ಮಂಡ್ಯ(Mandya) ಜಿಲ್ಲೆಯಲ್ಲಿ 5 ರೂ. ವೈದ್ಯ ಎಂದೇ ಹೆಸರುವಾಸಿಯಾಗಿರುವ ಶಂಕರೇಗೌಡರು(Shankaregowda) ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೇ 23 ಸೋಮವಾರ ರಾತ್ರಿ ಲಘು ಹೃದಯಾಘಾತ ಕಾಣಿಸಿಕೊಂಡ ಬೆನ್ನಲ್ಲೇ ಮೈಸೂರಿನ ಅಪೊಲೋ ಆಸ್ಪತ್ರೆಗೆ ಕುಟುಂಬದವರು ದಾಖಲಿಸಿದ್ದರು. ಆಸ್ಪತ್ರೆಗೆ ದಾಖಲಿಸಿದ ಬಳಿಕ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಇಂದು ಮಂಗಳವಾರ ಕೂಡ ಚಿಕಿತ್ಸೆ ಮುಂದುವರೆಯುತ್ತಿದೆ ವೈದ್ಯರು ತಿಳಿಸಿದ್ದಾರೆ. ಹೃದಯದ ಮೂರು ರಕ್ತನಾಳಗಳಲ್ಲಿ ಬ್ಲಾಕ್ ಆಗಿದೆ. ಶಂಕರೇಗೌಡರಿಗೆ ಚಿಕಿತ್ಸೆ ನೀಡುತ್ತಿದ್ದೇವೆ, ಸದ್ಯ ಯಾವುದೇ ಅಪಾಯವಿಲ್ಲ.
ಒಂದು ವಾರದ ನಂತರ ಅವರಿಗೆ ಬೈಪಾಸ್ ಸರ್ಜರಿ ಮಾಡಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ಒಟ್ಟಿನಲ್ಲಿ 5 ರೂ.ಗೆ ಯಾವುದೇ ವ್ಯಕ್ತಿ ತನಗೆ ಆರೋಗ್ಯ ತೊಂದರೆ ಎಂದು ಅರಸಿ ಶಂಕರೇಗೌಡರ ಬಳಿ ಬಂದರೇ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಕಳಿಸುತ್ತಿದ್ದರು. ಕೆಲ ರೋಗಿಗಳು 5 ರೂ. ನೀಡಲಾಗದೇ ಶಂಕರೇಗೌಡರ ಬಳಿ ಚಿಕಿತ್ಸೆಗೆ ಬಂದಿರುವ ಅದೆಷ್ಟೋ ನಿದರ್ಶನಗಳಿವೆ!
ಇಂಥ ದೈವ ಸ್ವರೂಪದ ವೈದ್ಯರು ಶೀಘ್ರವೇ ಗುಣಮುಖರಾಗಿ ಬರಲಿ, ಇನ್ನಷ್ಟು ರೋಗಿಗಳ ಆರೋಗ್ಯವನ್ನು ಕಾಪಾಡಲಿ ಎಂದು ಆಶಿಸೋಣ.