ಸುಮಾರು 300ಕ್ಕೂ ಅಧಿಕ ವಿವಿಧ ತಳಿಯ ಮಾವು ಬೆಳೆಯುವ ಭಾರತ ಜನಪ್ರಿಯ ‘ಮ್ಯಾಂಗೋ ಮ್ಯಾನ್’(Mango Man) ತೋಟಗಾರಿಕಾ ತಜ್ಞ(Horticulture Specialist) ಹಾಜಿ ಕಲೀಮುಲ್ಲಾ(Haji Kalimullah khan) ತಮ್ಮ ಹೊಸ ತಳಿ ಮಾವಿಗೆ ಗಣ್ಯರ ಹೆಸರಿಡುವ ಪದ್ಧತಿಯನ್ನು ಮುಂದುವರೆಸಿದ್ದಾರೆ.
ಉತ್ತರ ಪ್ರದೇಶದ(Uttarpradesh) ಹೆಸರಾಂತ ಮಾವು ಬೆಳೆಗಾರ ಹಾಜಿ ಕಲೀಮುಲ್ಲಾ ಅವರು ಈಗ ಸೃಷ್ಟಿಸಿರುವ ಹೊಸ ಮಿಶ್ರ ತಳಿಗಳಿಗೆ ಸುಷ್ಮಿತಾ ಆಮ್(Sushmitha Aam) ಹಾಗೂ ಅಮಿತ್ ಷಾ ಆಮ್(Amit Shah Aam) ಎಂದು ಹೆಸರಿಸಿದ್ದಾರೆ!
https://vijayatimes.com/critic-of-monsoon-raaga/

2015 ರಲ್ಲಿ ಕಲೀಮುಲ್ಲಾ ಅವರು, ಹೊಸ ತಳಿಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಹೆಸರಿಟ್ಟು ಸುದ್ದಿಯಾಗಿದ್ದರು. ಏಳನೇ ತರಗತಿ ತನಕ ಮಾತ್ರ ವ್ಯಾಸಂಗ ಮಾಡಿರುವ ಕಲೀಮುಲ್ಲಾ ಅವರು, ಸುಮಾರು 300ಕ್ಕೂ ಅಧಿಕ ಮಾವು ತಳಿಗಳನ್ನು ಸಂಶೋಧಿಸಿದ್ದಾರೆ.
ಅನಾರ್ಕಲಿ ಹೆಸರಿನ ಎರಡು ಬಣ್ಣದ ಹಣ್ಣಿಗೆ 25,000 ರೂ. ಪ್ರೋತ್ಸಾಹ ಧನವನ್ನು ಕೂಡ ಪಡೆದುಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್, ಸೋನಿಯಾ ಗಾಂಧಿ ಸೇರಿದಂತೆ ಹಲವಾರು ಗಣ್ಯರ ಹೆಸರನ್ನು ತಮ್ಮ ಹೊಸ ತಳಿಗಳಿಗೆ ನೀಡಿದ್ದಾರೆ. ಕೃಷಿ ಕ್ಷೇತ್ರದ ತಮ್ಮ ಸಾಧನೆಗಾಗಿ ಪದ್ಮಶ್ರೀ(Padmashree Award) ಪುರಸ್ಕೃತರಾಗಿರುವ ಹಾಜಿ ಕಲೀಮುಲ್ಲಾ ಅವರು,
ಸುಮಾರು 100 ವರ್ಷಕ್ಕೂ ಅಧಿಕ ವಯಸ್ಸಿನ ಮರಗಳನ್ನು ಸಂರಕ್ಷಿಸಿದ್ದಾರೆ. ಮಾವಿನ ತಳಿಗಳಿಗೆ ಐಶ್ವರ್ಯಾ ರೈ, ಸಚಿನ್ ತೆಂಡೂಲ್ಕರ್ ಅಲ್ಲದೆ ಹಲವಾರು ರಾಜಕೀಯ ಮುಖಂಡರ ಹೆಸರನ್ನು ಇಡುತ್ತಾ ಬಂದಿದ್ದಾರೆ. 1999 ರಲ್ಲಿ ಒಂದೇ ಮರದಲ್ಲಿ 300 ಬಗೆಯ ಮಾವಿನ ಹಣ್ಣು ಬೆಳೆಸಿದ ದಾಖಲೆಯೂ ಇವರ ಹೆಸರಿನಲ್ಲಿದೆ.
ಉತ್ತರ ಪ್ರದೇಶದ ಮಲಿಹಾಬಾದ್ನಲ್ಲಿರುವ ತಮ್ಮ ತೋಟದಲ್ಲಿ ಈ ಬಾರಿ ಬೆಳೆದ ಎರಡು ಮಿಶ್ರ ತಳಿಗಳಿಗೆ ಮತ್ತೆ ಗಣ್ಯರ ಹೆಸರನ್ನಿಡುವ ಮೂಲಕ ಗಮನ ಸೆಳೆದಿದ್ದಾರೆ.
ಒಂದು ತಳಿಗೆ, ‘ಸೌಂದರ್ಯ, ವ್ಯಕ್ತಿತ್ವ, ಸಾಮಾಜಿಕ ಕಳಕಳಿಯಿಂದ ಗಮನ ಸೆಳೆದಿರುವ ಮಾಜಿ ವಿಶ್ವಸುಂದರಿ ಸುಷ್ಮಿತಾ ಸೇನ್(Sushmitha Sen) ಹೆಸರನ್ನಿಡುವುದು ಸೂಕ್ತ ಎನ್ನಿಸಿತು. ಆಕೆ ಸಹೃದಯಿ ಎಂದು ಜನ ನೆನಪಿಸಿಕೊಳ್ಳಬೇಕು, ಅದಕ್ಕಾಗಿ ಆಕೆಯ ಹೆಸರು ಇಟ್ಟಿದ್ದೇನೆ ಎನ್ನುತ್ತಾರೆ ಹಾಜಿ ಕಲೀಮುಲ್ಲಾ.
ತಮ್ಮ ಇನ್ನೊಂದು ಹೊಸ ತಳಿಯ ಮಾವಿನ ಹಣ್ಣಿಗೆ ಗೃಹ ಸಚಿವ ಅಮಿತ್ ಷಾ ಅವರ ಹೆಸರಿಟ್ಟಿದ್ದಾರೆ. ಅಮಿತ್ ಷಾ(Amith Shah) ಅವರು ಸಮಾಜವನ್ನು ಒಗ್ಗೂಡಿಸುವ ಸಾಮರ್ಥ್ಯ ಹೊಂದಿದ್ದಾರೆ.
ಅಲ್ಲದೆ ಎಲ್ಲ ಸಮುದಾಯಗಳ ಜನರನ್ನೂ ಒಂದೇ ವೇದಿಕೆಗೆ ತರಲು ಪ್ರಯತ್ನಿಸುತ್ತಾರೆ. ಅವರ ವ್ಯಕ್ತಿತ್ವದಿಂದ ಪ್ರಭಾವಿತರಾಗಿ ಹೊಸ ತಳಿಗೆ ಈ ಬಾರಿ ಅಮಿತ್ ಷಾ ಹೆಸರು ಇಟ್ಟಿದ್ದೇನೆ ಎಂದಿದ್ದಾರೆ.
ಈ ತಳಿಗೆ ಅಮಿತ್ ಷಾ ಅವರ ಹೆಸರಿಟ್ಟಿದ್ದರೂ, ಈ ತಳಿ ಗಾತ್ರದಲ್ಲಿ ಮತ್ತು ಪರಿಮಳದಲ್ಲಿ ಸುಧಾರಣೆ ಕಾಣಬೇಕಿದೆ. ಹಾಗಾಗಿ ಇನ್ನೂ ಸ್ವಲ್ಪ ಪ್ರಯೋಗಕ್ಕೆ ಒಳಪಡಿಸಬೇಕಿದೆ ಎಂದಿದ್ದಾರೆ ಕಲೀಮುಲ್ಲಾ.
- ಪವಿತ್ರ