• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಇಂಡಿಯಾ ಪೋಸ್ಟ್ ಮೂಲಕ ಔಷಧಿ ವಿತರಣೆ: ಅಗ್ಗದ ಜನರಿಕ್ ಔಷಧಿಗಳನ್ನು ಸುಲಭವಾಗಿ ತಲುಪಿಸಲು ಹೊಸ ಯೋಜನೆ

Teju Srinivas by Teju Srinivas
in ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಇಂಡಿಯಾ ಪೋಸ್ಟ್ ಮೂಲಕ ಔಷಧಿ ವಿತರಣೆ: ಅಗ್ಗದ ಜನರಿಕ್ ಔಷಧಿಗಳನ್ನು ಸುಲಭವಾಗಿ ತಲುಪಿಸಲು ಹೊಸ ಯೋಜನೆ
0
SHARES
8
VIEWS
Share on FacebookShare on Twitter

ಮನೆ ಬಾಗಿಲಿಗೇ ಔಷಧಿ ತಲುಪಿಸಲು (Medicine delivery through India Post) ಕೇಂದ್ರ ಸರ್ಕಾರದ ಹೊಸ ಹೆಜ್ಜೆ

ಇಂಡಿಯಾ ಪೋಸ್ಟ್ ಮೂಲಕ ಜನೌಷಧಿ ಸೇವೆ ವಿಸ್ತರಣೆ ಯೋಚನೆ

ಮನೆಬಾಗಿಲಿಗೇ ಔಷಧಿ: ಇಂಡಿಯಾ ಪೋಸ್ಟ್ ಸೇವೆಗೆ ಆರೋಗ್ಯ ಮಿಷನ್ ಸೇರ್ಪಡೆ

New delhi: ದೇಶದ ಸಾಮಾನ್ಯ ಜನರಿಗೆ ಅಗ್ಗದ ಮತ್ತು ಗುಣಮಟ್ಟದ ಔಷಧಿಗಳನ್ನು ಸುಲಭವಾಗಿ (Medicine delivery through India Post) ತಲುಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ಯೋಜನೆ ರೂಪಿಸಲು ಮುಂದಾಗಿದೆ.

ಪ್ರಧಾನ ಮಂತ್ರಿ ಜನೌಷಧಿ ಪರಿಯೋಜನೆಯ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ, ದೇಶದ ಅಂಚೆ ಕಚೇರಿಗಳ ಜಾಲವನ್ನು ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆಯುತ್ತಿದೆ.

ವಿಶೇಷವಾಗಿ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಜನರಿಗೆ ಆರೋಗ್ಯ ಸೇವೆಗಳು ತಲುಪುವಲ್ಲಿ ಇರುವ ಅಡೆತಡೆಗಳನ್ನು ನಿವಾರಿಸಲು ಈ ಯೋಜನೆ ಸಹಾಯಕವಾಗಲಿದೆ ಎಂಬ ನಿರೀಕ್ಷೆ ಇದೆ.

Medicine delivery through India Post

ಈ ಯೋಜನೆಯ ಪ್ರಮುಖ ಭಾಗವಾಗಿ, ಅಂಚೆ ಕಚೇರಿಗಳಲ್ಲಿ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸುವುದರ (Medicine delivery through India Post) ಜೊತೆಗೆ,

ಇಂಡಿಯಾ ಪೋಸ್ಟ್ ಸೇವೆಯ ಮೂಲಕ ಔಷಧಿಗಳನ್ನು ನೇರವಾಗಿ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಜಾರಿಗೆ ತರಲು ಯೋಚಿಸಲಾಗಿದೆ.

ಇದರಿಂದ ವೈದ್ಯಕೀಯ ಸೌಲಭ್ಯಗಳು ಕಡಿಮೆ ಇರುವ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ. ವಯೋವೃದ್ಧರು,

ದಿವ್ಯಾಂಗರು ಮತ್ತು ದೂರದ ಹಳ್ಳಿಗಳಲ್ಲಿ ವಾಸಿಸುವವರಿಗೆ ಇದು ವಿಶೇಷವಾಗಿ ಅನುಕೂಲಕರವಾಗಲಿದೆ.

ಈ ಪ್ರಸ್ತಾವನೆಗೆ ಚಾಲನೆ ನೀಡುವಲ್ಲಿ ರಾಜ್ಯಸಭಾ ಸಂಸದ ಲಹರ್ ಸಿಂಗ್ ಸಿರೋಯಾ ಅವರ ಪಾತ್ರ ಮಹತ್ವದ್ದಾಗಿದೆ.

ಅವರು ಈ ಕುರಿತು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಪತ್ರ ಬರೆದು, ಗ್ರಾಮೀಣ ಪ್ರದೇಶಗಳಲ್ಲಿ ಅಗ್ಗದ ಜನರಿಕ್ ಔಷಧಿಗಳ ಲಭ್ಯತೆಯಲ್ಲಿ ಇನ್ನೂ ಸವಾಲುಗಳಿರುವುದನ್ನು ಗಮನಕ್ಕೆ ತಂದಿದ್ದರು.

ಅಂಚೆ ಕಚೇರಿಗಳ ಮೂಲಸೌಕರ್ಯವನ್ನು ಬಳಸಿಕೊಂಡರೆ ಈ ಸಮಸ್ಯೆಗೆ ಪರಿಣಾಮಕಾರಿ ಪರಿಹಾರ ಸಿಗಬಹುದು ಎಂಬ ಸಲಹೆಯನ್ನು ನೀಡಿದ್ದಾರೆ. ಈ ಸಲಹೆಗೆ ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆತಿರುವುದು ಗಮನಾರ್ಹವಾಗಿದೆ.

ಪ್ರಸ್ತುತ ದೇಶದ ಅನೇಕ ಗ್ರಾಮಗಳಲ್ಲಿ ಅಂಚೆ ಕಚೇರಿಗಳೇ ಪ್ರಮುಖ ಸರ್ಕಾರಿ ಸಂಪರ್ಕ ಕೇಂದ್ರಗಳಾಗಿವೆ. ಈ ಹಿನ್ನೆಲೆಯಲ್ಲಿ, ಅಲ್ಲಿ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಿದರೆ, ಅಗ್ಗದ ಔಷಧಿಗಳು ಜನರಿಗೆ ಹತ್ತಿರದಲ್ಲೇ ದೊರೆಯುತ್ತವೆ.

ಜೊತೆಗೆ, ಇಂಡಿಯಾ ಪೋಸ್ಟ್‌ನ ಕೊನೆಯ ಮೈಲಿ ಡೆಲಿವರಿ ವ್ಯವಸ್ಥೆಯನ್ನು ಬಳಸಿ, ಔಷಧಿಗಳನ್ನು ಮನೆಗಳಿಗೆ ತಲುಪಿಸುವುದು ಸಾಧ್ಯವಾಗುತ್ತದೆ.

ಇದು ಆರೋಗ್ಯ ಸೇವೆಗಳ ಲಭ್ಯತೆಯನ್ನು ಹೆಚ್ಚಿಸುವುದರ ಜೊತೆಗೆ, ಜನರ ಆರೋಗ್ಯದ ಮೇಲಿನ ಖರ್ಚನ್ನು ಕಡಿಮೆ ಮಾಡಲು ಸಹಕಾರಿ ಆಗಲಿದೆ.

ಈ ಯೋಜನೆಯ ಅನುಷ್ಠಾನದ ಸಾಧ್ಯತೆಗಳನ್ನು ಪರಿಶೀಲಿಸಲು ಸಂಬಂಧಪಟ್ಟ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಅದರ ಕುರಿತು ಸಮಗ್ರ ಅಧ್ಯಯನ ನಡೆಯುತ್ತಿದೆ.

ವಿವಿಧ ಇಲಾಖೆಗಳ ನಡುವೆ ಸಮಾಲೋಚನೆ ನಡೆಸಿ, ಪರಿಣಾಮಕಾರಿಯಾಗಿ ಯೋಜನೆಯನ್ನು ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುತ್ತದೆ.

ದೇಶದ ಕೊನೆಯ ವ್ಯಕ್ತಿಗೂ ಅಗ್ಗದ ಔಷಧಿ ತಲುಪಿಸುವ ಗುರಿಯನ್ನು ಸಾಧಿಸಲು ಇದು ಮಹತ್ವದ ಹೆಜ್ಜೆಯಾಗಲಿದೆ. ಈ ಯೋಜನೆ ಜಾರಿಗೆ ಬಂದಲ್ಲಿ, ಭಾರತದ ಸಾರ್ವಜನಿಕ

ಆರೋಗ್ಯ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂಬ ಆಶಾಭಾವನೆ ವ್ಯಕ್ತವಾಗಿದೆ.

ಇದನ್ನು ಓದಿ : https://vijayatimes.com/siddaramaiah-clarifies-about-ministerial-posts/

Tags: medicinenew schemepost

Related News

ಮೇ 20ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ನೋ ವರ್ಕ್ ನೋ ಪೇ ನಿಯಮ ಜಾರಿಗೆ ತರಲು ಮುಂದಾದ ಸರ್ಕಾರ
ಪ್ರಮುಖ ಸುದ್ದಿ

ಮೇ 20ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ನೋ ವರ್ಕ್ ನೋ ಪೇ ನಿಯಮ ಜಾರಿಗೆ ತರಲು ಮುಂದಾದ ಸರ್ಕಾರ

May 18, 2026
ಯುದ್ಧದ ಪರಿಣಾಮ ಜನಜೀವನದ ಮೇಲೆ ಬರೆ: ಮಾತ್ರೆ, ಸಿರಪ್, ವೈದ್ಯಕೀಯ ಉತ್ಪನ್ನಗಳಿಗೂ ದುಬಾರಿ ಸ್ಪರ್ಶ
ದೇಶ-ವಿದೇಶ

ಯುದ್ಧದ ಪರಿಣಾಮ ಜನಜೀವನದ ಮೇಲೆ ಬರೆ: ಮಾತ್ರೆ, ಸಿರಪ್, ವೈದ್ಯಕೀಯ ಉತ್ಪನ್ನಗಳಿಗೂ ದುಬಾರಿ ಸ್ಪರ್ಶ

May 18, 2026
ಚಿನ್ನದ ಹೂಡಿಕೆಗೆ ಹೊಸ ದಾರಿ: ಇಜಿಆರ್‌ ಮೂಲಕ ಡಿಜಿಟಲ್ ಬಂಗಾರಕ್ಕೆ ಹೆಚ್ಚಿದ ಬೇಡಿಕೆ
ದೇಶ-ವಿದೇಶ

ಚಿನ್ನದ ಹೂಡಿಕೆಗೆ ಹೊಸ ದಾರಿ: ಇಜಿಆರ್‌ ಮೂಲಕ ಡಿಜಿಟಲ್ ಬಂಗಾರಕ್ಕೆ ಹೆಚ್ಚಿದ ಬೇಡಿಕೆ

May 18, 2026
ಪೊಲೀಸ್ ಕಸ್ಟಡಿ ದೌರ್ಜನ್ಯಕ್ಕೆ ಬ್ರೇಕ್ : ರಾಜ್ಯದಲ್ಲಿ ‘ಸ್ಟ್ಯಾಂಡಿಂಗ್ ಆರ್ಡರ್-1060’ ಜಾರಿ
ಪ್ರಮುಖ ಸುದ್ದಿ

ಪೊಲೀಸ್ ಕಸ್ಟಡಿ ದೌರ್ಜನ್ಯಕ್ಕೆ ಬ್ರೇಕ್ : ರಾಜ್ಯದಲ್ಲಿ ‘ಸ್ಟ್ಯಾಂಡಿಂಗ್ ಆರ್ಡರ್-1060’ ಜಾರಿ

May 18, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.