ಮೈಸೂರು, ಮಾ. 29: ಮದುವೆ ದಿಬ್ಬಣಕ್ಕೆ ಹೊರಟ್ಟಿದ್ದ ವಾಹನ ಪಲ್ಟಿಯಾಗಿ ಇಬ್ಬರು ಬಾಲಕಿಯರು ಮೃತಪಟ್ಟಿರುವ ಘಟನೆ ಕೆ.ಆರ್.ನಗರ ತಾಲೂಕಿನ ಹೊಸೂರು-ಹಳಿಯೂರು ರಸ್ತೆ ಬಳಿ ನಡೆದಿದೆ.
ತಾಲೂಕಿನ ಕುಪ್ಪೆ ಗ್ರಾಮದ ಕೃಷ್ಣಯ್ಯ ಅವರ ಪುತ್ರಿಯರಾದ ಪುಷ್ಪಲತಾ (10), ಪಲ್ಲವಿ (9) ಮೃತಪಟ್ಟವರು. ಅಪಘಾತದಲ್ಲಿ ವಾಹನದಲ್ಲಿದ್ದ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಶ್ರೀರಾಂಪುರ ಗ್ರಾಮದ ಕಲ್ಯಾಣ ಮಂಟಪದಲ್ಲಿ ಮದುವೆಗಾಗಿ ಕುಪ್ಪೆ ಗ್ರಾಮದಿಂದ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಟ್ಟೆಪುರ ನಾಲೆಗೆ ವಾಹನ ಬಿದ್ದಿದೆ.
ಅದೃಷ್ಟವಶಾತ್ ವಾಹನದಲ್ಲಿದ್ದ ಮದುಮಗಳು ಅಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಗಾಯಾಳುಗಳನ್ನು ಕೂಡಲೇ ಕೆ.ಆರ್.ನಗರ ಆಸ್ವತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.