ಪೆಟ್ರೋಲ್-ಡೀಸೆಲ್ ದರ ಏರಿಕೆ (medicines petrol diesel price hike) ಬೆನ್ನಲ್ಲೇ 500ಕ್ಕೂ ಹೆಚ್ಚು ಔಷಧಿಗಳ ಬೆಲೆ ಏರಿಕೆ
ಯುದ್ಧದ ಎಫೆಕ್ಟ್, ಔಷಧ ದರ ಸರಾಸರಿ 15 ರಷ್ಟು ಏರಿಕೆ
ಕಾಸ್ಮೆಟಿಕ್ , ಬೇಬಿ ಪ್ರಾಡಕ್ಟ್ ಗಳ ಬೆಲೆಯೂ ಏರಿಕೆ
Bengaluru : ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಯುದ್ಧ ಪರಿಸ್ಥಿತಿ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ (medicines petrol diesel price hike) ಕ್ರೂಡ್ ಆಯಿಲ್ ದರ ಏರಿಕೆಯಿಂದ ಸಾಮಾನ್ಯ ಜನರ ಜೀವನ ಮತ್ತಷ್ಟು ಸಂಕಷ್ಟದತ್ತ ಸಾಗುತ್ತಿದೆ.
ಈಗಾಗಲೇ ಪೆಟ್ರೋಲ್, ಡೀಸೆಲ್, ಎಲ್ಪಿಜಿ ಗ್ಯಾಸ್ ಬೆಲೆ ಏರಿಕೆಯಿಂದ ಬಳಲುತ್ತಿರುವ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ.
ಶುಗರ್, ಬಿಪಿ, ಜ್ವರ, ಕೆಮ್ಮು ಸೇರಿದಂತೆ ದಿನನಿತ್ಯ ಬಳಸುವ 600ಕ್ಕೂ ಹೆಚ್ಚು ಔಷಧಿಗಳ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಆರೋಗ್ಯ ಕಾಪಾಡಿಕೊಳ್ಳಲು ಅವಶ್ಯಕವಾಗಿರುವ ಮಾತ್ರೆಗಳೇ ದುಬಾರಿಯಾಗುತ್ತಿರುವುದರಿಂದ ಮಧ್ಯಮ ವರ್ಗ ಹಾಗೂ ಬಡಜನತೆ ಆತಂಕಕ್ಕೆ ಒಳಗಾಗಿದ್ದಾರೆ.

ಔಷಧ ತಯಾರಿಕೆಯಲ್ಲಿ ಬಳಸುವ ಹಲವು ಮೂಲಪದರಾರ್ಥಗಳು ಪೆಟ್ರೋಕೆಮಿಕಲ್ ಉತ್ಪನ್ನಗಳ ಮೇಲೆ ಅವಲಂಬಿತವಾಗಿವೆ. ಜಾಗತಿಕ ಯುದ್ಧ ಪರಿಸ್ಥಿತಿಯಿಂದ ಸಪ್ಲೈ ಚೈನ್ ವ್ಯತ್ಯಯಗೊಂಡ ಪರಿಣಾಮ ಕಚ್ಚಾ ವಸ್ತುಗಳ ಕೊರತೆ ಉಂಟಾಗಿದೆ.
ಇದರಿಂದ ಫಾರ್ಮಾ ಕಂಪನಿಗಳ ಉತ್ಪಾದನಾ ವೆಚ್ಚ ಹೆಚ್ಚಳವಾಗಿದ್ದು, ಅದರ ನೇರ ಪರಿಣಾಮ ಔಷಧಗಳ (medicines petrol diesel price hike) ದರದ ಮೇಲೂ ಬಿದ್ದಿದೆ.
ಮಾರುಕಟ್ಟೆಯಲ್ಲಿ ಈಗಾಗಲೇ ಹೊಸ ಬ್ಯಾಚ್ನ ಮಾತ್ರೆಗಳು ಮತ್ತು ಸಿರಪ್ಗಳು ಹೆಚ್ಚಿದ ದರದಲ್ಲಿ ಮಾರಾಟವಾಗುತ್ತಿವೆ.
ಕೆಲವು ಔಷಧಿಗಳ ಬೆಲೆ ಸರಾಸರಿ 10 ರಿಂದ 15 ಶೇಕಡಾ ವರೆಗೆ ಏರಿಕೆಯಾಗಿದೆ ಎಂದು ಮೆಡಿಕಲ್ ಅಂಗಡಿ ಮಾಲೀಕರು ತಿಳಿಸಿದ್ದಾರೆ.
ಪ್ಯಾರಾಸಿಟಮಾಲ್, ಡಯಾಬಿಟಿಸ್ ಔಷಧಿಗಳು, ಹೃದಯ ಸಂಬಂಧಿ ಮಾತ್ರೆಗಳು, ಗ್ಯಾಸ್ಟ್ರಿಕ್ ಟ್ಯಾಬ್ಲೆಟ್ಗಳು, ಕೆಮ್ಮಿನ ಸಿರಪ್, ಐರನ್ ಟಾನಿಕ್ ಸೇರಿದಂತೆ ಅನೇಕ
ದಿನಬಳಕೆಯ ಔಷಧಗಳ ಬೆಲೆ ಏರಿಕೆಯಾಗಿದೆ. ಇದರಿಂದ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಹೆಚ್ಚುವರಿ ಹೊರೆ ಉಂಟಾಗಿದೆ.
ವಿಶೇಷವಾಗಿ ಪ್ರತಿದಿನ ಮಾತ್ರೆ ಸೇವಿಸಬೇಕಾದ ಶುಗರ್ ಮತ್ತು ಬಿಪಿ ರೋಗಿಗಳು ತಿಂಗಳ ಖರ್ಚಿನಲ್ಲಿ ಗಣನೀಯ ಏರಿಕೆಯನ್ನು ಅನುಭವಿಸುತ್ತಿದ್ದಾರೆ. ಆರೋಗ್ಯವೇ ಮುಖ್ಯವಾದ ಈ ಕಾಲದಲ್ಲಿ ಔಷಧ ಬೆಲೆ ಏರಿಕೆ ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.
ಇದರ ಜೊತೆಗೆ ಕಾಸ್ಮೆಟಿಕ್ ಉತ್ಪನ್ನಗಳು, ಬೇಬಿ ಕೇರ್ ವಸ್ತುಗಳು ಹಾಗೂ ವೈದ್ಯಕೀಯ ಉಪಕರಣಗಳ ದರದಲ್ಲಿಯೂ ಏರಿಕೆ ಕಾಣಿಸುತ್ತಿದೆ.
ಹಳೆಯ ಸ್ಟಾಕ್ ಮುಗಿದ ನಂತರ ಮಾರುಕಟ್ಟೆಗೆ ಬರುತ್ತಿರುವ ಹೊಸ ಉತ್ಪನ್ನಗಳು ಹೆಚ್ಚಿದ ಬೆಲೆಯೊಂದಿಗೆ ಲಭ್ಯವಾಗುತ್ತಿವೆ.
ಯುದ್ಧ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಲೆ ಏರಿಕೆ ಸಂಭವಿಸಬಹುದು ಎಂಬ ಆತಂಕ ವ್ಯಾಪಾರಿಗಳಲ್ಲಿಯೂ ಇದೆ.
ಸಾರಿಗೆ ವೆಚ್ಚ, ಇಂಧನ ದರ ಹಾಗೂ ಆಮದು ಅವಲಂಬನೆ ಹೆಚ್ಚಿರುವ ಕಾರಣ ಎಲ್ಲಾ ಕ್ಷೇತ್ರಗಳ ಮೇಲೂ ಪರಿಣಾಮ ಗೋಚರಿಸುತ್ತಿದೆ.
ಒಟ್ಟಾರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯ ಪರಿಣಾಮ ಈಗ ಆಹಾರ ಪದಾರ್ಥಗಳಿಂದ ಹಿಡಿದು ಔಷಧಿಗಳವರೆಗೂ ವ್ಯಾಪಿಸಿದೆ.
ಸಾಮಾನ್ಯ ಜನರ ಬದುಕಿನ ಮೇಲೆ ದಿನದಿಂದ ದಿನಕ್ಕೆ ದುಬಾರಿ ಬರೆ ಹೆಚ್ಚುತ್ತಿದ್ದು, ಸರ್ಕಾರ ತಕ್ಷಣವೇ ಬೆಲೆ ನಿಯಂತ್ರಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬರುತ್ತಿದೆ.
ಆರೋಗ್ಯ ಸೇವೆಗಳು ಎಲ್ಲರಿಗೂ ಸುಲಭವಾಗಿ ದೊರೆಯಬೇಕಾದ ಸಮಯದಲ್ಲಿ ಔಷಧಗಳ ಬೆಲೆ ಏರಿಕೆ ಜನಸಾಮಾನ್ಯರ ಬದುಕನ್ನು ಮತ್ತಷ್ಟು ಕಠಿಣಗೊಳಿಸಿದೆ.
ಇದನ್ನು ಓದಿ : https://vijayatimes.com/new-way-to-invest-in-gold/