ಗುಣಮಟ್ಟ ಪರೀಕ್ಷೆಯಲ್ಲಿ ಫೇಲ್ (medicines failed quality tests) ಆದ 90ಕ್ಕೂ ಹೆಚ್ಚು ಔಷಧಿಗಳು
ಪ್ಯಾರಸಿಟಮಾಲ್ ಸೇರಿ ಹಲವು ಮಾತ್ರೆಗಳ ಮೇಲೆ ಕೇಂದ್ರದಿಂದ ತುರ್ತು ಕ್ರಮ
ಅನುಮೋದನೆ ಇಲ್ಲದೆ ಮಾರಾಟವಾಗುತ್ತಿದ್ದ FDC ಔಷಧಿಗಳು ಪತ್ತೆ
New delhi : ದೇಶದ ಜನಸಾಮಾನ್ಯರ ಆರೋಗ್ಯಕ್ಕೆ ಸಂಬಂಧಿಸಿದಂತೆ (medicines failed quality tests) ಗಂಭೀರ ಆತಂಕ ಹುಟ್ಟಿಸುವಂತಹ ವಿಷಯವೊಂದು ಬೆಳಕಿಗೆ ಬಂದಿದೆ.
ಸಾಮಾನ್ಯವಾಗಿ ಜ್ವರ, ನೋವು ಸೇರಿದಂತೆ ಹಲವಾರು ಸಮಸ್ಯೆಗಳಿಗಾಗಿ ಬಳಸುವ ಪ್ಯಾರಸಿಟಮಾಲ್ (Paracetamol) ಸೇರಿ ಸುಮಾರು 90ಕ್ಕೂ ಹೆಚ್ಚು ಸ್ಥಿರ ಡೋಸೇಜ್ ಕಾಂಬಿನೇಶನ್ (Dosage Combination) (FDC) ಔಷಧಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಈ ಔಷಧಿಗಳಲ್ಲಿ ಹಲವಾರು ಕೇಂದ್ರ ಸರ್ಕಾರದ ಅಧಿಕೃತ ಅನುಮೋದನೆ ಇಲ್ಲದೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದವು ಎಂಬುದು ಇನ್ನಷ್ಟು ಆತಂಕಕಾರಿ ವಿಷಯವಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಇದು ದೊಡ್ಡ ಮಟ್ಟದ ಅಲಾರ್ಮ್ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಎಲ್ಲಾ ರಾಜ್ಯಗಳ ಔಷಧ ನಿಯಂತ್ರಣ ಅಧಿಕಾರಿಗಳಿಗೆ ತುರ್ತು ಸೂಚನೆಗಳನ್ನು ನೀಡಿದೆ.
ಮಾರುಕಟ್ಟೆಯಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿರುವ ಹಾಗೂ ಗುಣಮಟ್ಟದ (medicines failed quality tests) ಮಾನದಂಡಗಳನ್ನು ಪೂರೈಸದ ಔಷಧಿಗಳ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ವಿಶೇಷವಾಗಿ ಯಾವುದೇ ಅನುಮೋದನೆ ಇಲ್ಲದೆ ತಯಾರಿಸಲಾದ ಅಥವಾ ಮಾರಾಟವಾಗುತ್ತಿರುವ ಸ್ಥಿರ ಡೋಸೇಜ್ ಕಾಂಬಿನೇಶನ್ ಔಷಧಿಗಳನ್ನು ತಕ್ಷಣವೇ ಮಾರುಕಟ್ಟೆಯಿಂದ ಹಿಂಪಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ.
ಸ್ಥಿರ ಡೋಸೇಜ್ ಕಾಂಬಿನೇಶನ್ (FDC) ಔಷಧಿಗಳು ಎಂದರೆ ಎರಡು ಅಥವಾ ಹೆಚ್ಚು ಔಷಧೀಯ ಪದಾರ್ಥಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಸೇರಿಸಿ ತಯಾರಿಸಲಾದ ಒಂದೇ ಮಾತ್ರೆ
ಅಥವಾ ಸಿರಪ್ ಆಗಿರುತ್ತದೆ. ಇಂತಹ ಸಂಯೋಜನೆಗಳನ್ನು ಬಳಸಲು ವೈಜ್ಞಾನಿಕ ಆಧಾರ, ಕ್ಲಿನಿಕಲ್ ಪರೀಕ್ಷೆ ಹಾಗೂ ಕೇಂದ್ರ ಸರ್ಕಾರದ ಕಡ್ಡಾಯ ಅನುಮೋದನೆ ಅಗತ್ಯವಿರುತ್ತದೆ.
ಆದರೆ ಈಗ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ ಔಷಧಿಗಳಲ್ಲಿ ಹಲವಾರು ಯಾವುದೇ ವೈಜ್ಞಾನಿಕ ಆಧಾರವಿಲ್ಲದೆ ಮಾರುಕಟ್ಟೆಗೆ ಬಂದಿರುವುದು ಪತ್ತೆಯಾಗಿದೆ. ಇದು ಔಷಧ ನಿಯಂತ್ರಣ ವ್ಯವಸ್ಥೆಯ ಮೇಲೆಯೂ ಪ್ರಶ್ನೆಗಳನ್ನು ಹುಟ್ಟಿಸಿದೆ.
ಸರ್ಕಾರ ಈಗಾಗಲೇ ಈ ಔಷಧಿಗಳ ಉತ್ಪಾದನೆ, ಮಾರಾಟ ಮತ್ತು ವಿತರಣೆಯನ್ನು ತಕ್ಷಣವೇ ನಿಲ್ಲಿಸಲು ಆದೇಶ ನೀಡಿದೆ.
ಜೊತೆಗೆ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ ಲಭ್ಯವಿರುವ ಸ್ಟಾಕ್ ಅನ್ನು ವಶಪಡಿಸಿಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ.
ಅನುಮೋದನೆ ಇಲ್ಲದ ಔಷಧಿಗಳು ಮಾರುಕಟ್ಟೆಗೆ ಹೇಗೆ ಬಂದವು, ಯಾರು ಅನುಮತಿ ನೀಡಿದರು, ಯಾವ ಕಂಪನಿಗಳು ತಯಾರಿಸಿವೆ ಎಂಬುದರ ಕುರಿತು ತನಿಖೆ ಚುರುಕುಗೊಂಡಿದೆ.
ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಗ್ಯ ತಜ್ಞರ ಪ್ರಕಾರ, ಗುಣಮಟ್ಟವಿಲ್ಲದ ಅಥವಾ ವೈಜ್ಞಾನಿಕ ಆಧಾರವಿಲ್ಲದ ಔಷಧಿಗಳನ್ನು ಸೇವಿಸುವುದರಿಂದ ಕಿಡ್ನಿ, ಯಕೃತ್ತು ಸೇರಿದಂತೆ ದೇಹದ ಪ್ರಮುಖ ಅಂಗಾಂಗಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಕೆಲವು ಸಂದರ್ಭಗಳಲ್ಲಿ ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
ಆದ್ದರಿಂದ ಸಾರ್ವಜನಿಕರು ವೈದ್ಯರ ಸಲಹೆ ಇಲ್ಲದೆ ಯಾವುದೇ ಮಾತ್ರೆಗಳನ್ನು ಸೇವಿಸಬಾರದು, ವಿಶೇಷವಾಗಿ ಸ್ವಯಂ ಚಿಕಿತ್ಸೆ ಮಾಡುವುದನ್ನು ತಪ್ಪಿಸಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ. ಔಷಧಿಗಳನ್ನು ಖರೀದಿಸುವಾಗ ವೈದ್ಯರ ಚೀಟಿ ಮತ್ತು ಸರಿಯಾದ ಮೆಡಿಕಲ್ ಅಂಗಡಿಯಿಂದ ಮಾತ್ರ ಖರೀದಿಸುವುದು ಅತ್ಯಂತ ಅಗತ್ಯವಾಗಿದೆ.
ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಮತ್ತು ಆರೋಗ್ಯ ಇಲಾಖೆ ತೆಗೆದುಕೊಳ್ಳುತ್ತಿರುವ ಕ್ರಮಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಕಟ್ಟುನಿಟ್ಟಾಗುವ ಸಾಧ್ಯತೆ ಇದೆ.
ಇದನ್ನು ಓದಿ : https://vijayatimes.com/towing-service-begins-in-bengaluru/