Manipur : ಮಣಿಪುರದಲ್ಲಿ(Manipur) ನಡೆದ ದಿಢೀರ್ ರಾಜಕೀಯ(Politics) ಬೆಳವಣಿಗೆಯಲ್ಲಿ ಐವರು ಜೆಡಿಯು ಶಾಸಕರಾಗಿದ್ದಾರೆ.

ನಿತೀಶ್ ಕುಮಾರ್(Nithish Kumar) ಅವರ ಜೆಡಿಯು ಪಕ್ಷವು(JDU Party) ಬಿಹಾರದಲ್ಲಿ(Bihar) ಬಿಜೆಪಿಯೊಂದಿಗಿನ(BJP) ಸಂಬಂಧವನ್ನು ಮುರಿದು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮೈತ್ರಿಯಿಂದ ಹೊರನಡೆದ ವಾರಗಳ ನಂತರ ಈ ವಿದ್ಯಮಾನ ನಡೆದಿದೆ.
ಮಣಿಪುರ ವಿಧಾನಸಭೆಯ ಐವರು ಜೆಡಿಯು ಶಾಸಕರು ಬಿಜೆಪಿಯೊಂದಿಗೆ ವಿಲೀನಗೊಂಡ ಕೂಡಲೇ ಸಂಸದ ಮತ್ತು ಬಿಜೆಪಿ ನಾಯಕ ಸುಶೀಲ್ ಮೋದಿ ಅವರು ಮಣಿಪುರ ಮತ್ತು ಅರುಣಾಚಲದಂತಹ ರಾಜ್ಯಗಳು “ಜೆಡಿಯು ಮುಕ್ತ” ಆಗಿವೆ ಎಂದು ವ್ಯಂಗ್ಯವಾಡಿದ್ದಾರೆ.

ಪಾಟ್ನಾದಲ್ಲಿ(Patna) ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಮುಂಚಿತವಾಗಿ ಜೆಡಿಯು ಶಾಸಕರಾದ ಖುಮುಚ್ಚಮ್ ಸಿಂಗ್, ನ್ಗುರ್ಸಾಂಗ್ಲೂರ್ ಸನೇಟ್, ಅಚಾಬ್ ಉದ್ದೀನ್, ತಂಗ್ಜಮ್ ಅರುಣ್ ಕುಮಾರ್ ಮತ್ತು ಎಲ್ಎಂ ಖೌಟೆ ಬಿಜೆಪಿ ಸೇರಿದ್ದು, ಇದು ಪರೋಕ್ಷವಾಗಿ ಜೆಡಿಯುಗೆ ತಿರುಗೇಟು ನೀಡಲಾಗಿದೆ ಎನ್ನಲಾಗಿದೆ.
ಇನ್ನು ಕಳೆದ ಒಂಬತ್ತು ದಿನಗಳಲ್ಲಿ ನಿತೀಶ್ ಕುಮಾರ್ ಅವರ ಜನತಾ ದಳ ಯುನೈಟೆಡ್‌ಗೆ ಇದು ಎರಡನೇ ಹೊಡೆತವಾಗಿದೆ. ಆಗಸ್ಟ್ 25 ರಂದು, ಅರುಣಾಚಲ ಪ್ರದೇಶದ ಏಕೈಕ ಜೆಡಿಯು ಶಾಸಕ ಟೆಕಿ ಕಾಸೊ ಅವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ(JP Nadda) ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಜೆಡಿಯು, ಬಿಜೆಪಿಯು ಮೈತ್ರಿಕೂಟದ ಪಾಲುದಾರರಿಗೆ ದ್ರೋಹ ಬಗೆದ ಇತಿಹಾಸವನ್ನು ಹೊಂದಿದೆ. ಅವರು ಮೊದಲು ಅರುಣಾಚಲ ಪ್ರದೇಶದಲ್ಲಿ(Arunachal Pradesh) ನಮ್ಮ ಏಳು ಶಾಸಕರನ್ನು ಪಕ್ಷಾಂತರ ಮಾಡಲು ಮನವೊಲಿಸಿದರು, ಈಗ ಮಣಿಪುರದಲ್ಲಿ ಐವರು ಶಾಸಕರನ್ನು ಸೆಳೆದಿದ್ದಾರೆ.
ನಾವು ಈ ಚುನಾವಣೆಗಳನ್ನು ಸಂಪೂರ್ಣವಾಗಿ ನಮ್ಮದೇ ಆದ ಶಕ್ತಿಯ ಮೇಲೆ ಗೆದ್ದಿದ್ದೇವೆ. ಇದೆಲ್ಲವನ್ನೂ ದೇಶದ ಜನರು ನೋಡುತ್ತಾರೆ. ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಟೀಕಿಸಿದೆ.