Bellary : ಬಳ್ಳಾರಿಯಲ್ಲಿ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಅನೇಕ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದ(Social Media) ಹೇಳಿಕೆಯನ್ನು ಅಲ್ಲಗಳೆದ ಗಾಯಕಿ ಮಂಗ್ಲಿ(Mangli exposed false rumors),
ಇದೊಂದು ಸುಳ್ಳು ಪ್ರಚಾರ, ನನ್ನ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಕರ್ನಾಟಕದ ಬಳ್ಳಾರಿಯಲ್ಲಿ(Ballari) ನಡೆದ ಕಾರ್ಯಕ್ರಮವೊಂದರಲ್ಲಿ ತೆಲುಗಿನ(Telugu) ಜನಪ್ರಿಯ ಗಾಯಕಿ ಮಂಗ್ಲಿ ಅವರು ಭಾಗಿಯಾಗಿದ್ದರು.
ಈ ವೇಳೆ ಅವರು ಹಲ್ಲೆಗೊಳಗಾದರು ಎಂಬ ವರದಿಗಳನ್ನು ಮಂಗ್ಲಿ ಅವರು ಸದ್ಯ ಅಲ್ಲಗಳೆದಿದ್ದು, ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳು ತನ್ನನ್ನು ಸುರಕ್ಷಿತವಾಗಿ ನೋಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲದೇ ತಾನು ಭಾಗವಹಿಸಿದ್ದ ಬಳ್ಳಾರಿಯ ಕಾರ್ಯಕ್ರಮವೂ ಯಶಸ್ವಿಯಾಗಿದೆ ಎಂದು ಸ್ಪಷ್ಟಪಡಿಸುವ ಮುಖೇನ ಸುಳ್ಳು ವದಂತಿಗಳಿಗೆ ತೆರೆ ಎಳೆದಿದ್ದಾರೆ.

ದುಷ್ಕರ್ಮಿಗಳು ಬಳ್ಳಾರಿಯಲ್ಲಿ ಮಂಗ್ಲಿ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಮಂಗ್ಲಿ ಅವರ ಕಾರಿಗೂ ಹಾನಿಯಾಗಿದೆ ಎಂದು ಹಲವು ವರದಿಗಳು ತಿಳಿಸಿವೆ.
ಘಟನೆ ನಡೆದಾಗ ತಾನು ಕಾರಿನಲ್ಲಿ ಇರಲಿಲ್ಲ ಮತ್ತು ಬಹು ಮುಖ್ಯವಾಗಿ ಅದು ತನ್ನ ವಾಹನವೇ ಅಲ್ಲ ಎಂದು ಮಂಗ್ಲಿ ವದಂತಿಗಳ ಬೆನ್ನಲ್ಲೇ ಸ್ಪಷ್ಟಪಡಿಸಿದ್ದಾರೆ.
ಸುಳ್ಳು ವದಂತಿಗೆ ಗಾಯಕಿ ಮಂಗ್ಲಿ ನೀಡಿದ ಸ್ಪಷ್ಟನೆ ಹೀಗಿದೆ, ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಿನ್ನೆ ನನ್ನ ಮೇಲೆ ಹಲ್ಲೆ ನಡೆದಿದೆ ಎಂದು ಕೆಲವು ಸಾಮಾಜಿಕ ಜಾಲತಾಣದ ಮಾಧ್ಯಮಗಳು ಹರಡಿದ ತಪ್ಪು ಸುದ್ದಿಯನ್ನು ನಾನು ಸಂಪೂರ್ಣವಾಗಿ ನಿರಾಕರಿಸುತ್ತೇನೆ.
ಬಳ್ಳಾರಿಯಲ್ಲಿ ನಡೆದ ಈವೆಂಟ್(Event) ಒಂದು ದೊಡ್ಡ ಯಶಸ್ಸನ್ನು ಹೊಂದಿದೆ ಮತ್ತು ಅತ್ಯುತ್ತಮ ಘಟನೆಗಳಲ್ಲಿ ಒಂದಾಗಿದೆ ಎಂಬುದನ್ನು ನೀವು ಈಗಾಗಲೇ ಫೋಟೋಗಳು ಮತ್ತು ವೀಡಿಯೊಗಳಲ್ಲಿ ನೋಡಿದ್ದೀರಿ.
ಕನ್ನಡ ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿ ಮತ್ತು ಬೆಂಬಲ ಅಗಾಧವಾಗಿದೆ. ಇದನ್ನು ಪದಗಳಲ್ಲಿ ವಿವರಿಸಲು ನನ್ನಿಂದ ಸಾಧ್ಯವಿಲ್ಲ.
ಕಾರ್ಯಕ್ರಮದ ಅಧಿಕಾರಿಗಳು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡರು. ನನ್ನ ಹೆಸರನ್ನು ಹಾಳು ಮಾಡಲು ಇದೆಲ್ಲವನ್ನೂ ಮಾಡಲಾಗುತ್ತಿದೆ ಮತ್ತು ಈ ರೀತಿಯ ಸುಳ್ಳು ಪ್ರಚಾರವನ್ನು ಮಾಡುತ್ತಿದ್ದಾರೆ. ಇಂಥ ಕೃತ್ಯಗಳನ್ನು ನಾನು ಖಂಡಿಸುತ್ತೇನೆ.

ಇತ್ತೀಚೆಗಷ್ಟೇ ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ(Chikkaballapur) ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮಂಗ್ಲಿ ವೇದಿಕೆಯಲ್ಲಿ ತೆಲುಗಿನಲ್ಲಿ ಮಾತನಾಡಲು ಆರಂಭಿಸಿದ್ದರು.
ಮಂಗ್ಲಿ ಅವರಿಗೆ ಕನ್ನಡದಲ್ಲಿ ಮಾತನಾಡಲು ವೇದಿಕೆ ಮೇಲಿದ್ದ ನಿರೂಪಕಿ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಂಗ್ಲಿ, ನಾನು ತೆಲುಗಿನಲ್ಲಿ ಮಾತನಾಡುತ್ತೇನೆ,
ಏಕೆಂದರೆ ಅನಂತಪುರ ಹತ್ತಿರದಲ್ಲಿದೆ, ಆದ್ದರಿಂದ ಇಲ್ಲಿನ ಅನೇಕ ಜನರು ತೆಲುಗು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಹೀಗಾಗಿ ತೆಲುಗಿನಲ್ಲೇ ಮಾತನಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಬೆಂಗಳೂರಿಗೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು
ಇದು ಕನ್ನಡಿಗರು ಮತ್ತು ಕನ್ನಡ ಪರ ಹೋರಾಟಗಾರರನ್ನು ಕೆರಳಿಸಿದ್ದು, ಗಾಯಕಿ ಮಂಗ್ಲಿ ಅವರು ಹೇಳಿದ್ದನ್ನು ನಾವು ಸಹಿಸುವುದಿಲ್ಲ.
ಇದು ತಪ್ಪು. ಮಂಗ್ಲಿ ಅವರು ಕರ್ನಾಟಕದ(Karnataka) ಜನರ ಮುಂದೆ ಶೀಘ್ರವೇ ಕ್ಷಮೆಯಾಚಿಸಬೇಕು ಎಂದು ಹಲವರು ಒತ್ತಾಯಿಸಿದರು.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮಂಗ್ಲಿ ಅವರ ವಿರುದ್ಧ ಅನೇಕರು ಕಿಡಿಕಾರಿದ್ದು, ಕನ್ನಡ ಭಾಷೆಗೆ ಅಪಮಾನ ಮಾಡುವರಿಗೆ ಯಾಕೆ ಕನ್ನಡದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ, ಕನ್ನಡ ವೇದಿಕೆಗೆ ಆಹ್ವಾನ ನೀಡುತ್ತೀರಿ ಎಂದು ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ.