Bengaluru: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ಮೂರ್ತಿ ವಿಸರ್ಜನೆ (Ganesha Idol Procession) ವೇಳೆ ನಡೆದಿರುವ ಕಲ್ಲು ತೂರಾಟವು ಕೇವಲ ಸಣ್ಣ ಘಟನೆಯಾಗಿದ್ದು, ಈ ಬಗ್ಗೆ ಹೆಚ್ಚಿನ ಗಮನ ನೀಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ (G Parameshwar) ಉಡಾಫೆ ಹೇಳಿಕೆ ನೀಡಿದ್ದಾರೆ.
ಗಲಭೆಯ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾಗಮಂಗಲದಲ್ಲಿ (Nagamangala) ಗಣೇಶಮೂರ್ತಿ ವಿಸರ್ಜನೆಯ ವೇಳೆ ಆಕಸ್ಮಿಕವಾಗಿ ಕಲ್ಲು ತೂರಾಟ ನಡೆದಿದೆ. ಹೀಗಾಗಿ ಇದೊಂದು ಸಣ್ಣ ಘಟನೆಯಾಗಿದದೆ. ಇದಕ್ಕೆ ಕೋಮು ಗಲಭೆ ಎಂದು ಹೇಳುವುದು ತಪ್ಪಾಗುತ್ತದೆ. ಈ ಬಗ್ಗೆ ಪೊಲೀಸರಯ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಲಘು ಹೇಳಿಕೆ ನೀಡಿದ್ದಾರೆ.
ನಾಗಮಂಗಲದಲ್ಲಿ ಈ ರೀತಿಯ ಘಟನೆ ನಡೆಯಬಾರದಿತ್ತು. ಆದರೆ ಸಣ್ಣ ಪ್ರಮಾಣದಲ್ಲಿ ಗಲಾಟೆ (Mandya Voilence) ಆಗಿದೆ. ಆದರೆ ಯಾರೂ ಗಾಯಗೊಂಡಿಲ್ಲ. ಕೆಲವರು ಕಲ್ಲು ತೂರಾಟ ನಡೆಸಿದ್ದಾರೆ. ಆದರೆ ಇದು ಕೋಮು ಗಲಭೆ ಅಲ್ಲ, ಹೀಗಾಗಿ ಈ ಪ್ರಕರಣಕ್ಕೆ ಹೆಚ್ಚಿನ ಪ್ರಚಾರ ನೀಡುವುದು ಬೇಡ ಎಂದು ಹೇಳಿದರು.
Mandya Voilence latest Update In Kannada
Bengaluru: Home Minister G Parameshwar Udafe has stated that the stone pelting during the Ganesha Idol Procession at Nagamangala in Mandya district is only a minor incident and does not require much attention.
Answering the media’s question about the riots, he said that there was an accidental stone pelting during the Ganesh Murthy’s immersion in Nagamangala. So this is a small incident. It would be wrong to call it a communal riot. He has made a light statement that the police will investigate the matter and take appropriate action.
This kind of incident should not have happened in Nagamangala. But on a smaller scale there is chaos (Mandya Violence). But no one was injured. Some have pelted stones. But this is not a communal riot, so the case should not be given more publicity, he said.