- ಕರ್ತವ್ಯ ನಿರತ ASI ಅಧಿಕಾರಿಗೆ ಹೃದಯಾಘಾತ.
- ಹುಬ್ಬಳ್ಳಿಯ ಎಎಸ್ಐ ಮೀರಾ ನಾಯಕ ನಿಧನ (Meera Nayak suffers heart attack)
- ಗೋಕಾಕ ಮಹಾಲಕ್ಷ್ಮಿದೇವಿ ಜಾತ್ರೆಯ ಭದ್ರತೆಗೆ ನಿಯೋಜನೆಗೊಂಡಿದ್ದ ASI
ಬೆಳಗಾವಿ: ಹಾರ್ಟ್ ಅಟ್ಯಾಕ್ ಎನ್ನುವ ಮಹಾಮಾರಿ ರಾಜ್ಯದಲ್ಲಿ ಮರಣಮೃದಂಗನ್ನಾಡುತ್ತಿದ್ದು, ಹಾಸನ(Hassan), ಶಿವಮೊಗ್ಗ(Shimoga), ವಿಜಯಪುರದಲ್ಲಿ(Vijayapura) ಹೃದಯಾಘಾತಕ್ಕೆ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

ಇದೀಗ ಬೆಳಗಾವಿಯಲ್ಲೂ(Belgaum) ಕೂಡ ಹಾರ್ಟ್ ಅಟ್ಯಾಕ್ ಪ್ರಕರಣ ಹೆಚ್ಚಾಗುತ್ತಿದೆ. ಕರ್ತವ್ಯದಲ್ಲಿದ್ದಾಗಲೇ ಎಎಸ್ಐ(ASI) ಅಧಿಕಾರಿ ಮೀರಾ ನಾಯಕ(Meera Nayak) ಹೃದಯಾಘಾತದಿಂದ ಸಾ*ನ್ನಪ್ಪಿದ್ದಾರೆ.
ಎಎಸ್ಐ ಮೀರಾ ನಾಯಕ ಹುಬ್ಬಳ್ಳಿಯ ಎಪಿಎಂಸಿ (APMC) ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಯಿಸುತ್ತಿದ್ದು,
ಗೋಕಾಕ(Gokaka) ಮಹಾಲಕ್ಷ್ಮಿದೇವಿ ಜಾತ್ರೆಯ ಹಿನ್ನೆಲೆಯಲ್ಲಿ ಮೀರಾ ನಾಯಕರನ್ನು ಜಾತ್ರೆಯ ಬಂದೋಬಸ್ತಿಗೆ ನಿಯೋಜನೆ ಮಾಡಲಾಗಿತ್ತು.
ಹೀಗಾಗಿ ನಗರದ ಎಸ್‌ಸಿ- ಎಸ್‌ಟಿ ಬಾಲಕರ ವಸತಿ ನಿಲಯದಲ್ಲಿ ತಂಗಿದ್ದರು. ಇಂದು ಬೆಳಗ್ಗೆ 6 ಗಂಟೆಗೆ ಎಲ್ ಜೆ ಮೀರಾ ನಾಯಕರಿಗೆ(56) ಎದೆ ನೋವು ಕಾಣಿಸಿದೆ. ತೀವ್ರ ಹೃದಯಾಘಾತದಿಂದ(heart attack) ಜೀವ ಬಿಟ್ಟಿದ್ದಾರೆ.
ಸದ್ಯ ಎಎಸ್‌ಐ ಮೀರಾ ನಾಯಕ ಮೃತದೇಹವನ್ನು ಗೋಕಾಕ ಸರ್ಕಾರಿ ಆಸ್ಪತ್ರೆಯ(Government Hospital) ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ.
ಇದನ್ನು ಓದಿ :ಬೈಕ್ ಟ್ಯಾಕ್ಸಿ ಸೇವೆಗೆ ಕೇಂದ್ರಸರ್ಕಾರ ಅಸ್ತು, ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ನಿಷೇಧ ಬೆನ್ನಲ್ಲೇ ಗೈಡ್ಲೈನ್ಸ್
ಮರಣೋತ್ತರ ಪರೀಕ್ಷೆ(Postmortem examination) ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಗುತ್ತದೆ. (Meera Nayak suffers heart attack) ಈ ಬಗ್ಗೆ ಗೋಕಾಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.