ಕೊತ್ತಂಬರಿ ಪ್ರಿಯರಿಗೆ ಹೊಸ ಮಾದರಿಯಲ್ಲಿ ಸಿಗಲಿದೆ ತಿನಿಸು. ಹೌದು, ಈ ಜಗತ್ತು ದಿನದಿಂದ ದಿನಕ್ಕೆ ಒಂದಲ್ಲ ಒಂದು ರೀತಿ ತಿನಿಸುಗಳಲ್ಲಿ ವಿಶೇಷ ಬದದಲಾವಣೆಯನ್ನು ಮಾಡುತ್ತಲೇ ಇರುತ್ತದೆ. ಅದ್ರಲ್ಲಿ ಐಸ್ ಕ್ರೀಮ್ ಕೂಡ ಒಂದು. ಐಸ್ ಕ್ರೀಮ್ಗೆ ಸಾಮಾನ್ಯವಾಗಿ ವೆನಿಲ್ಲಾ ಫ್ಲೇವರ್, ಮ್ಯಾಂಗೋ ಫ್ಲೇವರ್,ಚಾಕೊ ಫ್ಲೇವರ್ ಹೀಗೆ ಅನೇಕ ಫ್ಲೇವರ್ ಐಸ್ ಕ್ರೀಮ್ ಗೆ ಮಿಕ್ಸ್ ಮಾಡೋದನ್ನ ಕೇಳಿರ್ತೀವಿ. ಆದ್ರೆ ಇವಾಗ ಬಂದಿರೋ ಐಸ್ ಕ್ರೀಮ್ ನ ಫ್ಲೇವರ್ ಸ್ವಲ್ಪ ಡಿಫ್ಫ್ರೆಂಟ್ ಆಗಿದೆ. ಅದುವೇ ಕೊತ್ತಂಬರಿ ಸೊಪ್ಪಿನ ಐಸ್ ಕ್ರೀಮ್.

ಇದನ್ನು ಕಂಡುಹಿಡಿದಿದ್ದು, ಚೀನಾದ ಮೆಕ್ ಡೊನಾಲ್ಡ್ ಕಂಪನಿ.
ಈ ಮೆಕ್ ಡೊನಾಲ್ಡ್ ಕಂಪನಿಯು ಪಿಜ್ಜಾ, ಬರ್ಗರ್ ನಂತಹ ಹಲವು ಬಗೆಯ ಆಹಾರಗಳನ್ನು ತಯಾರಿಸುವ ಕಂಪನಿಯಾಗಿದೆ. ಹೀಗೆ ನಾನಾ ವಿಚಾರಗಳಲ್ಲಿ ಚೀನಾ ವಿಚಿತ್ರ ತಿನಿಸು ಪದಾರ್ಥಗಳನ್ನು ಸೃಷ್ಟಿ ಮಾಡುತ್ತಲೇ ಇದೆ. ಅದ್ರಲ್ಲಿ ಈ ಕೊತ್ತಂಬರಿ ಸೊಪ್ಪಿನ ಐಸ್ ಕ್ರೀಮ್ ಕೂಡ ಒಂದು. ಈ ಕೊತ್ತಂಬರಿ ಸೊಪ್ಪಿನ ಐಸ್ ಕ್ರೀಮ್ ಬಗ್ಗೆ ಮಿಶ್ರ ಪ್ರತಿಕ್ರಿಯೆಯನ್ನು ಜನರು ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಒಮ್ಮೆಯಾದರೂ ಇದರ ಟೇಸ್ಟ್ ಸವಿಯಬೇಕು ಎಂದು ಕಾಯ್ತಿದ್ದಾರೆ.
ಕೆಲವರು ಇದರ ಬಗ್ಗೆ ಪರವಾಗಿ ಮಾತಾಡಿದರೆ ಕೆಲವರು ಇದೆಲ್ಲಾ ಬೇಕಿತ್ತಾ? ಈ ರೀತಿಯ ತಿನ್ನಿಸು ಯಾಕೆ ಎಂದು ಪ್ರಶ್ನಿಸಿದ್ದಾರೆ.

ಈ ಕೊತ್ತಂಬರಿ ಸೊಪ್ಪಿನ ಐಸ್ ಕ್ರೀಮ್ ಫೆಬ್ರವರಿ 21 ರಂದು ಲಾಂಚ್ ಆಗಿದ್ದು, ಫೆಬ್ರವರಿ 25 ರವರೆಗೆ ಇರಲಿದೆ ಎಂದು ವಿವಿಧ ಮೂಲಗಳಿಂದ ತಿಳಿದು ಬಂದಿದೆ. ಈ ತಿನಿಸಿನ ಬೆಲೆ ಅಲ್ಲಿ 6.6 ಯುವನ್ ಆಗಿದ್ದು ಭಾರತದಲ್ಲಿ 77 ರೂಪಾಯಿ 99 ಪೈಸೆ ಇದು ಇವತ್ತಿನ ತನಕ ಮಾತ್ರ ಇದೆ ಎಂದು ಕೂಡ ತಿಳಿಸಿದ್ದಾರೆ. ನೋಡಿದ್ರಲ್ಲ ಮೆಕ್ ಡೊನಾಲ್ಡ್ ನ ಹೊಸ ಮಾದರಿಯ ಐಸ್ ಕ್ರೀಮ್ ನ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ರುಚಿ ಸವಿದವರಷ್ಟೇ ಹೇಳಲು ಸಾಧ್ಯ.