Mangalore : ಖತರ್ನಾಕ್ ದರೋಡೆಕೋರ ಚಡ್ಡಿ ಗ್ಯಾಂಗ್ (Khatarnak gangster Chaddi gang) ಮೇಲೆ ಮಂಗಳೂರು ಪೊಲೀಸರು (Police) ಶೂಟೌಟ್ ನಡೆಸಿ, ಪರಾರಿಯಾಗುತ್ತಿದ್ದವರನ್ನು ಬಂಧಿಸಿದ್ದಾರೆ. ಈ ಘಟನೆ ಮಂಗಳೂರು ಸಮೀಪದ ಪಡುಪಣಂಬೂರಿನಲ್ಲಿ ನಡೆದಿದೆ.

ಘಟನೆಯ ವಿವರ (Details of the event) : ಮಂಗಳೂರು ನಗರದಲ್ಲಿ ಚಡ್ಡಿ ಗ್ಯಾಂಗ್ ಮಂಗಳವಾರ ಮನೆಯೊಂದಕ್ಕೆ ನುಗ್ಗಿ ಹಲ್ಲೆ (Attack) ನಡೆಸಿ 16 ಲಕ್ಷ ರೂಪಾಯಿ ಹಾಗೂ ಚಿನ್ನಾಭರಣಗಳನ್ನು (Gold jewelry) ಲೂಟಿ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಶೀಘ್ರವೇ ತನಿಖೆ (Investigation) ಆರಂಭಿಸಿದ ಮಂಗಳೂರು ಮತ್ತು ಹಾಸನ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಕೇವಲ 5 ಗಂಟೆಯೊಳಗೆ ಚಡ್ಡಿ ಗ್ಯಾಂಗ್ನ 4 ಆರೋಪಿಗಳನ್ನು ಹಾಸನದ ಸಕಲೇಶಪುರದಲ್ಲಿ ಬಂಧಿಸಿದ್ದರು. ಹೆಚ್ಚಿನ ವಿಚಾರಣೆಗಾಗಿ ಅವರನ್ನು ಮಂಗಳೂರಿಗೆ (Mangalore) ಕರೆತರಲಾಗಿತ್ತು. ಇಂದು ಮುಂಜಾನೆ ಮಂಗಳೂರು ನಗರದ ಪಡುಪಣಂಬೂರಿನಲ್ಲಿ (Padupanambur) ಸ್ಥಳ ಮಹಜರು ಪಡಿಸುವ ವೇಳೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಬಂಧಿತರು ಯತ್ನಿಸಿದ್ದರು. ಆಗ ಪೊಲೀಸರು ಚಡ್ಡಿ ಗ್ಯಾಂಗ್ನ ಇಬ್ಬರು ಆರೋಪಿಗಳ ಮೇಲೆ ಗುಂಡು ಹಾರಿಸಿದ್ದಾರೆ (Shot) . ಕಾಲಿಗೆ ಗುಂಡು ತಗುಲಿರುವ ಇಬ್ಬರು ಆರೋಪಿಗಳನ್ನೂ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಖತರ್ನಾಕ್ ಚಡ್ಡಿ ಗ್ಯಾಂಗ್ (Khatarnak Chaddi Gang) : ಮೈಮೇಲೆ ಕೇವಲ ಚಡ್ಡಿ, ಬನಿಯಾನ್, ಮುಖಕ್ಕೆ ಬಟ್ಟೆ ಸುತ್ತಿಕೊಳ್ಳುವ ಈ ಗ್ಯಾಂಗ್ನ ಸದಸ್ಯರು, ಸೊಂಟದಲ್ಲಿ ಆಯುಧ ಇಟ್ಟುಕೊಂಡು ಮನೆಗಳ ಮೇಲೆ ದಾಳಿ ನಡೆಸುತ್ತಾರೆ. ಈ ಖತರ್ನಾಕ್ ಚಡ್ಡಿ ಗ್ಯಾಂಗ್ ಈ ಹಿಂದೆ ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ (Dakshina Kannada, Udupi, Shimoga) ಭಾಗದಲ್ಲಿ ಅನೇಕ ಕೃತ್ಯಗಳನ್ನು ನಡೆಸಿತ್ತು.