• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಉತ್ತರಕಾಶಿಯಲ್ಲಿ ಭೀಕರ ಮೇಘಸ್ಫೋಟ, ಹಠಾತ್ ಪ್ರವಾಹ ಸೃಷ್ಟಿ, ಉತ್ತರಕಾಶಿ ಅಲ್ಲೋಲ-ಕಲ್ಲೋಲ, ಕೊಚ್ಚಿ ಹೋಯ್ತು ಗ್ರಾಮ, ನಾಲ್ವರು ಸಾ*, ನೂರಾರು ಜನ ನಾಪತ್ತೆ

Shwetha Mohan by Shwetha Mohan
in ದೇಶ-ವಿದೇಶ, ವಿಜಯ ಟೈಮ್ಸ್‌
ಉತ್ತರಕಾಶಿಯಲ್ಲಿ ಭೀಕರ ಮೇಘಸ್ಫೋಟ, ಹಠಾತ್ ಪ್ರವಾಹ ಸೃಷ್ಟಿ, ಉತ್ತರಕಾಶಿ ಅಲ್ಲೋಲ-ಕಲ್ಲೋಲ, ಕೊಚ್ಚಿ ಹೋಯ್ತು ಗ್ರಾಮ, ನಾಲ್ವರು ಸಾ*, ನೂರಾರು ಜನ ನಾಪತ್ತೆ
0
SHARES
23
VIEWS
Share on FacebookShare on Twitter
  • ಉತ್ತರಕಾಶಿಯಲ್ಲಿ 2013 ರ ಪ್ರವಾಹ ನೆನಪಿಸುವ ಮೇಘಸ್ಫೋಟ
  • ಮೇಘಾಸ್ಫೋಟಕ್ಕೆ ಸುಖಿ, ಧರಾಲಿ ಗ್ರಾಮ ಸೇರಿ ಹಲವು ಗ್ರಾಮಗಳು ಜಲಾವೃತ
  • 60 ಕ್ಕೂ ಹೆಚ್ಚು ಮಂದಿ ಜಲಸಮಾಧಿ ಆಗಿರುವ ಸಾಧ್ಯತೆ

Uttar kashi: 2013 ರಲ್ಲಿ ಉತ್ತರಾಖಂಡ್(Uttarakhand) ರಾಜ್ಯದ ಕೇದಾರನಾಥ್ ಕಣಿವೆಯಲ್ಲಿ(Kedarnath Valley) ನಡೆದ ಭೀಕರ ಪ್ರವಾಹದ ನೆನಪು ಮಾಸುವ ಮುನ್ನವೇ ಇದೀಗ ಉತ್ತರಾಖಂಡ್ ರಾಜ್ಯದ ಉತ್ತರಕಾಶಿ ಜಿಲ್ಲೆಯ ದಾರಾಲಿ ಗ್ರಾಮದಲ್ಲಿ(Darali village) ಭೀಕರ ಧೀಡೀರ್ ಪ್ರವಾಹ(flood) ಸಂಭವಿಸಿದ್ದು,

ಸುಮಾರು 50ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ನಾಲ್ವರು ಬ*ಯಾಗಿದ್ದಾರೆ . ಈ ಪ್ರವಾಹಕ್ಕೆ ಕಾರಣವಾಗಿದ್ದು ಮೇಘಸ್ಫೋಟ(Cloudburst). ಭಾನುವಾರ ರಾತ್ರಿ ಬೆಟ್ಟದ ಮೇಲ್ಭಾಗದಲ್ಲಿ ಆಕಸ್ಮಿಕವಾಗಿ ಉಂಟಾದ ಮೋಡಸ್ಫೋಟದಿಂದಾಗಿ ಬಿರುಸಿನ ಮಳೆ ಸುರಿದಿದ್ದು,

ಪಕ್ಕದ ಹಳ್ಳ ಕಿಡಿಗೇಡಿದಂತೆ ಪ್ರವಾಹ ರೂಪದಲ್ಲಿ ಹರಿದು ಬಂದು ತಗ್ಗು ಪ್ರದೇಶದ ಮನೆಗಳನ್ನು ನಾಶಮಾಡಿದೆ. ಖೀರ್ ಗಂಗಾ ನದಿಯ(Kheer Ganga River) ತೀರದಲ್ಲಿ ಇರುವ ಧಾರಾಲಿ ಗ್ರಾಮದಲ್ಲಿ ಪ್ರವಾಹದ ಪರಿಣಾಮವಾಗಿ ಅನೇಕ ಮನೆಗಳು ನೆಲಸಮವಾಗಿದ್ದು,

Massive cloudburst in Uttarkashi
Flash flood
ಗ್ರಾಮಸ್ಥರು ಭೀತಿಯಲ್ಲಿದ್ದಾರೆ. ಪ್ರವಾಹದ ದಿಟ್ಟ ಹೊಡೆತಕ್ಕೆ ಸಿಲುಕಿ ಹಲವರು ಮನೆಯೊಳಗೇ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ನದಿಯ ತೀರದಲ್ಲಿ ಇರುವ ಸಣ್ಣ ಹಳ್ಳದ ಭಾಗವೇ ಭಾರಿ ನೀರಿನ ಹರಿವಿಗೆ ಕಾರಣವಾಗಿದ್ದು, ಈ ಪ್ರವಾಹದ ನೀರಿನ ಜೊತೆ ಮರದ ತೊಡೆಯುಗಳು, ಕಲ್ಲು, ಕೆಸರು ಸೇರಿ ಭಾರೀ ಅನಾಹುತ ಉಂಟುಮಾಡಿದೆ.

ಸ್ಥಳೀಯ ಮೂಲಗಳ ಪ್ರಕಾರ, ಘಟನೆಯಲ್ಲಿ 60ಕ್ಕೂ ಹೆಚ್ಚು ಮಂದಿ ಜಲ ಸಮಾಧಿ ಆಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಘಟನೆಯಲ್ಲಿ ಹತ್ತಾರು ಮಂದಿಯ ಸಾ*, ನೂರಾರು ಮಂದಿ ನಾಪತ್ತೆ ಆಗಿರುವ ಶಂಕೆಯೂ ವ್ಯಕ್ತವಾಗಿದೆ. ಸೇನಾಕ್ಯಾಂಪ್‌ನಲ್ಲಿದ್ದ 8-10 ಸೈನಿಕರು ನಾಪತ್ತೆ ಆಗಿದ್ದಾರೆ.

ಜಿಲ್ಲಾಡಳಿತ, ಎಸ್‌ಡಿಆರ್‌ಎಫ್‌, ಎನ್‌ಡಿಆರ್‌ಎಫ್‌ ತಂಡಗಳು ರಾತ್ರಿಯಿಂದಲೇ ರಕ್ಷಣಾ ಮತ್ತು ಪತ್ತೆ ಕಾರ್ಯಾಚರಣೆಗೆ ನಿರಂತರವಾಗಿ ತೊಡಗಿಕೊಂಡಿವೆ.

ಸ್ಥಳೀಯರು ಸಹ ಸಹಾಯ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದು, ತಕ್ಷಣವೇ ಅಗತ್ಯ ಸಹಾಯಧನ, ಆಹಾರ ಮತ್ತು ವೈದ್ಯಕೀಯ ನೆರವು ಒದಗಿಸುವ ಕಾರ್ಯ ಪ್ರಾರಂಭವಾಗಿದೆ.

ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ(Pushkar Singh Dhami) ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, “ಘಟನೆಯ ಬಗ್ಗೆ ನನಗೆ ಬಹಳ ದುಃಖವಾಗಿದೆ.

ಎನ್‌ಡಿಆರ್‌ಎಫ್‌(NDRF), ಎಸ್‌ಡಿಆರ್‌ಎಫ್‌(SDRF), ಮತ್ತು ಜಿಲ್ಲಾಡಳಿತ ತಂಡಗಳಿಗೆ ತಕ್ಷಣವೇ ಕಾರ್ಯಾರಂಭಕ್ಕೆ ಸೂಚನೆ ನೀಡಲಾಗಿದೆ. ಪರಿಸ್ಥಿತಿಯನ್ನು ನಿಗಾ ವಹಿಸಲಾಗುತ್ತಿದ್ದು,

ಎಲ್ಲರ ಸುರಕ್ಷತೆಗಾಗಿ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ,” ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಪ್ರವಾಹದಿಂದಾಗಿ ಗಂಗೋತ್ರಿ ಧಾಮಕ್ಕೆ(Gangotri Dham) ಸಂಪರ್ಕಿಸುವ ಎಲ್ಲಾ ರಸ್ತೆಗಳು ಬಂದ್ ಆಗಿವೆ.

ಹತ್ತಿರದ ಹಿಮಾಚಲ ಪ್ರದೇಶದಲ್ಲಿಯೂ ಭಾರಿ ಮಳೆಯ ಪರಿಣಾಮವಾಗಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ 310ಕ್ಕೂ ಹೆಚ್ಚು ರಸ್ತೆಗಳು ಸಂಚಾರಕ್ಕೆ ಅಡಚಣೆಯಾಗಿವೆ.

ಡೆಹ್ರಾಡೂನ್‌ನಲ್ಲಿ ಮಳೆಯ ಕಾರಣದಿಂದ ಎಲ್ಲಾ ಶಾಲೆಗಳು ಮತ್ತು ಅಂಗನವಾಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಹಿಮಾಲಯನ್ ಪ್ರದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಈ ರೀತಿಯ ಅನಾಹುತಗಳು ಹೆಚ್ಚಾಗುತ್ತಿರುವುದರ ಹಿನ್ನೆಲೆ,

ಹವಾಮಾನ ಬದಲಾವಣೆ, ಅತಿಯಾದ ಕಟ್ಟಡ ನಿರ್ಮಾಣ ಚಟುವಟಿಕೆಗಳು, ಅರಣ್ಯ ನಾಶದ ಹಿನ್ನಲೆ ಕಾರಣ ಎಂಬ ಮಾತು ಕೇಳಿ ಬರುತ್ತಿದೆ .

ಇದನ್ನು ಓದಿ :  ಬೆಂಗಳೂರಲ್ಲಿ ಆಗಸ್ಟ್ 9ರವರೆಗೆ ಮಳೆಯ ಮುನ್ಸೂಚನೆ: ಕರ್ನಾಟಕದ 29 ಜಿಲ್ಲೆಗಳಿಗೆ ಎಚ್ಚರಿಕೆ ಘೋಷಣೆ!

ಸ್ಥಳೀಯ ಜನತೆ, ಅಧಿಕಾರಿಗಳು, ಮತ್ತು ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಅಧಿಕಾರಿಗಳ ಸಮ್ಮುಖದಲ್ಲಿ ಕಾರ್ಯಾಚರಣೆ ಮುಂದುವರಿದಿದ್ದು, ನಾಪತ್ತೆಯಾದವರ ಪತ್ತೆಗೆ ನಿರಂತರ ಹುಡುಕಾಟ ಮುಂದುವರೆದಿದೆ.

Tags: CloudburstDarali villagefloodPushkar singh dhamiUttar kashiUttarakhandvijaya times

Related News

ಇನ್ಮುಂದೆ ಹೋಟೆಲ್‌ನಲ್ಲಿ ಕೂತು ಗಂಟೆಗಟ್ಟಲೆ ಮಾತಾಡಿದ್ರೆ ಎಕ್ಸ್ಟ್ರಾಚಾರ್ಜ್: ಹೋಟೆಲ್ ಮಾಲೀಕರಿಂದ ಅಸೋಸಿಯೇಷನ್‌ಗೆ ಮನವಿ
ಪ್ರಮುಖ ಸುದ್ದಿ

ಇನ್ಮುಂದೆ ಹೋಟೆಲ್‌ನಲ್ಲಿ ಕೂತು ಗಂಟೆಗಟ್ಟಲೆ ಮಾತಾಡಿದ್ರೆ ಎಕ್ಸ್ಟ್ರಾಚಾರ್ಜ್: ಹೋಟೆಲ್ ಮಾಲೀಕರಿಂದ ಅಸೋಸಿಯೇಷನ್‌ಗೆ ಮನವಿ

February 9, 2026
ಏಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ನಿಯಮಗಳು ಜಾರಿ: ಸಂಬಳದಿಂದ ಷೇರು ಹೂಡಿಕೆವರೆಗೂ ಎಲ್ಲದರ ಮೇಲೂ ಸರ್ಕಾರದ ಕಣ್ಣು
ದೇಶ-ವಿದೇಶ

ಏಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ನಿಯಮಗಳು ಜಾರಿ: ಸಂಬಳದಿಂದ ಷೇರು ಹೂಡಿಕೆವರೆಗೂ ಎಲ್ಲದರ ಮೇಲೂ ಸರ್ಕಾರದ ಕಣ್ಣು

February 9, 2026
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ದರ ಏರಿಕೆ ನಿರ್ಧಾರ ಹಿಂಪಡೆದ BMRCL
ಪ್ರಮುಖ ಸುದ್ದಿ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ದರ ಏರಿಕೆ ನಿರ್ಧಾರ ಹಿಂಪಡೆದ BMRCL

February 9, 2026
ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಳ್ಳರ ಕೈಚಳಕ:ಫ್ಲಿಪ್‌ಕಾರ್ಟ್ ಕಂಪನಿಗೆ ಸೇರಿದ 24 ಲಕ್ಷದ ಮೊಬೈಲ್ ಸೇರಿ, ಇತರೆ ಗೂಡ್ಸ್‌ ಕಳವು
ಪ್ರಮುಖ ಸುದ್ದಿ

ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಳ್ಳರ ಕೈಚಳಕ:ಫ್ಲಿಪ್‌ಕಾರ್ಟ್ ಕಂಪನಿಗೆ ಸೇರಿದ 24 ಲಕ್ಷದ ಮೊಬೈಲ್ ಸೇರಿ, ಇತರೆ ಗೂಡ್ಸ್‌ ಕಳವು

February 7, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.