ಭಾರತೀಯ ಸೇನಾ(Indian Army) ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ(Army Chief Manoj Pandey), ಸೋಮವಾರ, ಜೂನ್ 20 ರಂದು ಮಾತನಾಡಿ, ಅಗ್ನಿಪಥ್ ಯೋಜನೆಯು(Agnipath Yojana) ಯುವಕರು ಮತ್ತು ಸೇನೆ ಇಬ್ಬರಿಗೂ ಇದು ಗೆಲುವಿನ ಯೋಜನೆ ಎಂದು ಹೇಳಿದ್ದಾರೆ.

ಆಕಾಂಕ್ಷಿ ಅರ್ಜಿದಾರರು ತಪ್ಪು ಮಾಹಿತಿಯಿಂದ ದಾರಿತಪ್ಪಬೇಡಿ ಎಂದು ತಿಳಿ ಹೇಳಿದ್ದಾರೆ. ಮಾಧ್ಯಮಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಸೇನಾ ಮುಖ್ಯಸ್ಥರು ಅಗ್ನಿಪಥ್ ಯೋಜನೆಯನ್ನು ಯಾವುದೇ ಕಾರಣಕ್ಕೂ ಹಿಂದೆಗೆದುಕೊಳ್ಳುವುದಿಲ್ಲ. ಇಂದು ನೇಮಕಾತಿ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಹೇಳಿದರು. “ಅಗ್ನಿಪಥ್ ಯೋಜನೆಯನ್ನು ಹಿಂತೆಗೆದುಕೊಳ್ಳುವುದಿಲ್ಲ, ಸಕಾರಾತ್ಮಕ ಬದಲಾವಣೆಗಳಿರುತ್ತವೆ ಮತ್ತು ಯೋಜನೆಯು ಹೊರತರುವಾಗ ಅಗತ್ಯವಿರುವಂತೆ ಬದಲಾವಣೆಗಳನ್ನು ಮಾಡಲಾಗುವುದು. ಯುವಕರು ತಪ್ಪು ಮಾಹಿತಿಯಿಂದ ದಾರಿತಪ್ಪಬಾರದು.
“ದೈಹಿಕ ಮತ್ತು ಲಿಖಿತ ಪರೀಕ್ಷೆಯ ತಯಾರಿಯ ಮೇಲೆ ಕೇಂದ್ರೀಕರಿಸಲು” ಸಲಹೆ ನೀಡಿದ್ದಾರೆ. “ಅಗ್ನಿಪಥ್ ಯೋಜನೆಯು ತಮಗೆ, ಸೇನೆಗೆ ಮತ್ತು ದೇಶಕ್ಕೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ದೇಶದ ಯುವಕರು ಅರ್ಥಮಾಡಿಕೊಳ್ಳಬೇಕು. ಇದು ಸೇನೆಗೆ ಮತ್ತು ರಾಷ್ಟ್ರಕ್ಕೆ ಇಬ್ಬರಿಗೂ ಗೆಲುವು, ತಪ್ಪು ಗ್ರಹಿಕೆಯಿಂದ ದಾರಿತಪ್ಪಬೇಡಿ. ಸರಿಯಾದ ಮಾಹಿತಿಯ ಕೊರತೆಯು ಯೋಜನೆಯ ಬಗ್ಗೆ ತಪ್ಪು ಆತಂಕಗಳಿಗೆ ಕಾರಣವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.