Delhi : ಭಾರತವು ಪ್ರಗತಿ ಹೊಂದಲು ವಿದ್ಯಾವಂತ ಪ್ರಧಾನಿಯ ಅಗತ್ಯತೆ ಈ ದೇಶಕ್ಕಿದೆ ಎಂದು ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರು ತಿಹಾರ್ ಜೈಲಿನಿಂದ ದೇಶದ ಜನತೆಗೆ ಪತ್ರ ಬರೆದಿದ್ದು, ಮೋದಿ ಅವರ ಶೈಕ್ಷಣಿಕ (Manish questioned Modi) ಅರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Delhi Chief Minister Arvind Kejriwal) ಅವರು ಟ್ವೀಟ್ (Tweet) ಮಾಡಿರುವ ಪ್ರತಿಯಲ್ಲಿ
ಮನೀಶ್ ಸಿಸೋಡಿಯಾ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು (Narendra Modi) ವ್ಯಂಗ್ಯವಾಡಿದ್ದು, ದೇಶವು ಪ್ರಗತಿ ಹೊಂದಲು ಭಾರತಕ್ಕೆ ವಿದ್ಯಾವಂತ ಪ್ರಧಾನಿ ಅಗತ್ಯವಿದೆ.
ಕೊಳಕು ಚರಂಡಿಯಲ್ಲಿ ಪೈಪ್ ಅಳವಡಿಸಿ ಕೊಳಕು ಅನಿಲದಿಂದ ಚಹಾ ಅಥವಾ ಆಹಾರವನ್ನು ತಯಾರಿಸಬಹುದು ಎಂದು ಪ್ರಧಾನಿ ಮೋದಿ
ಹೇಳುವುದನ್ನು ಕೇಳಿದಾಗ ನನ್ನ ಹೃದಯ ಮರಗುತ್ತದೆ. ಕೊಳಕು ಚರಂಡಿಯಲ್ಲಿ ಪೈಪ್ ಅಳವಡಿಸಿ ಕೊಳಕು ಅನಿಲವನ್ನು ಚಹಾ ಮತ್ತು ಆಹಾರ ಮಾಡಲು ಬಳಸಬಹುದೇ?
ಇದನ್ನೂ ಓದಿ : https://twitter.com/ArvindKejriwal/status/1644191988806455296?s=20
ರಾಡಾರ್‌ಗಳು ಮೋಡಗಳ ಹಿಂದೆ ಹಾರುವ ವಿಮಾನವನ್ನು ಹಿಡಿಯಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳುತ್ತಾರೆ,
ಅವರು ವಿಶ್ವದಾದ್ಯಂತ ನಗೆಪಾಟಲಿಗೀಡಾಗುತ್ತಾರೆ. ಶಾಲಾ ಮತ್ತು ಕಾಲೇಜುಗಳ ವಿದ್ಯಾರ್ಥಿಗಳು ಅವರನ್ನು ಗೇಲಿ ಮಾಡುತ್ತಾರೆ.
ನಾನು ಅಷ್ಟು ವಿದ್ಯಾವಂತನಲ್ಲ ಎಂದು ಪ್ರಧಾನಿ ಮೋದಿ ಹೇಳುತ್ತಿರುವ ವೀಡಿಯೊವನ್ನು ನಾನು ನೋಡಿದ್ದೇನೆ.
ಅವರು ತಮ್ಮ ಶಿಕ್ಷಣವನ್ನು ಹಳ್ಳಿಯ ಶಾಲೆಯಲ್ಲಿ ಮಾಡಿದ್ದೇನೆ ಎಂದು ಹೇಳಿದ್ದು, ಒಬ್ಬ ವ್ಯಕ್ತಿ ಅವಿದ್ಯಾವಂತ ಅಥವಾ ಕಡಿಮೆ ಶಿಕ್ಷಣ ಪಡೆದವರು ಎಂದು ಹೇಳುವುದು (Manish questioned Modi) ಹೆಮ್ಮೆಯ ಭಾವನೆಯೇ?
ಮನೀಶ್‌ಸಿ ಸೋಡಿಯಾ ಪ್ರಶ್ನಿಸಿದ್ದಾರೆ. ದೇಶದ ಯುವಕರು ಇಂದು ಮಹತ್ವಾಕಾಂಕ್ಷೆಯಲ್ಲಿದ್ದಾರೆ, ಅವರು ಏನನ್ನಾದರೂ ಸಾಧಿಸಲು ಬಯಸುತ್ತಾರೆ, ಅವರು ಅವಕಾಶಗಳನ್ನು ಹುಡುಕುತ್ತಿದ್ದಾರೆ,

ಅವರು ಜಗತ್ತನ್ನು ಗೆಲ್ಲಲು ಬಯಸುತ್ತಾರೆ, ಅವರು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅದ್ಭುತಗಳನ್ನು ಮಾಡಲು ಬಯಸುತ್ತಾರೆ.
ಆದರೆ ಅವಿದ್ಯಾವಂತ ಪ್ರಧಾನಿಗೆ ಯುವಕರ ಆಕಾಂಕ್ಷೆಗಳನ್ನು ಈಡೇರಿಸುವ ಸಾಮರ್ಥ್ಯವಿದೆಯೇ? ಒಂದೆಡೆ ಜನಸಂಖ್ಯೆ ಹೆಚ್ಚುತ್ತಿದ್ದು,
ಸರ್ಕಾರಿ ಶಾಲೆಗಳ ಸಂಖ್ಯೆಯೂ ಹೆಚ್ಚಾಗಬೇಕು. ಆದರೆ ಸರ್ಕಾರಿ ಶಾಲೆಗಳನ್ನು ಮುಚ್ಚುವುದು ಅಪಾಯಕಾರಿ.
ಇದು ಸರ್ಕಾರ ಶಿಕ್ಷಣಕ್ಕೆ (Government education) ಆದ್ಯತೆ ನೀಡುವುದಿಲ್ಲ ಎಂಬುದನ್ನು ತೋರಿಸುತ್ತದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸಾಧ್ಯವಾಗದಿದ್ದರೆ ದೇಶ ಪ್ರಗತಿ ಹೊಂದುತ್ತದೆಯೇ?
ಎಂದು ಸಿಸೋಡಿಯಾ ಬರೆದಿರುವ ಪತ್ರವನ್ನು ಹಂಚಿಕೊಂಡಿರುವ ಕೇಜ್ರಿವಾಲ್, ಅಶಿಕ್ಷಿತ ಪ್ರಧಾನಿಯನ್ನು ಹೊಂದಿರುವುದು ದೇಶಕ್ಕೆ “ಅಪಾಯಕಾರಿ” ಎಂದು ಹೇಳಿದ್ದಾರೆ.