Thrishoor : ಪ್ರಥಮ ಬಾರಿಗೆ ದೇವಾಲಯವೊಂದು ಮೆಕ್ಯಾನಿಕಲ್ (mechanical elephant in temple) ಆನೆಯನ್ನು ದೇವಸ್ಥಾನದ ಆಚರಣೆಗೆ ಎಂದು ಪರಿಚಯಿಸಿರುವುದು ಇದೀಗ ಬೆಳಕಿಗೆ ಬಂದಿದೆ.
ಕೇರಳ ರಾಜ್ಯದ ದೇವಾಲಯವೊಂದು ತಮ್ಮ ದೇವಸ್ಥಾನದ ಆಚರಣೆಗಳನ್ನು ನಿರ್ವಹಿಸಲು ಮೆಕ್ಯಾನಿಕಲ್ (Mechanical) ಆನೆಯನ್ನು ಪರಿಚಯಿಸಿದ್ದು, ಇದು ಸಾಕಷ್ಟು ಹೊಸತನವನ್ನು ಒಳಗೊಂಡಿದೆ ಎಂಬ ಮಾಹಿತಿಯನ್ನು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.
ಈ ರೀತಿಯ ಆವಿಷ್ಕಾರ ಇದೇ ಮೊಲದ ಬಾರಿಗೆ ಎಂದು ಹೇಳಲಾಗಿದ್ದು, ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ಇರಿಂಜದಪ್ಪಿ (Irinjadappilli) ಶ್ರೀ ಕೃಷ್ಣ ದೇವಾಲಯದ ಆಚರಣೆಗಳನ್ನು ನಿರ್ವಹಿಸಲು ಜೀವವಿರುವಂತೆ ಕಾಣುವ
ಮೆಕ್ಯಾನಿಕಲ್ ಆನೆಯನ್ನು ಬಳಸಿಕೊಳ್ಳಲಾಗಿದೆ.

ಮಲಯಾಳಂ, ತಮಿಳು ಚಿತ್ರರಂಗದ ಖ್ಯಾತ ನಟಿ ಪಾರ್ವತಿ ತಿರುವೋತ್ತು (Paravathy Thiruvothu)ಅವರ ಬೆಂಬಲದೊಂದಿಗೆ ಪೇಟಾ ಇಂಡಿಯಾ ಈ ಮೆಕ್ಯಾನಿಕಲ್
ಆನೆಯನ್ನು ದೇವಸ್ಥಾನಕ್ಕೆ ಉಡುಗೊರೆಯಾಗಿ ನೀಡಿದೆ ಎಂದು ವರದಿ ಉಲ್ಲೇಖಿಸಿದೆ.
ಇರಿಂಜದಪಿಲ್ಲಿ ರಾಮನ್ ಎಂಬ ಹೆಸರಿನ ಮೆಕ್ಯಾನಿಕಲ್ ಆನೆಯು 10 ಮತ್ತು ಒಂದೂವರೆ ಅಡಿ ಎತ್ತರ ಮತ್ತು 800 ಕೆ.ಜಿ ತೂಕ ಹೊಂದಿದೆ. ಇದು ಸುಮಾರು 4 ಜನರನ್ನು ಸಾಗಿಸುವಷ್ಟು ಸಾಮರ್ಥ್ಯ ಹೊಂದಿದೆ.
ಆನೆಯ ತಲೆ, ಕಣ್ಣು, ಬಾಯಿ, ಕಿವಿ ಮತ್ತು ಬಾಲ ಎಲ್ಲವೂ ವಿದ್ಯುತ್ ಮೂಲಕ ಕಾರ್ಯ (mechanical elephant in temple) ನಿರ್ವಹಿಸುತ್ತೇವೆ.
ಇದನ್ನು ಓದಿ : ಪರೇಶ್ ಮೇಸ್ತಾ ಸಾವು : ಹೊನ್ನಾವರ ಗಲಭೆಯಲ್ಲಿ ದಾಖಲಾಗಿದ್ದ 122 ಪ್ರಕರಣಗಳನ್ನು ಹಿಂಪಡೆದ ರಾಜ್ಯ ಸರ್ಕಾರ!
ಆನೆಗಳನ್ನು ಅಥವಾ ಇತರ ಯಾವುದೇ ಪ್ರಾಣಿಗಳನ್ನು ಆಚರಣೆಗಳು, ಉತ್ಸವಗಳು ಅಥವಾ ಯಾವುದೇ ಉದ್ದೇಶಕ್ಕಾಗಿ ಎಂದಿಗೂ ಬಳಸಿಕೊಳ್ಳಬೇಡಿ ಅಥವಾ ಬಾಡಿಗೆಗೆ ತೆಗೆದುಕೊಳ್ಳಬೇಡಿ ಎಂದು ದೇವಸ್ಥಾನವು
ಈ ಹಿಂದೆ ನೀಡಿದ್ದ ಕರೆಯನ್ನು ಗಮನದಲ್ಲಿರಿಸಿ, ಪೆಟಾ (PETA) ಇಂಡಿಯಾ ರೋಬೋಟಿಕ್ ಆನೆಯನ್ನು ಕೊಡುಗೆಯಾಗಿ ನೀಡಿದೆ.
ಭಾನುವಾರ, ಇರಿಂಜದಪ್ಪಿಲ್ಲಿ ರಾಮನ್ ಅವರ ನಡಾಯಿರುತಲ್(ದೇವರಿಗೆ ಆನೆಗಳನ್ನು ನೀಡುವ ಸಮಾರಂಭ) ನಡೆಸಲಾಯಿತು.

ಪೆಟಾ (PETA) ಇಂಡಿಯಾ ಈ ಬಗ್ಗೆ ಮಾತನಾಡಿದ್ದು, ಸೆರೆಯಲ್ಲಿಟ್ಟು ಆನೆಗಳನ್ನು ಬಳಸಿಕೊಳ್ಳುವುದರಿಂದ ಅವು ಹತಾಶೆಗೆ ಒಳಗಾಗುತ್ತದೆ. ಇದು ಆನೆಗಳ ಅಸಹಜ ನಡವಳಿಕೆಗೆ ಕಾರಣವಾಗುತ್ತವೆ ಮತ್ತು ಆನೆಗಳು
ಹುಚ್ಚುಚ್ಚಾಗಿ ಓಡಲು ಪ್ರಾರಂಭಿಸುತ್ತವೆ.
ಇದರಿಂದ ಮನುಷ್ಯರು, ಇತರ ಪ್ರಾಣಿಗಳು ಮತ್ತು ಆಸ್ತಿಗೆ ಹಾನಿಯಾಗುತ್ತದೆ. ಹೆರಿಟೇಜ್ ಅನಿಮಲ್ ಟಾಸ್ಕ್ ಫೋರ್ಸ್ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, 15 ವರ್ಷಗಳ ಅವಧಿಯಲ್ಲಿ ಸೆರೆಯಾದ ಆನೆಗಳು 526 ಜನರನ್ನು ಬಲಿಪಡೆದಿವೆ!
ಚಿಕ್ಕಟ್ಟುಕಾವು ರಾಮಚಂದ್ರನ್ ಎಂಬ ಆನೆ ಸುಮಾರು 40 ವರ್ಷಗಳಿಂದ ಸೆರೆಯಲ್ಲಿದ್ದು, ಕೇರಳದಲ್ಲಿ ಹೆಚ್ಚಾಗಿ ಬಳಸುವ ಆನೆಗಳಲ್ಲಿ ಒಂದಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.
