕ್ತರಾಗಿದ್ದ ರಘುವೀರ್ ಪ್ರಭು ಅವರ ಪತ್ನಿ ಪ್ರಾರ್ಥನಾ ಪ್ರಭು ಅವರು, ಮನೆಯೊಳಗೆ ಹೋಗಿ ಚಿಲಕ ಹಾಕಿ ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಬ್ಯಾಂಕ್ ಅಧಿಕಾರಿಗಳ ಕಣ್ ಮುಂದೆಯೇ ಸಾವಿಗೀಡಾಗಿದ್ದಾರೆ. ನೇಣುಬಿಗಿದ ಸ್ಥಿತಿಯಲ್ಲಿದ್ದಂತ ಪ್ರಾರ್ಥನಾ ಪ್ರಭು ಅವರನ್ನು ಕೂಡಲೆ  ಪೊಲೀಸರು ಆಸ್ಪತ್ರೆಗೆ ಕರೆದೊಯ್ದರೂ ಅಚ್ಟರಲ್ಲೇ ಪ್ರಾರ್ಥನಾ ಪ್ರಭು ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ.

Latest News

Dakshina Kannada
ರಾಜ್ಯ

ಎಚ್ಚರ! ಅಪಾಯದಲ್ಲಿದೆ ದ.ಕ ಜಿಲ್ಲೆಯ ಬಂಟ್ವಾಳ ಕಿಂಡಿ ಅಣೆಕಟ್ಟು ಸೇತುವೆ

ಕಿಂಡಿ ಅಣೆಕಟ್ಟು ಹಾಗೂ ಸೇತುವೆಯ ಕಾಮಗಾರಿಯ ಕರ್ಮಕಾಂಡ. ಕಾಮಗಾರಿ ಪೂರ್ಣ ಆಗುವ ಮೊದಲೇ ತಡೆಗೋಡೆಯ ಕಾಮಗಾರಿಯ ಅಡಿಪಾಯನೇ ಕಿತ್ತು ಹೊರಗೆ ಬಂದಿದೆ!

BJP
ರಾಜಕೀಯ

ಬಿಜೆಪಿ ನಾಯಕರು ನಮಗೆ ದೇಶಪ್ರೇಮದ ಪಾಠ ಮಾಡುವುದು ಆತ್ಮವಂಚನೆಯಾಗುತ್ತದೆ : ಸಿದ್ದರಾಮಯ್ಯ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಕರಾವಳಿಯಲ್ಲಿ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು(Praveen Nettaru) ಮನೆಗೆ ಮಾತ್ರ ಹೋಗಿ ಪರಿಹಾರ ಕೊಟ್ಟಿದ್ದಾರೆ.

Malyalam
ಮನರಂಜನೆ

ನಟನೆಯಲ್ಲಿ ಸೋಲನ್ನು ಕಂಡರೂ ಕುಗ್ಗದೆ, ಇಂದು ಭಾರತ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ನಟ ಫಹಾದ್ ಫಾಸಿಲ್!

ಫಹಾದ್ ಸಿನಿಮಾಗಳು ತಕ್ಕಮಟ್ಟಿಗೆ ಹಿಟ್ ಎನಿಸಿದರೂ, ಇವರ ಈಗಿನ ಸಿನಿಮಾ ಪ್ರಸಿದ್ಧಿಗೆ ಹೋಲಿಸಿದರೆ ಹಿಂದಿನ ಸಿನಿಮಾಗಳು ಏನೇನೂ ಆಗಿರಲಿಲ್ಲ.

Kabbadi Player
ದೇಶ-ವಿದೇಶ

ಪಲ್ಟಿ ಹೊಡೆಯುವ ಯತ್ನದಲ್ಲಿ ಕುಸಿದು ಬಿದ್ದು ಕಬಡ್ಡಿ ಆಟಗಾರ ಸಾವು! ; ವೀಡಿಯೋ ವೈರಲ್

ಕಬಡ್ಡಿ(Kabbadi) ಆಟಗಾರರೊಬ್ಬ ಸೋಮರ್ ಸಾಲ್ಟ್ ಹೊಡೆಯುತ್ತಿದ್ದಾಗ ಕುಸಿದು ಬಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ(Hospital) ಮೃತಪಟ್ಟಿದ್ದಾರೆ.