ಮದುವೆಗೂ(Marriage) ಮುನ್ನ ಕೆಲ ವೈದ್ಯಕೀಯ ಪರೀಕ್ಷೆಗಳನ್ನು(Medical Test) ಮಾಡಿಸಿಕೊಳ್ಳಬೇಕು. ಮುಂದಿನ ವೈವಾಹಿಕ ಜೀವನ ಸುಖಮಯದಿಂದಿರಬೇಕು ಎಂದರೆ ಕೆಲ ಪರೀಕ್ಷೆಗಳನ್ನು ನಡೆಸುವುದು ಅನಿವಾರ್ಯ. ಕೆಲ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವುದರಿಂದ ಆನುವಂಶಿಕ ಕಾಯಿಲೆಗಳು ಪತ್ತೆ ಮಾಡಿ, ಅವುಗಳಿಗೆ ಚಿಕಿತ್ಸೆಯನ್ನು ಕೂಡ ಪಡೆದುಕೊಳ್ಳಬಹುದು. ಹಾಗಾದರೆ ಮದುವೆಗೂ ಮುನ್ನ ಯಾವ ಯಾವ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ಎಂಬುದರ ವಿವರ ಇಲ್ಲಿದೆ ನೋಡಿ.

ದೀರ್ಘಕಾಲದ ಕಾಯಿಲೆ ಪರೀಕ್ಷೆ : ದೀರ್ಘಕಾಲದ ಕಾಯಿಲೆಯು ಗರ್ಭಾವಸ್ಥೆಯಲ್ಲಿ ಸಮಸ್ಯೆಗಳನ್ನು ಉಂಟು ಮಾಡಬಹುದು. ಆದ್ದರಿಂದ, ಈ ಪರೀಕ್ಷೆಯನ್ನು ನಡೆಸುವುದು ಅವಶ್ಯಕ.
ಜೀನೋಟೈಪ್ ಪರೀಕ್ಷೆಗಳು : ಪೋಷಕರ ಜೀನ್ಗಳನ್ನು ಮಕ್ಕಳಿಗೆ ವರ್ಗಾವಣೆಯಾಗುತ್ತವೆ. ದಂಪತಿಗಳು ಜೀನೋಟೈಪ್ ಪರೀಕ್ಷೆಗೆ ಒಳಗಾಗಬೇಕು, ಇದರಿಂದ ಜೀನೋಟೈಪ್ ಸಮಸ್ಯೆಯನ್ನು ಕಂಡು ಹಿಡಿಯಬಹುದು.
ಪೆಲ್ವಿಕ್ ಅಲ್ಟ್ರಾಸೌಂಡ್ ಪರೀಕ್ಷೆ : ಗರ್ಭಕಂಠ, ಗರ್ಭಾಶಯ, ಅಂಡಾಶಯಗಳು ಮತ್ತು ಫಾಲೋಪಿಯನ್ ಟ್ಯೂಬ್ಗಳ ಸ್ಥಿತಿಯನ್ನು ಕಂಡು ಹಿಡಿಯಲು ಈ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರಿಂದ ಮಕ್ಕಳಾಗುವ ಸಂಭವವನ್ನು ಪತ್ತೆ ಮಾಡಬಹುದು.
ಜೆನೆಟಿಕ್ ಮೆಡಿಕಲ್ ಹಿಸ್ಟರಿ : ಮಧುಮೇಹ ಅಥವಾ ಹೃದ್ರೋಗಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿವೆ. ಆದ್ದರಿಂದ, ಕುಟುಂಬದ ವೈದ್ಯಕೀಯ ಇತಿಹಾಸವನ್ನು ತಿಳಿದುಕೊಳ್ಳುವುದು ಉತ್ತಮ.
ಥಲಸ್ಸೆಮಿಯಾ ಪರೀಕ್ಷೆ : ಥಲಸ್ಸೆಮಿಯಾ ಭವಿಷ್ಯದ ಮಕ್ಕಳಲ್ಲಿ ಜನ್ಮ ದೋಷಗಳನ್ನು ಉಂಟು ಮಾಡಬಹುದು. ಹೀಗಾಗಿ, ನೀವು ಮದುವೆಯಾಗುವ ಮೊದಲು ಥಲಸ್ಸೆಮಿಯಾ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು.
ಕಂಪ್ಲೀಟ್ ಬ್ಲಡ್ ಕೌಂಟ್ : ಈ ವೈದ್ಯಕೀಯ ಪರೀಕ್ಷೆಯ ಮೂಲಕ, ಇನ್ಫೆಕ್ಷನ್, ಬ್ಲೀಡಿಂಗ್ ಡಿಸ್ಆರ್ಡರ್, ಅನಿಮಿಯಾ ಅಥವಾ ಲ್ಯೂಕೊಮಿಯನಂತಹ ಕಾಯಿಲೆಗಳು ಪತ್ತೆಯಾಗುತ್ತವೆ.

ಬ್ಲಡ್ ಗ್ರೂಪ್ ಟೆಸ್ಟ್ : ರಕ್ತದ ಗುಂಪನ್ನು ತಿಳಿದುಕೊಳ್ಳಲು ಈ ಪರೀಕ್ಷೆಯನ್ನು ಮಾಡಲಾಗುತ್ತದೆ. ಏಕೆಂದರೆ ಕೆಲವು ರಕ್ತ ಗುಂಪುಗಳು ಪರಸ್ಪರ ಹೊಂದಿಕೆಯಾಗುವುದಿಲ್ಲ. ಇದರಿಂದ ಗರ್ಭಾವಸ್ಥೆಯಲ್ಲಿ ಸಮಸ್ಯೆಗಳನ್ನು ಉಂಟಾಗುತ್ತವೆ.
ಫಲವತ್ತತೆ ಪರೀಕ್ಷೆ : ಮದುವೆಗೂ ಮುನ್ನವೇ ದೇಹವು ಫಲವತ್ತತೆಗೆ ಸೂಕ್ತವಾಗಿದೆಯೇ ಎಂದು ತಿಳಿದುಕೊಳ್ಳುವುದು ಉತ್ತಮ. ಸಮಸ್ಯೆಯಿದ್ದರೆ ಮುಂಚಿತವಾಗಿಯೇ ಚಿಕಿತ್ಸೆ ಪಡೆಯಬಹುದು.
ಮಾನಸಿಕ ಆರೋಗ್ಯ ಸ್ಥಿತಿ : ಕೆಲವು ಮಾನಸಿಕ ಆರೋಗ್ಯ ಸಮಸ್ಯೆಗಳು ಭವಿಷ್ಯದಲ್ಲಿ ಮಕ್ಕಳಲ್ಲಿಯೂ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಅವುಗಳ ಬಗ್ಗೆ ಮೊದಲೇ ತಿಳಿದುಕೊಳ್ಳುವುದು ಮುಖ್ಯ.