ಹೆಚ್ಚಾಗಿ ಕರಾವಳಿ ಭಾಗದ ಜನರಿಗಷ್ಟೇ ಚಿರಪರಿಚಿತ ಈ ಮರುವಾಯಿ(Sea Shells),ಮೋಳಿ(Clams) ಬನ್ನಿ ಅದರ ಆರೋಗ್ಯಕರ ಉಪಯೋಗ ತಿಳಿಯೋಣ. ಮರುವಾಯಿ ಸಮುದ್ರದ ಆಹಾರವಾಗಿರುವುದರಿಂದ ಅಯೋಡಿನ್ ನ ಕಣಜವಾಗಿರುತ್ತದೆ
ಹಾಗೂ ಇದರಲ್ಲಿದೆ ತಾಮ್ರದ ಸತ್ವ. ಇದು ಥೈರಾಯ್ಡ್ ನ ಆರೋಗ್ಯಕ್ಕೆ ಸಹಾಯಕಾರಿಯಾಗಿದೆ.

ಒಂದು ಕುಟುಂಬದಲ್ಲಿ 6 ರಿಂದ 8 ಜನರಿದ್ದರೆ ಅದರಲ್ಲಿ ಇಬ್ಬರಿಗೆ ಆದರೂ ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ.
ಇದರಲ್ಲಿದೆ ಅಪರೂಪದ ವಿಟಮಿನ್ B12, ಇದು ಅತಿ ಹೆಚ್ಚು ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಸಹಕಾರಿಯಾಗಿದೆ. ಮರುವಾಯಿ ಕಬ್ಬಿಣದ ಅಂಶವನ್ನು ಸಹ ಒಳಗೊಂಡಿದೆ. ಕಬ್ಬಿಣದ ಕೊರತೆಯಿಂದಲೂ ಸಹಾ ನೀವು ರಕ್ತಹೀನತೆಗೆ ಕಾಯಿಲೆಗೆ ತುತ್ತಾಗಿರಬಹುದು. ಪುರುಷರಲ್ಲಿ ಆರೋಗ್ಯವಂತ ವೀರ್ಯಾಣು ಮತ್ತು ವೀರ್ಯಾಣು ಸಂಖ್ಯೆ ಹೆಚ್ಚಿಸಲು ಸಹ ಇದು ಸಹಾಯ ಮಾಡುತ್ತದೆ.

ಅಧಿಕ ರಕ್ತದೊತ್ತಡಕ್ಕೂ ಸಹ ಇದು ಮನೆಮದ್ದು, ಇದರಲ್ಲಿದೆ ಪೊಟಾಶಿಯಂ. ಇದು ರಕ್ತದೊತ್ತಡ ನಿವಾರಿಸುವಲ್ಲಿ ಪ್ರಮುಖವಾಗಿದೆ. ನೀವು 100 ಗ್ರಾಮ್ ಮರುವಾಯಿ ತಿಂದರೆ, 12. 8 ಗ್ರಾಂನಷ್ಟು ಪ್ರೋಟೀನ್ ನಿಮ್ಮ ದೇಹವನ್ನು ಸೇರುತ್ತದೆ. ಇದು ಪ್ರೋಟೀನ್ ನ ಕಣಜವೆಂದು ಕರೆದರೆ ತಪ್ಪಾಗಲಾರದು. ಹೃದಯಕ್ಕೂ ಕೂಡ ಹಿತಕರ ಈ ಮರುವಾಯಿ. ಇದರಲ್ಲಿದೆ ಫ್ಯಾಟಿ ಆ್ಯಸಿಡ್, ಒಮೆಗಾ 3 ಇವು ರಕ್ತನಾಳಗಳನ್ನು ನಮ್ರವಾಗಿಸುತ್ತವೆ (flexibility) ಮಾನಸಿಕ ಆರೋಗ್ಯಕ್ಕೆ ಕೂಡ ಇದು ಬಹಳ ಉಪಯುಕ್ತ.

ಇದರಲ್ಲಿದೆ ಅತಿಹೆಚ್ಚು ಕೋಲೀನ್ ಅಂಶ. ಇದು ಪೋಷಣೆಯ ಆಗರವಾಗಿದೆ. ಆದರೆ ಇದು ವಿಟಮಿನ್ ಅಲ್ಲ! ಲಿವರ್ ನ ಆರೋಗ್ಯಕ್ಕೆ ಇದು ಬಹಳ ಉಪಯುಕ್ತಕಾರಿಯಾಗಿದೆ. ಸಂಧಿವಾತಕ್ಕೂ ಇದು ರಾಮಬಾಣವಾಗಿದೆ. B2 ವಿಟಮಿನ್ ಕೂಡ ಇದರಲ್ಲಿದೆ. ಇದು ಮಿದುಳಿನ ಆರೋಗ್ಯಕ್ಕೆ ಅತ್ಯವಶ್ಯ , ತಲೆನೋವು- ಮೈಗ್ರೇನ್ ನಂತಹ ಸಮಸ್ಯೆಗೆ ವಿಟಮಿನ್ B2 ಕೊರತೆಯೇ ಕಾರಣವಾಗಿರುತ್ತದೆ. ಮರುವಾಯಿ ಆಹಾರದಲ್ಲಿ ಯಾವುದನ್ನು ಹೆಚ್ಚಿಗೆ ಸೇವಿಸುವುದು ಒಳಿತು ಎಂದರೆ :
- ಮರುವಾಯಿ ರೆಸಿಪಿಗಳು
- ಮರುವಾಯಿ ಸುಕ್ಕ
- ಮರುವಾಯಿ ಬಟರ್ ಮಸಾಲಾ
- ಮರುವಾಯಿ ಸಾಂಬಾರ್
- Sowmya. V