Andhra : ಜುಲೈ 31: ರಾಮೋಜಿ ರಾವ್ (Margadarshi Chit Fund close) ಅವರ ಒಡೆತನದ ಮಾರ್ಗದರ್ಶಿ ಚಿಟ್ ಫಂಡ್ ಗ್ರೂಪ್ ಅನ್ನು (Margadarshi Chit Fund Group) ಮುಚ್ಚಲು
ಆಂಧ್ರ ಪ್ರದೇಶ (Andhra Pradesh) ಸರ್ಕಾರ ಯೋಚಿಸುತ್ತಿದೆ ಎಂದು ವರದಿಯಾಗಿದೆ. ನಿನ್ನೆ (ಜುಲೈ 30) ಆಂಧ್ರಪ್ರದೇಶದ ಅಧಿಕಾರಿಗಳು ಚಿಟ್ ಫಂಡ್ ಸಂಸ್ಥೆಯ ಸದಸ್ಯರಿಗೆ ನೋಟೀಸ್
(Notice) ಸಲ್ಲಿಸಿದ್ದಾರೆ. ಈ ನೋಟಿಸ್ನಲ್ಲಿ ಮಾರ್ಗದರ್ಶಿ ಚಿಟ್ ಫಂಡ್ ಸಂಸ್ಥೆಯು ಹಲವಾರು ಹಣಕಾಸಿನ ಅಕ್ರಮಗಳನ್ನು ಮಾಡಿದೆ ಎಂದು ಗ್ರಾಹಕರಿಗೆ ಎಚ್ಚರಿಕೆ ನೀಡಲಾಗಿದೆ.

ಅಲ್ಲದೆ ಸರ್ಕಾರ ಅನೇಕ ದಿನ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು (Advertisement) ನೀಡಿ ಮಾರ್ಗದರ್ಶಿ ಚಿಟ್ ಫಂಡ್ ಗ್ರಾಹಕರನ್ನು ಎಚ್ಚರಿಸುತ್ತಿದೆ. ಹೆಚ್ಚುವರಿಯಾಗಿ, ಚಿಟ್ ಫಂಡ್ ವಿರುದ್ಧ ದೂರುಗಳಿದ್ದರೆ,
ಅವುಗಳನ್ನು ಸಲ್ಲಿಸಲು ಆಹ್ವಾನಿಸಲಾಗಿದೆ. ಆಂಧ್ರ ಸರ್ಕಾರ ಈ ಹಿಂದೆ ಕೂಡ ಈ ಚಿಟ್ ಫಂಡ್ ಸಂಸ್ಥೆ ವಿರುದ್ಧ ಸಿಐಡಿ(CID) ತನಿಖೆಗೆ ಆದೇಶ ನೀಡಿತ್ತು. ಸಿಐಡಿ ಕೂಡ ಇದರ ವಿರುದ್ಧ ಅನೇಕ ಪ್ರಕರಣಗಳನ್ನು ಈಗಾಗಲೇ
ಇದನ್ನು ಓದಿ: ಪಿಜಿ, ಪೇಯಿಂಗ್ ಹಾಸ್ಟೆಲ್ ಗಳಿಗೆ ಶಾಕ್: ಶೇ. 12 ರಷ್ಟು ಜಿಎಸ್ಟಿ ಅನ್ವಯ, ಇನ್ನಷ್ಟು ಏರಿಕೆಯಾಗಲಿದೆ ತಿಂಗಳ ಬಾಡಿಗೆ
ದಾಖಲಿಸಿದೆ. ಆಂಧ್ರಪ್ರದೇಶದ ಚಿಟ್ ಫಂಡ್ಗಳ ರಿಜಿಸ್ಟ್ರಾರ್ ಅವರು ತನಿಖೆಯ ಸಂದರ್ಭದಲ್ಲಿ, ಮಾರ್ಗದರ್ಶಿ ಚಿಟ್ ಫಂಡ್ ಸಂಸ್ಥೆಗಳಿಂದ ಕೆಲವು ಹಣಕಾಸಿನ ಅವ್ಯವಹಾರಗಳು ಬೆಳಕಿಗೆ ಬಂದಿವೆ ಎಂದು ಹೇಳಿದರು.
ಚಿಟ್ ಫಂಡ್ ಸಂಸ್ಥೆ ವಿವಿಧ ಕಾಯಿದೆಗಳು ಮತ್ತು ನಿಯಮಗಳನ್ನು ಉಲ್ಲಂಘಿಸಿದೆ. ಅಕ್ರಮ ಹಣ ವರ್ಗಾವಣೆ ಸೇರಿದಂತೆ ಹಲವು ಅವ್ಯವಹಾರಗಳು ಕಂಡುಬಂದಿವೆ ಎಂದು ರಿಜಿಸ್ಟ್ರಾರ್ ಹೇಳಿದ್ದಾರೆ. ಚಿಟ್ ಗ್ರೂಪ್ ನ ಸದಸ್ಯರು
ಯಾವುದೇ ಆಕ್ಷೇಪಣೆ ಅಥವಾ ಪ್ರಶ್ನೆಗಳನ್ನು ಹೊಂದಿದ್ದರೆ, ಈ ನೋಟೀಸ್ ಪ್ರಕಟಣೆಯ ದಿನಾಂಕದಿಂದ 15 ದಿನಗಳ ಒಳಗಾಗಿ ಉಪ ನೋಂದಣಾಧಿಕಾರಿಗಳಿಗೆ ಲಿಖಿತವಾಗಿ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದು ವಿಪಕ್ಷ ಟಿಡಿಪಿ ಮತ್ತು ಆಡಳಿತಾರೂಢ ಪಕ್ಷ ವೈಎಸ್ಆರ್ಪಿ ನಡುವಿನ ಸಂಘರ್ಷವಾಗಿದೆಯೇ??
ಇದು ರಾಮೋಜಿ ರಾವ್ ಮಾಲಕತ್ವದ ಸಂಸ್ಥೆಯ ಮಧ್ಯೆ ಮತ್ತು ಜಗನ್ಮೋಹನ್ ರೆಡ್ಡಿ (Jagan Mohan Reddy) ನೇತೃತ್ವದ ಆಂಧ್ರ ಸರ್ಕಾರ (Government) ನಡೆಯುತ್ತಿರುವ ಸಂಘರ್ಷದ ಮುಂದುವರಿದ ಭಾಗ
ಎನ್ನಲಾಗಿದೆ. ವರದಿಗಳ ಪ್ರಕಾರ, ಮೂಲತಃ ಇದು ವಿಪಕ್ಷ ಟಿಡಿಪಿ (TDP) ಮತ್ತು ಆಡಳಿತಾರೂಢ ಪಕ್ಷ ವೈಎಸ್ಆರ್ಪಿ (YSRP) ನಡುವಿನ ಸಂಘರ್ಷವಾಗಿದೆ. ರಾಮೋಜಿರಾವ್ ಅವರು ಟಿಡಿಪಿ ಬೆಂಬಲಿಗರೆನ್ನಲಾಗಿದೆ.
ಆಂಧ್ರ ಸರ್ಕಾರ ಈಗಾಗಲೇ ಯಾರೆಲ್ಲಾ ಟಿಡಿಪಿಯನ್ನು ಬೆಂಬಲಿಸುತ್ತಾರೋ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ ಎನ್ನುವಂತಹ ಒಂದು ಆರೋಪ ಅನೇಕರಿಂದ ಕೇಳಿಬರುತ್ತಿದೆ. ಹೀಗಾಗಿ, ಸಿಎಂ ಜಗನ್ಮೋಹನ
ರೆಡ್ಡಿ ರಾಮೋಜಿ ರಾವ್ ಒಡೆತನದ ಮಾಧ್ಯಮಸಂಸ್ಥೆಗಳು ಹಾಗೂ ವ್ಯವಹಾರ ಸಂಸ್ಥೆಗಳನ್ನು ಟಾರ್ಗೆಟ್ (Margadarshi Chit Fund close) ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಮಾರ್ಗದರ್ಶಿ ಚಿಟ್ ಗ್ರೂಪ್ಗಳನ್ನು ‘ಅಸಿಸ್ಟೆಂಟ್ ರಿಜಿಸ್ಟ್ರಾರ್ (Assistant Registrar) ಅವರು ಈಗಾಗಲೇ ಕೂಲಂಕಷವಾಗಿ ನಡೆಸಿರುವ ತನಿಖೆಯ ವರದಿಗಳನ್ನು ಪರಿಗಣಿಸಿದ ಬಳಿಕ ಇದನ್ನು ಮುಚ್ಚುವ ಪ್ರಾಯೋಗಿಕ
ನಿರ್ಧಾರಕ್ಕೆ ಬಂದಿದ್ದೇವೆ. ಈ ನೋಟೀಸ್ ಜಾರಿಯಾದ 15 ದಿನದೊಳಗೆ ಚಿಟ್ ಗ್ರೂಪ್ ನ ಸದಸ್ಯರಿಗೆ ಆಕ್ಷೇಪಣೆಗಳಿದ್ದಲ್ಲಿ ಡೆಪ್ಯುಟಿ ರಿಜಿಸ್ಟ್ರಾರ್ಗೆ ಲಿಖಿತ ಮನವಿ ಸಲ್ಲಿಸಬೇಕು’ ಎಂದು ರಿಜಿಸ್ಟ್ರಾರ್ ತಿಳಿಸಿದ್ದಾರೆ.
ರಶ್ಮಿತಾ ಅನೀಶ್