Visit Channel

ತಾಯಿ ಜನ್ಮದಿನಕ್ಕೆ ಶುಭಕೋರಲು ಬಿಡದ ಶಾಲಾ ಮಂಡಳಿ ; ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿ ಆತ್ಮಹತ್ಯೆ!

Student

ಮಂಗಳೂರು : ತನ್ನ ತಾಯಿಯ ಜನ್ಮದಿನಕ್ಕೆ ಶುಭಾಶಯ ಕೋರಲು ಶಾಲಾ ಮಂಡಳಿ ಅನುಮತಿ ನೀಡದೆ ಇದ್ದ ಪರಿಣಾಮ 14 ವರ್ಷದ ವಿದ್ಯಾರ್ಥಿ ಪೂರ್ವಜ್ ಡೆತ್‍ನೋಟ್(Death Note) ಬರೆದಿಟ್ಟು ಆತ್ಮಹತ್ಯೆ(Sucide) ಮಾಡಿಕೊಂಡಿದ್ದಾನೆ. ಪ್ರಜಾವಾಣಿ ಪತ್ರಿಕೆಯ ವರದಿ(Prajavani Report) ಅನುಸಾರ, ಪೂರ್ವಜ್ ಮಂಗಳೂರಿನ(Mangaluru) ತಲಪಾಡಿಯ(Thalapady) ದೇವಿನಗರದ ಶಾರದಾ ವಿದ್ಯಾನಿಕೇತನ ಶಾಲೆಯ ಹಾಸ್ಟೆಲ್‍ನಲ್ಲಿ ಇದ್ದುಕೊಂಡು ವ್ಯಾಸಂಗ ಮಾಡುತ್ತಿದ್ದನ್ನು.

Sucide

ಶನಿವಾರ ಪೂರ್ವಜ್ ಅವರ ತಾಯಿಯ ಜನ್ಮದಿನ ಇದ್ದ ಕಾರಣ, ಅಮ್ಮನಿಗೆ ಕರೆ ಮಾಡಿ ಶುಭಕೋರಲು ಬಯಸಿದ್ದಾನೆ. ಈ ಕಾರಣದಿಂದ ಹಾಸ್ಟೆಲ್ ವಾರ್ಡನ್ ಬಳಿ ಫೋನ್ ಕೊಡಿ ನಮ್ಮ ತಾಯಿಗೆ ಕರೆ ಮಾಡಿ ಕೊಡುತ್ತೇನೆ ಎಂದರು ಕೂಡ ವಾರ್ಡನ್ ಫೋನ್ ಕೊಟ್ಟಿಲ್ಲ. ಶಾಲಾ ಆಡಳಿತ ಮಂಡಳಿಯ ನಿಯಮ ಅನುಸಾರ ವಿದ್ಯಾರ್ಥಿಗಳು ಫೋನ್ ಉಪಯೋಗಿಸುವಂತಿಲ್ಲ. ಇದೇ ಕಾರಣವನ್ನು ಮುಂದಿಟ್ಟುಕೊಂಡು ವಾರ್ಡನ್ ಪೂರ್ವಜ್ಗೆ ಫೋನ್ ಕೊಡದೇ ಸತಾಯಿಸಿದ್ದಾರೆ.! ತಡರಾತ್ರಿವರೆಗೂ ಕಾದು ಬೇಸರಗೊಂಡ ಪೂರ್ವಜ್, ಮನನೊಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಡೆತ್ ನೋಟಿನಲ್ಲಿ, “ಅಮ್ಮನಿಗೆ ಜನ್ಮದಿನದ ಶುಭಾಶಯಗಳು. ಎಲ್ಲರೂ ಸಂತೋಷವಾಗಿರಿ, ಶಾಲೆಗೆ ನನಗಾಗಿ ಎಂದು ಕಟ್ಟಿದ ಶುಲ್ಕವನ್ನು ವಾಪಸ್ ಪಡೆಯಿರಿ. ನಿಮ್ಮಿಂದ ನಾನು ದೂರವಾಗುತ್ತಿದ್ದೇನೆ. ಯಾರೂ ಅಳಬೇಡಿ” ಎಂದು ಆಂಗ್ಲ ಭಾಷೆಯಲ್ಲಿ ಬರೆದಿದ್ದಾನೆ. ಪೂರ್ವಜ್ ಪೋಷಕರು ಮೂಲತಃ ಬೆಂಗಳೂರು ಗ್ರಾಮಾಂತರ(Bengaluru Rural) ಜಿಲ್ಲೆಯ ಹೊಸಕೋಟೆ(Hoskote) ತಾಲ್ಲೂಕಿನ ರಮೇಶ್-ಮಂಜುಳಾ ದಂಪತಿಯ ಪುತ್ರ. ಈ ಕುರಿತು ಪೋಷಕರು ಹಾಸ್ಟೆಲ್ ವಾರ್ಡನ್, ಶಾಲಾ ಪ್ರಾಂಶುಪಾಲರು, ಆಡಳಿತ ಮಂಡಳಿ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಶಾಲಾ ಮಂಡಳಿ ವಿದ್ಯಾರ್ಥಿ ಪೂರ್ವಜ್ ದಿನಚರಿ,

Student

ಶಿಕ್ಷಣಕ್ಕೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ಪೋಷಕರಿಗೆ ತಿಳಿಸಿಲ್ಲವಂತೆ! ಪೋಷಕರು ಮಗನೊಟ್ಟಿಗೆ ಮಾತನಾಡಲು ಕರೆ ಮಾಡಿದರೂ ಶಾಲಾ ಮಂಡಳಿ ಅವಕಾಶ ಕೊಡುತ್ತಿರಲಿಲ್ಲ ಎಂದು ದೂರಿನಲ್ಲಿ ಪ್ರತ್ಯೇಕವಾಗಿ ಉಲ್ಲೇಖಿಸಿ ತಿಳಿಸಿದ್ದಾರೆ. ಒಟ್ಟಾರೆ ಶಾಲಾ ಆಡಳಿತ ಮಂಡಳಿಯ ಬೇಜವಾವ್ದಾರಿ, ಸಂಬಂಧಗಳ ಅರಿವಿಲ್ಲದೇ ನಡೆದುಕೊಂಡಿರುವ ಪರಿ ನಿಜಕ್ಕೂ ಅಕ್ಷಮ್ಯ! ಇವರ ಹಣದ ದಾಹಕ್ಕೆ, ನಿರ್ಲಕ್ಷ್ಯಕ್ಕೆ ಮುಗ್ಧ ಬಾಲಕನ ಜೀವ ಇಂದು ಬಲಿಯಾಗಿದೆ. ಇಂಥ ದುರ್ಘಟನೆಗಳು ಮುಂದೆಂದೂ ಮರುಕಳಿಸದಿರಲಿ!

Latest News

bsy
ರಾಜಕೀಯ

ಬಿಜೆಪಿಯ ಸಂಸದೀಯ ಮಂಡಳಿಗೆ ಯಡಿಯೂರಪ್ಪ ; ರಾಜಕೀಯವಾಗಿ ಮತ್ತಷ್ಟು ಬಲಗೊಂಡ ಬಿಎಸ್‌ವೈ

ಇನ್ನು ಸಂಸದೀಯ ಮಂಡಳಿಯಲ್ಲಿ ಉತ್ತರಪ್ರದೇಶ(UttarPradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌(Yogi Adityanath) ಅವರಿಗೆ ಸ್ಥಾನ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಅವರಿಗೆ ಸ್ಥಾನ ಲಭಿಸಿಲ್ಲ.

bjp
ರಾಜಕೀಯ

ಡಿಕೆಶಿ ಸ್ವಾತಂತ್ರ್ಯದ ನಡಿಗೆಯ ಉದ್ದೇಶ, ಸಿದ್ದರಾಮಯ್ಯ ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ? : ಬಿಜೆಪಿ

ಸಿದ್ದರಾಮಯ್ಯ(Siddaramaiah) ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ ಅಥವಾ ಕಾಂಗ್ರೆಸ್(Congress) ಹಿರಿಯ ನಾಯಕರು ಡಿಕೆಶಿ(DKS) ಸುತ್ತ ಹೆಣೆದಿರುವ ಜಾಲದಿಂದ ಸ್ವಾತಂತ್ರ್ಯ ಪಡೆಯುವುದೋ?

Ghee
ಆರೋಗ್ಯ

ತುಪ್ಪದ ಬಗ್ಗೆ ತಪ್ಪು ಕಲ್ಪನೆ ಬೇಡ! ; ತಪ್ಪದೇ ತುಪ್ಪ ಸೇವಿಸಿ, ಈ ಆರು ಪ್ರಯೋಜನಗಳನ್ನು ಪಡೆದುಕೊಳ್ಳಿ

ತುಪ್ಪವು ರೋಗನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ, ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ, ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

Assam
ದೇಶ-ವಿದೇಶ

500 ರೂ. ಬೆಟ್ಟಿಂಗ್ ಸೋಲಿಗೆ ಸ್ನೇಹಿತನ ಶಿರಚ್ಛೇದ ; 25 ಕಿ.ಮೀ ದೂರದ ಪೊಲೀಸ್ ಠಾಣೆಗೆ ಹೋಗಿ ಶರಣು!

ಆತನ ತಲೆಯನ್ನು ಹಿಡಿದುಕೊಂಡು ರಾತ್ರಿಯ ವೇಳೆ 25 ಕಿ.ಮೀ ದೂರವಿರುವ ಪೊಲೀಸ್ ಠಾಣೆಗೆ(Police Station) ನಡೆದು ಶರಣಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.