• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

iPhone 18 Pro Sale: ₹1.64 ಲಕ್ಷದ ಐಫೋನ್ ಖರೀದಿಗೆ ಮುಗಿಬಿದ್ದ ಜನ, ಬೆಂಗಳೂರಿನಲ್ಲೂ ಭರ್ಜರಿ ಕ್ರೇಜ್

Teju Srinivas by Teju Srinivas
in ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
iPhone 18 Pro Sale: ₹1.64 ಲಕ್ಷದ ಐಫೋನ್ ಖರೀದಿಗೆ ಮುಗಿಬಿದ್ದ ಜನ, ಬೆಂಗಳೂರಿನಲ್ಲೂ ಭರ್ಜರಿ ಕ್ರೇಜ್
0
SHARES
11
VIEWS
Share on FacebookShare on Twitter

ಸೆಪ್ಟೆಂಬರ್ 18ರಿಂದ ಭಾರತದಲ್ಲಿ (massive crowd buying iphone) ಅಧಿಕೃತ ಮಾರಾಟ ಆರಂಭ

ಹಲವು ನಗರಗಳ ಸ್ಟೋರ್‌ಗಳ ಮುಂದೆ ಗ್ರಾಹಕರ ಉದ್ದನೆಯ ಸಾಲು

256GBಯಿಂದ 2TBವರೆಗೆ ಹಲವು ಸ್ಟೋರೇಜ್ ಆಯ್ಕೆಗಳು; A20 Pro ಚಿಪ್ ಮತ್ತು 48MP ಕ್ಯಾಮೆರಾ ಪ್ರಮುಖ ಫೀಚರ್ಸ್

ಆ್ಯಪಲ್ ಅಭಿಮಾನಿಗಳ ಬಹುದಿನಗಳ ಕಾಯುವಿಕೆಗೆ (massive crowd buying iphone) ತೆರೆ ಬಿದ್ದಿದ್ದು, iPhone 18 Pro ಮತ್ತು iPhone 18 Pro Max ಭಾರತದಲ್ಲಿ ಅಧಿಕೃತವಾಗಿ ಮಾರಾಟಕ್ಕೆ ಬಂದಿದೆ.

ಸೆಪ್ಟೆಂಬರ್ 18ರಿಂದ ದೇಶದಾದ್ಯಂತ ಮೊದಲ ಮಾರಾಟ ಆರಂಭವಾಗಿದ್ದು, ಹೊಸ ಐಫೋನ್ ಖರೀದಿಸಲು ಗ್ರಾಹಕರು ಹಲವು ನಗರಗಳ ಆ್ಯಪಲ್ ಸ್ಟೋರ್‌ಗಳ ಮುಂದೆ ಮುಂಜಾನೆಯೇ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬಂದಿದೆ.

massive crowd buying iphone

ವಿಶೇಷವಾಗಿ ಬೆಂಗಳೂರು, ದೆಹಲಿ, ಮುಂಬೈ ಹಾಗೂ ನೋಯ್ಡಾದಲ್ಲಿ ಲಾಂಚ್‌ ದಿನದ ಉತ್ಸಾಹ ಗಮನ ಸೆಳೆಯಿತು. ಕೆಲ ಗ್ರಾಹಕರು ತಮ್ಮ ನೆಚ್ಚಿನ ಮಾದರಿ ಮತ್ತು ಸ್ಟೋರೇಜ್

ಆಯ್ಕೆಯನ್ನು ಪಡೆಯಲು ರಾತ್ರಿ ಅಥವಾ ಬೆಳಗಿನ ಜಾವವೇ ಅಂಗಡಿಗಳ ಮುಂದೆ ಬಂದು ಕಾಯುತ್ತಿದ್ದರೆ, ಇನ್ನೂ ಕೆಲವರು ಬೇರೆ ನಗರಗಳಿಂದಲೂ ಆಗಮಿಸಿರುವುದು

ವರದಿಯಾಗಿದೆ. ಆದರೆ ಗುರುಗ್ರಾಮ್‌ನ ಸೈಬರ್‌ಹಬ್‌ನಲ್ಲಿ ಇದೇ ಸಮಯದಲ್ಲಿ ಯಾವುದೇ ದೊಡ್ಡ ಸರತಿ ಸಾಲು ಕಾಣಿಸದೆ, ಪರಿಸ್ಥಿತಿ ತುಸು ಶಾಂತವಾಗಿತ್ತು.

ಬೆಂಗಳೂರಿನ ಮಾಲ್ ಆಫ್ ಏಷ್ಯಾದಲ್ಲಿರುವ ಇಮ್ಯಾಜಿನ್ ಆ್ಯಪಲ್ ಪ್ರೀಮಿಯಂ ರೀಸೆಲ್ಲರ್ ಸ್ಟೋರ್‌ ಎದುರು ಹೊಸ ಐಫೋನ್ ಖರೀದಿಸಲು ಗ್ರಾಹಕರು

ಮುಂಜಾನೆಯೇ ಜಮಾಯಿಸಿದ್ದರು. iPhone 18 Pro ಹಾಗೂ Pro Max ಅಧಿಕೃತ ಮಾರಾಟ ಆರಂಭವಾಗುತ್ತಿದ್ದಂತೆ ಅಂಗಡಿಯ ಹೊರಗೆ ಉದ್ದನೆಯ ಕ್ಯೂ ಕಂಡುಬಂತು.

ಕೆಲ ಗ್ರಾಹಕರು ಲಾಂಚ್ ದಿನದ ಅನುಭವಕ್ಕಾಗಿ ವಿಶೇಷವಾಗಿ (massive crowd buying iphone) ಬೆಳಗ್ಗೆಯೇ ಬಂದಿದ್ದರು. ಗ್ರಾಹಕರೊಬ್ಬರು ತಾವು ಬೆಳಗ್ಗೆ 5 ಗಂಟೆಗೇ

ಸ್ಟೋರ್‌ಗೆ ಬಂದಿರುವುದಾಗಿ ಹೇಳಿದ್ದು, ಐಫೋನ್ ಲಾಂಚ್ (iPhone Launch) ಅನ್ನು ಪ್ರತಿವರ್ಷದ ಆಚರಣೆಯಂತೆ ಕಾಣುವುದಾಗಿ ತಿಳಿಸಿದ್ದಾರೆ.

ತಮ್ಮ ಮೊದಲ ಐಫೋನ್ iPhone 7 ಆಗಿದ್ದು, ನಂತರದ ಹಲವು ಮಾದರಿಗಳನ್ನು ಖರೀದಿಸುತ್ತಾ ಬಂದಿರುವುದಾಗಿ ಅವರು ಹೇಳಿದ್ದಾರೆ. ಈ ರೀತಿಯ ಅಭಿಮಾನಿಗಳ ಉತ್ಸಾಹ ಬೆಂಗಳೂರಿನ ಲಾಂಚ್‌ ದಿನದ ವಾತಾವರಣಕ್ಕೆ ಮತ್ತಷ್ಟು ಮೆರುಗು ನೀಡಿತು.

ಹೊಸ ಐಫೋನ್‌ಗಾಗಿ ದೆಹಲಿ ಹಾಗೂ ಮುಂಬೈನಲ್ಲೂ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ದೆಹಲಿಯ ಸಾಕೇತ್‌ನ ಸೆಲೆಕ್ಟ್ ಸಿಟಿವಾಕ್‌ನಲ್ಲಿರುವ ಆ್ಯಪಲ್

ಸ್ಟೋರ್‌ ಹೊರಗೆ ಅಧಿಕೃತ ಮಾರಾಟ ಆರಂಭಕ್ಕೂ ಮುನ್ನವೇ ಜನರು ಸೇರಿದ್ದರು. ಕೆಲವು ಖರೀದಿದಾರರು ರಾತ್ರಿಯಿಂದಲೇ ಕಾಯುತ್ತಿದ್ದರೆಂಬ ವರದಿಗಳೂ ಬಂದಿವೆ.

ನೋಯ್ಡಾದ DLF ಮಾಲ್‌ನಲ್ಲಿರುವ ಆ್ಯಪಲ್ ಸ್ಟೋರ್‌ ಬಳಿಯೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಸೇರಿದ್ದರು. ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ Apple BKC ಹಾಗೂ ಬೋರಿವಲಿ ಸ್ಟೋರ್‌ಗಳಲ್ಲಿಯೂ ಬೆಳಗ್ಗೆಯಿಂದಲೇ ಗ್ರಾಹಕರ ಸರತಿ ಕಂಡುಬಂದಿತು.

ತಮ್ಮ ಇಷ್ಟದ ಬಣ್ಣ, ಮಾದರಿ ಮತ್ತು ಸ್ಟೋರೇಜ್ ಕಾನ್ಫಿಗರೇಶನ್ ದೊರೆಯಬೇಕು ಎಂಬ ಕಾರಣಕ್ಕೆ ಹಲವರು ಮೊದಲ ದಿನವೇ ಖರೀದಿಗೆ ಮುಂದಾಗಿದ್ದಾರೆ.

ಭಾರತದಲ್ಲಿ iPhone 18 Pro ಬೆಲೆ ₹1,64,900ರಿಂದ ಆರಂಭವಾಗುತ್ತದೆ. 256GB ಮಾದರಿಯ ಬೆಲೆ ₹1,64,900 ಆಗಿದ್ದರೆ, 512GB ₹1,89,900, 1TB ₹2,39,900 ಮತ್ತು 2TB ಮಾದರಿ ₹3,14,900ಕ್ಕೆ ಲಭ್ಯವಿದೆ. iPhone 18 Pro Max ಬೆಲೆ 256GB ಮಾದರಿಗೆ ₹1,79,900ರಿಂದ ಆರಂಭವಾಗುತ್ತದೆ.

512GB ₹2,04,900, 1TB ₹2,54,900 ಮತ್ತು 2TB ಮಾದರಿ ₹3,29,900 ಬೆಲೆ ಹೊಂದಿದೆ. iPhone 18 Proನಲ್ಲಿ 6.3 ಇಂಚಿನ Super Retina XDR ಡಿಸ್ಪ್ಲೇ, ProMotion, Always-On

Display ಮತ್ತು Dynamic Island ನೀಡಲಾಗಿದೆ. A20 Pro ಚಿಪ್ ಜೊತೆಗೆ ಹೊಸ ವೇಪರ್ ಚೇಂಬರ್ ತಂತ್ರಜ್ಞಾನವನ್ನೂ ಹೊಂದಿದೆ.

ಕ್ಯಾಮೆರಾ ವಿಭಾಗದಲ್ಲಿ 48MP Pro Fusion ಸಿಸ್ಟಮ್, 48MP Fusion Main, Ultra Wide ಮತ್ತು Telephoto ಕ್ಯಾಮೆರಾಗಳನ್ನು ನೀಡಲಾಗಿದೆ. ಸೆಪ್ಟೆಂಬರ್ 12ರಿಂದ ಪ್ರೀ-ಬುಕಿಂಗ್ ಮಾಡಿದ್ದ ಗ್ರಾಹಕರು ಲಾಂಚ್ ದಿನವೇ ತಮ್ಮ ಸಾಧನಗಳನ್ನು ಪಡೆದುಕೊಳ್ಳುವ ಅವಕಾಶ ಹೊಂದಿದ್ದರು.

ದೇಶದ ಪ್ರಮುಖ ಆ್ಯಪಲ್ ಸ್ಟೋರ್‌ಗಳು ಲಾಂಚ್ ದಿನ ಬೆಳಗ್ಗೆ 8ರಿಂದ ರಾತ್ರಿ 10ರವರೆಗೆ ಕಾರ್ಯನಿರ್ವಹಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ.

Related News

ಕರ್ನಾಟಕದಲ್ಲಿ ಶೇ. 32ರಷ್ಟು ಮಳೆ ಕೊರತೆ: 1918ರ ಬಳಿಕ ಈ ಸಲ ತೀವ್ರ ಮಳೆ ಅಭಾವ
ಪ್ರಮುಖ ಸುದ್ದಿ

ಕರ್ನಾಟಕದಲ್ಲಿ ಶೇ. 32ರಷ್ಟು ಮಳೆ ಕೊರತೆ: 1918ರ ಬಳಿಕ ಈ ಸಲ ತೀವ್ರ ಮಳೆ ಅಭಾವ

October 15, 2026
ಗ್ರಾಮ ಪಂಚಾಯಿತಿಗಳ ಆರ್ಥಿಕ ಬಲವರ್ಧನೆಗೆ ಮುಂದಾದ ಸರ್ಕಾರ : ಸಿಎಂ ಡಿಕೆ ಶಿವಕುಮಾರ್ ಮಹತ್ವದ ಘೋಷಣೆ
ಪ್ರಮುಖ ಸುದ್ದಿ

ಗ್ರಾಮ ಪಂಚಾಯಿತಿಗಳ ಆರ್ಥಿಕ ಬಲವರ್ಧನೆಗೆ ಮುಂದಾದ ಸರ್ಕಾರ : ಸಿಎಂ ಡಿಕೆ ಶಿವಕುಮಾರ್ ಮಹತ್ವದ ಘೋಷಣೆ

October 15, 2026
ಸಿದ್ದರಾಮಯ್ಯ ನಕಲಿ ವಿಡಿಯೋ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಇಬ್ಬರು ಶಂಕಿತರು ಪೊಲೀಸ್ ವಶಕ್ಕೆ
ಪ್ರಮುಖ ಸುದ್ದಿ

ಸಿದ್ದರಾಮಯ್ಯ ನಕಲಿ ವಿಡಿಯೋ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಇಬ್ಬರು ಶಂಕಿತರು ಪೊಲೀಸ್ ವಶಕ್ಕೆ

October 14, 2026
ರಾಜ್ಯದಲ್ಲಿ ಬರದ ತೀವ್ರತೆ ಹೆಚ್ಚಳ: ಮತ್ತೆ 9 ತಾಲೂಕು ಬರಪೀಡಿತ ಪಟ್ಟಿಗೆ, ಒಟ್ಟು ಸಂಖ್ಯೆ 226ಕ್ಕೆ ಏರಿಕೆ
ಪ್ರಮುಖ ಸುದ್ದಿ

ರಾಜ್ಯದಲ್ಲಿ ಬರದ ತೀವ್ರತೆ ಹೆಚ್ಚಳ: ಮತ್ತೆ 9 ತಾಲೂಕು ಬರಪೀಡಿತ ಪಟ್ಟಿಗೆ, ಒಟ್ಟು ಸಂಖ್ಯೆ 226ಕ್ಕೆ ಏರಿಕೆ

October 14, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.