Mangaluru : ಪೋಕ್ಸೋ ಪ್ರಕರಣಯೊಂದರಲ್ಲಿ (Mangaluru Police Got Fined) ಅಮಾಯಕನನ್ನು ಬಂಧಿಸಿದ ಪೊಲೀಸರಿಗೆ ಸ್ಥಳೀಯ ನ್ಯಾಯಾಲಯ 5 ಲಕ್ಷ ರೂ. ದಂಡ ವಿಧಿಸಿದೆ.
ಮಂಗಳೂರಿನ (Mangaluru) ಜಿಲ್ಲಾ ಎರಡನೇ ಹೆಚ್ಚುವರಿ ಎಫ್‌ಟಿಎಸ್‌ಸಿ ನ್ಯಾಯಾಲಯವು ಈ ಕುರಿತು ತೀರ್ಪು (Verdict) ಪ್ರಕಟಿಸಿದ್ದು, ಆರೋಪಿಯ ಹೆಸರಿನ ತಪ್ಪಾದ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಕ್ಕಾಗಿ ದಂಡದ ಮೊತ್ತವನ್ನು ತಮ್ಮ ಸಂಬಳದಿಂದ ಪಾವತಿಸುವಂತೆ ಪೊಲೀಸ್ ಇನ್ಸ್ಪೆಕ್ಟರ್ ರೇವತಿ ಮತ್ತು ಪೊಲೀಸ್ ಉಪನಿರೀಕ್ಷಕಿ ರೋಸಮ್ಮ ಪಿ.ಪಿ. ಅವರಿಗೆ ನ್ಯಾಯಾಲಯ ಆದೇಶಿಸಿದೆ.
ಈ ಮೊತ್ತವನ್ನು ಸಂತ್ರಸ್ತನಿಗೆ ಪರಿಹಾರವಾಗಿ ಹಸ್ತಾಂತರಿಸಲಾಗುವುದು ಎಂದು ನ್ಯಾಯಪೀಠ ಹೇಳಿದೆ. ಇದೇ ವೇಳೆ ಇಬ್ಬರೂ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನ್ಯಾಯಾಧೀಶರು ಆದೇಶಿಸಿದ್ದಾರೆ.
ಇದನ್ನೂ ಓದಿ : https://vijayatimes.com/cm-gives-death-compensation/
ಇನ್ನು ಮಂಗಳೂರು ಗ್ರಾಮಾಂತರ ಪೊಲೀಸ್ (Mangaluru Rural Police) ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಅತ್ಯಾಚಾರ (Rape) ಪ್ರಕರಣದಲ್ಲಿ ನವೀನ್ ಎಂಬಾತ ಆರೋಪಿಯಾಗಿದ್ದಾನೆ.
ಸಂತ್ರಸ್ತ ಬಾಲಕಿ ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ ಹೇಳಿಕೆಯಲ್ಲಿ ಆರೋಪಿ ನವೀನ್ (Mangaluru Police Got Fined) ಬಗ್ಗೆ ಪ್ರಸ್ತಾಪಿಸಿದ್ದು, ನವೀನ್ ಸಿಕ್ವೇರಾ ಎಂದು ಹೆಸರು ಉಲ್ಲೇಖಿಸಿಲ್ಲ.
ಬಾಲಕಿಯ ಹೇಳಿಕೆಯಂತೆ ಸಬ್ ಇನ್ಸ್ಪೆಕ್ಟರ್ ರೋಸಮ್ಮ, ನವೀನ್ ಎಂಬಾತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆಯನ್ನು ಪೊಲೀಸ್ ಇನ್ಸ್ ಪೆಕ್ಟರ್ ರೇವತಿ ಅವರಿಗೆ ವಹಿಸಿದ್ದಾರೆ.
ತನಿಖೆಯ ವೇಳೆ ಮಂಗಳೂರು ಗ್ರಾಮಾಂತರ ಠಾಣೆ ಎಎಸ್‌ಐ ಕುಮಾರ್ ಆರೋಪಿ ನವೀನ್ ಬದಲಿಗೆ ನವೀನ್ ಸಿಕ್ವೇರಾನನ್ನು ಬಂಧಿಸಿ ತನಿಖಾಧಿಕಾರಿಯ ಮುಂದೆ ಹಾಜರುಪಡಿಸಿದ್ದಾರೆ.
ಇದನ್ನೂ ಓದಿ : https://vijayatimes.com/rumors-behind-rashmika-ban/
ತನಿಖೆ ನಡೆಸಿದ ಪೊಲೀಸ್ ಇನ್ಸ್ಪೆಕ್ಟರ್ ರೇವತಿ, ನವೀನ್ ಸಿಕ್ವೇರಾ ಎಂಬ ವ್ಯಕ್ತಿಯನ್ನು ಆರೋಪಿಯನ್ನಾಗಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಸಂತ್ರಸ್ತೆಯ ಪರ ವಾದ ಮಂಡಿಸಿದ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿರುವ ಎಲ್ಲಾ ದಾಖಲೆಗಳಲ್ಲಿ ಆರೋಪಿಯ ಹೆಸರು ನವೀನ್ ಎಂದು ಮಾತ್ರ ನಮೂದಿಸಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದರು.
ವಯಸ್ಸು 25 ರಿಂದ 26 ವರ್ಷ ಎಂದು ನಮೂದಿಸಲಾಗಿದೆ. ಆದರೆ ಬಂಧಿತ ನವೀನ್ ಸಿಕ್ವೇರಾ ಅವರ ವಯಸ್ಸು 47 ವರ್ಷ ಎಂದು ನ್ಯಾಯಾಲಯದ ಗಮನಕ್ಕೆ ತರಲಾಯಿತು.
ಪೊಲೀಸರು ತಪ್ಪು ವ್ಯಕ್ತಿಯನ್ನು ಬಂಧಿಸಿ ಒಂದು ವರ್ಷ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ ಎಂದು ಯುವತಿ ಪರ ವಕೀಲರು ವಾದಿಸಿದರು.
ಹೀಗಾಗಿ ಪ್ರಕರಣಕ್ಕೆ ಸಂಬಂಧವೇ ಇಲ್ಲದ ವ್ಯಕ್ತಿಯನ್ನು ಬಂಧಿಸಿ, ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಆದೇಶಿದೆ.
ಸಂತ್ರಸ್ಥ ನವೀನ್ ಸಿಕ್ವೇರಾ ಅವರಿಗೆ ಪರಿಹಾರವಾಗಿ 5 ಲಕ್ಷ ರೂಪಾಯಿಗಳನ್ನು ಇಬ್ಬರು ಅಧಿಕಾರಿಗಳು ತಮ್ಮ ಸಂಬಳದಿಂದ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದೆ.
- ಮಹೇಶ್.ಪಿ.ಎಚ್