• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಸಿನಿ ರಸಿಕರಿಗೆ ಇಂದು ಹಬ್ಬದ ಸಂಭ್ರಮ: ಮಾರ್ಕ್ ಮತ್ತು 45 ಒಂದೇ ದಿನ ಭರ್ಜರಿ ಬಿಡುಗಡೆ

Teju Srinivas by Teju Srinivas
in ಪ್ರಮುಖ ಸುದ್ದಿ, ಮನರಂಜನೆ, ವಿಜಯ ಟೈಮ್ಸ್‌
ಸಿನಿ ರಸಿಕರಿಗೆ ಇಂದು ಹಬ್ಬದ ಸಂಭ್ರಮ: ಮಾರ್ಕ್ ಮತ್ತು 45 ಒಂದೇ ದಿನ ಭರ್ಜರಿ ಬಿಡುಗಡೆ
0
SHARES
17
VIEWS
Share on FacebookShare on Twitter
  • ಒಂದೇ ದಿನ ಸ್ಯಾಂಡಲ್‌ವುಡ್‌ನಲ್ಲಿ (mark vs 45) ಡಬಲ್ ಧಮಾಕಾ
  • ಒಂದೇ ದಿನ ತೆರೆಗೆ ಬಂದ ‘ಮಾರ್ಕ್’ ಮತ್ತು ‘45’ಗೆ ಪ್ರೇಕ್ಷಕರ ಭರ್ಜರಿ ರೆಸ್ಪಾನ್ಸ್
  • ಸ್ಯಾಂಡಲ್‌ವುಡ್‌ನಲ್ಲಿ ಒಂದೇ ದಿನ ತೆರೆಕಂಡ ಬಿಗ್ ಸ್ಟಾರ್‌ಗಳ ಬಹು ನಿರೀಕ್ಷಿತ ಎರಡು ಸಿನಿಮಾಗಳು

ಸ್ಯಾಂಡಲ್‌ವುಡ್ ಸಿನಿ ಪ್ರೇಮಿಗಳಿಗೆ ಇಂದಿನ ದಿನ ನಿಜಕ್ಕೂ (mark vs 45) ಹಬ್ಬದ ದಿನವಾಗಿದೆ.

ಕನ್ನಡ ಚಿತ್ರರಂಗದ ಬಿಗ್ ಸ್ಟಾರ್‌ಗಳ ಬಹು ನಿರೀಕ್ಷಿತ ಎರಡು ಸಿನಿಮಾಗಳು—ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ (Mark) ಮತ್ತು ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಅಭಿನಯದ ‘45’—ಒಂದೇ ದಿನ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಆರಂಭಿಸಿವೆ.

ಕ್ರಿಸ್‌ಮಸ್ ಹಬ್ಬದ ಹಿನ್ನೆಲೆಯಲ್ಲಿ ಬಿಡುಗಡೆಯಾದ ಈ ಎರಡು ಚಿತ್ರಗಳು ಥಿಯೇಟರ್‌ಗಳಲ್ಲಿ ಭಾರೀ ಜನಸಂದಣಿಯನ್ನು ಸೆಳೆಯುತ್ತಿವೆ.

ಫ್ಯಾನ್ಸ್‌ಗಳ ಉತ್ಸಾಹ, ಹೌಸ್‌ಫುಲ್ ಶೋಗಳು ಮತ್ತು ಮೊದಲ ದಿನದ ಪ್ರತಿಕ್ರಿಯೆಗಳು ಸ್ಯಾಂಡಲ್‌ವುಡ್‌ನಲ್ಲಿ ಸಿನಿ ಸುಗ್ಗಿ ಆರಂಭವಾಗಿದೆ.

ಇನ್ನು ಮಾರ್ಕ್ ಸಿನಿಮಾ ಕಿಚ್ಚ ಸುದೀಪ್ ಅವರ ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆ (mark vs 45) ಮೂಡಿಸಿದ್ದ ಚಿತ್ರ. ಹಲವು ವಾರಗಳ ಚರ್ಚೆ, ಟ್ರೈಲರ್‌ಗಳ (Trailer) ಮೂಲಕ ಕುತೂಹಲ ಹೆಚ್ಚಿಸಿಕೊಂಡ ಈ ಸಿನಿಮಾ, ಬಿಡುಗಡೆಯ ಮೊದಲ ದಿನವೇ ಪಾಸಿಟಿವ್ ಓಪನಿಂಗ್ ಪಡೆದಿದೆ.

ರಾಜ್ಯದ ಪ್ರಮುಖ ಮಲ್ಟಿಪ್ಲೆಕ್ಸ್‌ಗಳು (Multiplex) ಹಾಗೂ ಸಿಂಗಲ್ ಸ್ಕ್ರೀನ್‌ಗಳಲ್ಲಿ (Single Screen) ‘ಮಾರ್ಕ್’ ಸಿನಿಮಾ ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿದೆ.

ವೀಕ್ಷಕರು ಕಿಚ್ಚನ ವಿಭಿನ್ನ ಪಾತ್ರ, ಆ್ಯಕ್ಷನ್ ಸೀನ್‌ಗಳು ಮತ್ತು ಕಥನ ಶೈಲಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮಾರ್ಕ್‌ಗೆ ಎಷ್ಟು ಮಾರ್ಕ್ಸ್? ಎನ್ನುವ ಪ್ರಶ್ನೆ ಇದೀಗ ಸಿನಿ ವಲಯದಲ್ಲಿ ಚರ್ಚೆಯ ವಿಷಯವಾಗಿದ್ದು, ಮುಂದಿನ ದಿನಗಳಲ್ಲಿ ಬಾಕ್ಸ್ ಆಫೀಸ್ (Box Office) ಪ್ರದರ್ಶನದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ವಿಜಯ್ ಕಾರ್ತಿಕೇಯ ನಿರ್ದೇಶನದ ‘ಮಾರ್ಕ್’ ಸಿನಿಮಾ ಆ್ಯಕ್ಷನ್, ಡ್ರಾಮಾ ಮತ್ತು ಕ್ರೈಮ್ ಥ್ರಿಲ್ಲರ್ (Crime Thriller) ಅಂಶಗಳನ್ನು ಒಳಗೊಂಡಿದೆ.

ವಿಶೇಷವೆಂದರೆ ಈ ಚಿತ್ರ ಕನ್ನಡದ ಜೊತೆಗೆ ತಮಿಳು ಮತ್ತು ತೆಲುಗು ಭಾಷೆಗಳಲ್ಲಿಯೂ ಬಿಡುಗಡೆ ಆಗಿದ್ದು, ಪ್ಯಾನ್ ಸೌತ್ ಪ್ರೇಕ್ಷಕರನ್ನು ತಲುಪುವ ಉದ್ದೇಶ ಹೊಂದಿದೆ.

ಸತ್ಯ ಜ್ಯೋತಿ ಫಿಲ್ಮ್ಸ್ (Satya Jyothi Films) ಹಾಗೂ ಕಿಚ್ಚ ಕ್ರಿಯೇಷನ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅಜನೀಶ್ ಲೋಕನಾಥ್ (Ajanish Loknath) ಅವರ ಸಂಗೀತ ಚಿತ್ರಕ್ಕೆ ಮತ್ತಷ್ಟು ಶಕ್ತಿ ತುಂಬಿದೆ.

ಬಿಗ್ ಸ್ಟಾರ್ ಸಿನಿಮಾ ಎಂದರೆ ಹೇಗಿರಬೇಕು ಎಂಬ ನಿರೀಕ್ಷೆಯನ್ನು ‘ಮಾರ್ಕ್’ ಸಾಕಷ್ಟು ಮಟ್ಟಿಗೆ ಪೂರೈಸಿದೆ ಎನ್ನುವ ಮಾತುಗಳು ಸಿನಿ ಪ್ರೇಮಿಗಳಲ್ಲಿ ಕೇಳಿಬರುತ್ತಿವೆ.

ಇನ್ನೊಂದೆಡೆ, ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಅವರು ಮೊದಲ ಬಾರಿಗೆ ನಿರ್ದೇಶನ ಮಾಡಿದ ‘45’ ಸಿನಿಮಾ ಕೂಡ ಭರ್ಜರಿ ಓಪನಿಂಗ್ (Opening) ಪಡೆದುಕೊಂಡಿದೆ.

ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ, ಪ್ರಮೋದ್ ಶೆಟ್ಟಿ ಮತ್ತು ಸುಧಾರಾಣಿ ಅವರಂತಹ ಶಕ್ತಿಶಾಲಿ ಕಲಾವಿದರ ತಂಡ ಈ ಚಿತ್ರದಲ್ಲಿದೆ.

‘45’ ಸಿನಿಮಾವನ್ನು ಕೇವಲ ಒಂದು ಸಿನಿಮಾ ಎಂದು ಅಲ್ಲ, ವಿಭಿನ್ನ ಪ್ರಪಂಚ ಎಂದು ವೀಕ್ಷಕರು ವರ್ಣಿಸುತ್ತಿದ್ದಾರೆ.

ಕಥೆಯ ಆಳ, ಪಾತ್ರಗಳ ತೂಕ ಮತ್ತು ತಾಂತ್ರಿಕ ಗುಣಮಟ್ಟ ಈ ಚಿತ್ರವನ್ನು ವಿಶೇಷವಾಗಿಸಿದೆ.

ರಮೇಶ್ ರೆಡ್ಡಿ ಅವರ ನಿರ್ಮಾಣದಲ್ಲಿ ಮೂಡಿಬಂದ ಈ ಸಿನಿಮಾ ರಾಜ್ಯಾದ್ಯಂತ ಏಕಕಾಲದಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.ಒಟ್ಟಿನಲ್ಲಿ, ‘ಮಾರ್ಕ್’ vs ‘45’ ಎಂಬ ಚರ್ಚೆ ಈಗಾಗಲೇ ಶುರುವಾಗಿದೆ.

ಒಂದು ಕಡೆ ಮಾಸ್ ಆ್ಯಕ್ಷನ್ ಮತ್ತು ಸ್ಟಾರ್ ಪವರ್ ಹೊಂದಿರುವ ‘ಮಾರ್ಕ್’, ಮತ್ತೊಂದೆಡೆ ಕಥಾ ಪ್ರಧಾನ ಮತ್ತು ವಿಭಿನ್ನ ಪ್ರಯೋಗಗಳೊಂದಿಗೆ ಬಂದಿರುವ ‘45’—ಎರಡೂ ಚಿತ್ರಗಳು ತಮ್ಮದೇ ಶೈಲಿಯಲ್ಲಿ ಸಿನಿ ರಸಿಕರನ್ನು ಸೆಳೆಯುತ್ತಿವೆ.

ಹಬ್ಬದ ಸಂಭ್ರಮದ ನಡುವೆ ಬಿಡುಗಡೆಯಾದ ಈ ಸಿನಿಮಾಗಳು ಸ್ಯಾಂಡಲ್‌ವುಡ್‌ಗೆ ಹೊಸ ಉತ್ಸಾಹ ತುಂಬಿದ್ದು, ಮುಂದಿನ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಯಾವ ಚಿತ್ರ ಮೇಲುಗೈ ಸಾಧಿಸುತ್ತದೆ ಎಂಬುದು ಕಾದು ನೋಡಬೇಕಿದೆ.

ಇದನ್ನು ಓದಿ : https://vijayatimes.com/chitradurga-bus-tragedy/

Tags: 45cinemaFilmmarknewmovieSandalwoodshivarajakumarUpendra

Related News

ಉಬರ್ ಆ್ಯಪ್‌ನಲ್ಲಿ ರೈಲು ಟಿಕೆಟ್ ಬುಕ್ಕಿಂಗ್ ಸೇವೆ ಆರಂಭ: ಒಂದೇ ಆ್ಯಪ್‌ನಲ್ಲಿ ಪ್ರಯಾಣದ ಸಂಪೂರ್ಣ ಪ್ಲ್ಯಾನ್
ದೇಶ-ವಿದೇಶ

ಉಬರ್ ಆ್ಯಪ್‌ನಲ್ಲಿ ರೈಲು ಟಿಕೆಟ್ ಬುಕ್ಕಿಂಗ್ ಸೇವೆ ಆರಂಭ: ಒಂದೇ ಆ್ಯಪ್‌ನಲ್ಲಿ ಪ್ರಯಾಣದ ಸಂಪೂರ್ಣ ಪ್ಲ್ಯಾನ್

August 19, 2026
ಸಾರ್ವಜನಿಕರ ವಿಶ್ವಾಸಕ್ಕೆ ದ್ರೋಹ:PM CARES ನಿಧಿ ಬಳಕೆ ಕುರಿತು ಪ್ರಿಯಾಂಕ್ ಖರ್ಗೆ ಆರೋಪ
ದೇಶ-ವಿದೇಶ

ಸಾರ್ವಜನಿಕರ ವಿಶ್ವಾಸಕ್ಕೆ ದ್ರೋಹ:PM CARES ನಿಧಿ ಬಳಕೆ ಕುರಿತು ಪ್ರಿಯಾಂಕ್ ಖರ್ಗೆ ಆರೋಪ

August 19, 2026
ಬೆಂಗಳೂರಿನ ಬಳಿ ನಕಲಿ ಕ್ಯಾನ್ಸರ್ ಔಷಧ ದಂಧೆ ಬಯಲು: 6 ಕೋಟಿ ಮೌಲ್ಯದ ನಕಲಿ ಮೆಡಿಸಿನ್ ಜಪ್ತಿ
ಪ್ರಮುಖ ಸುದ್ದಿ

ಬೆಂಗಳೂರಿನ ಬಳಿ ನಕಲಿ ಕ್ಯಾನ್ಸರ್ ಔಷಧ ದಂಧೆ ಬಯಲು: 6 ಕೋಟಿ ಮೌಲ್ಯದ ನಕಲಿ ಮೆಡಿಸಿನ್ ಜಪ್ತಿ

August 19, 2026
ನಕಲಿ ಪಿಂಚಣಿಗೆ ಕಡಿವಾಣ: 23 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಮೇಲೆ ಸರ್ಕಾರದ ನಿಗಾ
ಪ್ರಮುಖ ಸುದ್ದಿ

ನಕಲಿ ಪಿಂಚಣಿಗೆ ಕಡಿವಾಣ: 23 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಮೇಲೆ ಸರ್ಕಾರದ ನಿಗಾ

August 19, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.