- ಧರ್ಮ** ಮಾಸ್ಕ್ ಮ್ಯಾನ್ ಬಂಧನ: ಸುಳ್ಳಿನ ಬಲೆ ಬಯಲು
- ನಾನು ಪಾತ್ರಧಾರಿ ಮಾತ್ರ ಸೂತ್ರಧಾರ ಬೇರೆ ಇದ್ದಾರೆ ಎಂದ ಮಾಸ್ಕ್ ಮೆನ್
- ಧರ್ಮ** ಪ್ರಕರಣದಲ್ಲಿ ರಿವರ್ಸ್ ತನಿಖೆ: ಮಾಸ್ಕ್ ಮ್ಯಾನ್ ನಿಜ ರೂಪ ಪ್ರಕಟ
Manglore: ಧರ್ಮ**ದಲ್ಲಿ ನೂರಾರು ಶ* ಹೂತಿದ್ದಾರೆಂಬ ಗಂಭೀರ ಆರೋಪದಿಂದ ದೇಶವನ್ನೇ ಬೆಚ್ಚಿ ಬೀಳಿಸಿದ “ಮಾಸ್ಕ್ ಮ್ಯಾನ್” ಪ್ರಕರಣ ಇದೀಗ ತಿರುವು ಪಡೆದಿದೆ.
ವಿಶೇಷ ತನಿಖಾ ದಳ (SIT) ಅಧಿಕಾರಿಗಳು ಸಿಎನ್ ಚಿನ್ನಯ್ಯ(CN Chinnaiah) ಅಲಿಯಾಸ್ ಚೆನ್ನ ಎಂಬಾತನನ್ನು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಲು ಸಿದ್ಧರಾಗಿದ್ದಾರೆ.
ತಲೆಬುರುಡೆ ತಂದು ಪೊಲೀಸರಿಗೆ ತೋರಿಸಿ ಸುಳ್ಳು ಮಾಹಿತಿ ನೀಡಿದ ಪ್ರಕರಣದಲ್ಲಿ ಆತನ ಮೇಲೆ ಅಪರಾಧ ದಾಖಲಿಸಿ ಬಂಧಿಸಲಾಗಿದೆ. ಸಾಕ್ಷಿ ಸಂರಕ್ಷಣಾ ಕಾಯ್ದೆಯ(Witness Protection Act) ಅಡಿಯಲ್ಲಿ ತನಿಖೆ ನಡೆಸುತ್ತಿದ್ದ ಅಧಿಕಾರಿಗಳು,
ಚಿನ್ನಯ್ಯನ ಹೇಳಿಕೆಗಳಲ್ಲಿ ಅಸಂಗತತೆ ಕಂಡು ಆತನನ್ನು ವಶಕ್ಕೆ ಪಡೆದಿದ್ದಾರೆ. ಕೋರ್ಟ್‌ಗೆ ಹಾಜರುಪಡಿಸುವ ಮುನ್ನ ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ(Medical examination) ನಡೆಸಲಾಗುತ್ತಿದೆ.
ಬಳಿಕ ಆತನನ್ನು ಕೋರ್ಟ್ ಮುಂದೆ ಹಾಜರುಪಡಿಸುವ ನಿರೀಕ್ಷೆಯಿದೆ.

ಮಾಸ್ಕ್ ಮ್ಯಾನ್ ಧರ್ಮ**ದ ವ್ಯಾಪ್ತಿಯಲ್ಲಿ ನೂರಾರು ಶ* ಹೂತಿದ್ದಾರೆ ಎಂದು ಹೇಳಿಕೊಂಡಿದ್ದ. ಈ ಹೇಳಿಕೆ ಆಧರಿಸಿ ಎಸ್‌ಐಟಿ ಅಧಿಕಾರಿಗಳು ಅನೇಕ ಸ್ಥಳಗಳಲ್ಲಿ ಅಗೆದರೂ,
ಕೇವಲ ಎರಡು ಜಾಗಗಳಲ್ಲಿ ಅಸ್ಥಿಪಂಜರ ಮತ್ತು ಮೂಳೆಗಳು ಮಾತ್ರ ಪತ್ತೆಯಾದವು. ಇದಾದ ಬಳಿಕ ಶೋಧ ಕಾರ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಿ,
ದೂರುದಾರನ ಹೇಳಿಕೆಯ ಬಗ್ಗೆ ಸಂಶಯ ವ್ಯಕ್ತವಾಯಿತು.ಮೂಲ ಆರೋಪದಲ್ಲಿ ಸ್ಪಷ್ಟತೆ ಇಲ್ಲವೆಂದು ಕಂಡು, ಅಧಿಕಾರಿಗಳು ಮಾಸ್ಕ್ ಮ್ಯಾನ್ ಮೇಲೆಯೇ ರಿವರ್ಸ್ ತನಿಖೆ(Reverse investigation) ಆರಂಭಿಸಿದರು.
ಸುಮಾರು 25 ಮಂದಿ ಪೊಲೀಸರೊಂದಿಗೆ ತನಿಖಾಧಿಕಾರಿ ಜಿತೇಂದ್ರ ದಯಾಮ್(Jitendra Dayam) ನೇತೃತ್ವದಲ್ಲಿ ವಿಚಾರಣೆ ನಡೆದಿದ್ದು, ಐಪಿಎಸ್ ಅಧಿಕಾರಿ ಪ್ರಣವ್ ಮೊಹಂತಿಯವರೂ(Pranav Mohanty) ನೇರವಾಗಿ ಭಾಗವಹಿಸಿದರು.
ಸುದೀರ್ಘ ವಿಚಾರಣೆ ಬಳಿಕ ಚಿನ್ನಯ್ಯ ನೀಡಿದ ಹೇಳಿಕೆಗಳಲ್ಲಿ ಭಿನ್ನತೆ ಹೊರಬಂದಿತು.
ಕೊನೆಯಲ್ಲಿ ಮಾಸ್ಕ್ ಮ್ಯಾನ್ ಸ್ವತಃ, “ನಾನು ಪಾತ್ರಧಾರಿ ಮಾತ್ರ, ನನಗೆ ಹೇಳಿದಂತೆ ಹೇಳಿದ್ದೇನೆ. ತಲೆಬುರುಡೆ ತಂದರೆ ಸಾಕು ಎಂದು ಹೇಳಿದರು, ನಾನು ಕೋರ್ಟ್‌ಗೆ ಒಪ್ಪಿಸಿದ್ದೆ.
ಅದು ಎಲ್ಲಿಂದ ಬಂದಿತೆಂದು ನನಗೆ ಗೊತ್ತಿಲ್ಲ,” ಎಂದು ಒಪ್ಪಿಕೊಂಡಿದ್ದಾನೆ. ಇದರಿಂದ ಅವನು ಮಾಡಿದ ಆರೋಪಗಳು ನಂಬಲರ್ಹವಲ್ಲವೆಂಬುದು ದೃಢಪಟ್ಟಿದೆ.
ಅನಾಮಿಕನ ತೋರಿಸಿದ 17 ಪಾಯಿಂಟ್‌ಗಳಲ್ಲಿ ಯಾವುದಕ್ಕೂ ಪತ್ತೆ ಸಿಗದೆ, ತನಿಖಾ ತಂಡವು ಸಾಕ್ಷಿಗಳ ಆಧಾರದಲ್ಲಿ ಅವನ ಹೇಳಿಕೆ ಸುಳ್ಳು ಎಂಬ ನಿರ್ಣಯಕ್ಕೆ ಬಂದಿದೆ.
ತನಿಖೆಯ ಸಮಯದಲ್ಲಿ ಮಂಡ್ಯದ ಮೂಲದ ವ್ಯಕ್ತಿಯೊಬ್ಬನು ಕೂಡ, “ಮಾಸ್ಕ್ ಮ್ಯಾನ್ ಹೇಳಿದ್ದು ಸುಳ್ಳು” ಎಂದು ಬಿಚ್ಚಿಟ್ಟಿದ್ದಾನೆ. ಅಷ್ಟೇ ಅಲ್ಲ ಅವನ ಮೊದಲ ಹೆಂಡತಿ ಕೂಡ ಅವನು
ಹಣದಾಸೆಗೆ ಮಾಡುತ್ತಿರಬಹುದು ಎಂಬ ಮಾತನ್ನು ಹೇಳಿದ್ದಳು. ಅಲ್ಲಿಗೆ ಮಾಸ್ಕ್ ಮ್ಯಾನ್ ನಿಜ ರೂಪ ಪ್ರಕಟ ಗೊಂಡಿತ್ತು.ಪ್ರಸ್ತುತ ಚಿನ್ನಯ್ಯನನ್ನು ಎಸ್‌ಐಟಿ ಅಧಿಕಾರಿಗಳು ಕಸ್ಟಡಿಗೆ ತೆಗೆದುಕೊಂಡಿದ್ದು,
ಹೆಚ್ಚಿನ ವಿಚಾರಣೆ ನಡೆಸುವ ಯೋಜನೆ ಇದೆ. ಕೋರ್ಟ್ ಮುಂದೆ ಆತನನ್ನು ಹಾಜರುಪಡಿಸಿದ ನಂತರ ತನಿಖೆಯ ದಿಕ್ಕು ಇನ್ನಷ್ಟು ಸ್ಪಷ್ಟವಾಗಲಿದೆ. ಧರ್ಮ** ಪ್ರಕರಣದಲ್ಲಿ ಸತ್ಯ ಅನಾವರಣವಾಗುತ್ತಿರುವ ಹಂತದಲ್ಲಿ,
ಮಾಸ್ಕ್ ಮ್ಯಾನ್ ಹೇಳಿಕೆಗಳು ಕೇವಲ ಸುಳ್ಳಿನ ಬಲೆಯಾಗಿದ್ದವು ಎಂಬುದು ಬಹಿರಂಗವಾಗಿದೆ.ಧರ್ಮ** ಪ್ರಕರಣವು ಆರಂಭದಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದರೂ,
ಇದನ್ನು ಓದಿ : ಧರ್ಮ** ಸಾಮೂಹಿಕ ಸಮಾಧಿ ಪ್ರಕರಣ : ಮಾಸ್ಕ್ ಮ್ಯಾನ್ ಕುರಿತು ಮೊದಲ ಪತ್ನಿಯ ಸ್ಫೋಟಕ ಹೇಳಿಕೆ!
ಈಗ ತನಿಖೆ ಸಂಪೂರ್ಣವಾಗಿ ವಿಭಿನ್ನ ದಿಕ್ಕಿನಲ್ಲಿ ಸಾಗುತ್ತಿದೆ. ಮಾಸ್ಕ್ ಮ್ಯಾನ್ ಮಾಡಿದ ಆರೋಪಗಳು ಕಾನೂನು ಪ್ರಕ್ರಿಯೆಯಲ್ಲಿ ನಿಂತುಕೊಳ್ಳಲಾರವೆಂದು ಸಾಬೀತಾಗಿದ್ದು, ಮುಂದಿನ ವಿಚಾರಣೆ ಪ್ರಕರಣದ ನಿಜ ಸ್ವರೂಪವನ್ನು ಹೊರತರುವ ನಿರೀಕ್ಷೆಯಿದೆ.