Bengaluru: ಕಳೆದ ಕೆಲ ದಿನಗಳಿಂದ ಕರ್ನಾಟಕ ಕಾಂಗ್ರೆಸ್ನಲ್ಲಿ (Karnataka Congress) ಕುರ್ಚಿ ಫೈಟ್ ದಿನಕ್ಕೊಂದು ತಿರುವು ಪಡೆಯುತ್ತಿದೆ. ಡಿಕೆ ಶಿವಕುಮಾರ್ (DK Sivakumar) ಸಿಎಂ ಆಗಬೇಕೆಂದು ಹಲವರು ಬ್ಯಾಟಿಂಗ್ ಮಾಡುತ್ತಿದ್ರೆ, ಮತ್ತೊಂದೆಡೆ ಸಿದ್ದರಾಮಯ್ಯ (Siddaramaiah) ಬಣದ ದಲಿತ ಸಚಿವರು (Dalit Minister) ಕೆಪಿಸಿಸಿ ಅಧ್ಯಕ್ಷರ (KPCC President) ಬದಲಾವಣೆಗೆ ಪಟ್ಟುಹಿಡಿದಿದ್ದಾರೆ. ಮೇಲಿಂದ ಮೇಲೆ ದೆಹಲಿಗೆ ರೌಂಡ್ಸ್ (Rounds to Delhi) ಹಾಕುತ್ತಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿರುವ ಸಚಿವ ಕೆ.ಎನ್.ರಾಜಣ್ಣ (Minister K. N. Rajanna) ಒಬ್ಬರಿಗೆ ಒಂದೇ ನಿಯಮದಡಿ ಕೆಪಿಸಿಸಿ ಅಧ್ಯಕ್ಷರು (KPCC President) ಬದಲಾವಣೆ ಆಗಲೇಬೇಕೆಂದು ಹೈಕಮಾಂಡ್ (High Command) ಬಳಿ ಬೇಡಿಕೆ ಮುಂದಿಟ್ಟಿದ್ದಾರೆ. ಮೂರು ದಿನ ದೆಹಲಿಯಲ್ಲೇ ಬೀಡುಬಿಟ್ಟು ಖರ್ಗೆ (Kharge) ಅವರನ್ನು ಭೇಟಿಯಾಗಿರುವ ರಾಜಣ್ಣ, ಹೈಕಮಾಂಡ್ (High Command) ಅವಕಾಶ ನೀಡಿದರೆ ಸಚಿವ ಸ್ಥಾನಕ್ಕೆ (Minister position) ರಾಜೀನಾಮೆ ನೀಡಿ ಕೆಪಿಸಿಸಿ ಅಧ್ಯಕ್ಷರಾಗಲು ಸಿದ್ಧ ಎಂದು ಹೇಳಿದ್ದಾರೆ.

ಒಂದೆಡೆ ಸಚಿವ ರಾಜಣ್ಣ (Minister Rajanna) ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ರೆ, ಬೆಳಗಾವಿ ಸಾಹುಕಾರ ಸತೀಶ್ ಜಾರಕಿಹೊಳಿ (Satish Jarakiholi) ಸೈಲೆಂಟ್ ಆಗಿಯೇ ಕುರ್ಚಿಗೆ ಟವೆಲ್ ಹಾಕಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ (Change of KPCC President) ಅಂದುಕೊಂಡಷ್ಟು ಸುಲಭವಲ್ಲ ಅನ್ನೋದು ಕಾಂಗ್ರೆಸ್ ಹೈಕಮಾಂಡ್ಗೆ (Congress High Command) ಮನವರಿಕೆಯಾಗಿದೆ. ಯಾಕಂದ್ರೆ ಡಿಕೆ ರಾಜ್ಯದ ಅಂತ್ಯಂತ ಪ್ರಬಲ ನಾಯಕ (Strong leader). ಇವರಂತೆ ಪ್ರಬಲ ಹಾಗೂ ಸಕ್ರಿಯ ನಾಯಕನಿಗಾಗಿ ಹುಡುಕಾಟ ಶುರುವಾಗಿದೆ.
ವೇಗದ ಅಭ್ಯರ್ಥಿ ಹುಡುಕಾಟದಲ್ಲಿ ನಾಯಕರು (Leaders) ನಿರತರಾಗಿದ್ದಾರೆ. ಒಂದು ವೇಳೆ ಸೂಕ್ತ ಕ್ಯಾಂಡಿಟೇಟ್ (Candidate) ಸಿಕ್ರೂ ಅದಕ್ಕೆ ಸಿಎಂ (CM) ಹಾಗೂ ಡಿಸಿಎಂ (DCM) ಒಪ್ಪಿಗೆ ಬೇಕು. ಜಾತಿ ಸಮೀಕರಣದ ಬಗ್ಗೆಯೂ ಚಿಂತನೆ ನಡೆದಿದೆ. ಅಹಿಂದ ಹಾಗೂ ಮೇಲ್ವರ್ಗ (Ahinda and upper class) ಎರಡೂ ಸಮುದಾಯ ಒಪ್ಪುವ ನಾಯಕ ಬೇಕು. ಈ ಮಧ್ಯೆ ಜಿಲ್ಲಾ ಪಂಚಾಯ್ತಿ (Zilla Panchayat), ತಾಲೂಕು ಪಂಚಾಯ್ತಿ ಚುನಾವಣೆಯ (Taluk Panchayat Elections) ಸಾರಥ್ಯಕ್ಕಾಗಿ ಡಿಕೆ ಪಟ್ಟು ಹಿಡದಿದ್ದಾರಂತೆ. ಈ ಎಲ್ಲ ಕಾರಣಗಳಿಂದ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಬ್ರೇಕ್ ಬಿದ್ದಿದೆ.ಇಂದು ಅಥವಾ ನಾಳೆ ಅಹಿಂದ ಸಚಿವರಿಂದ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಕೆ ಎನ್ ರಾಜಣ್ಣ ಹಾಗೂ ಸತೀಶ್ ಜಾರಕಿಹೊಳಿ (Satish Jarakiholi) ಭೇಟಿಯಾಗಿ ಮಾತುಕತೆ ನಡೆಸಿ ದೆಹಲಿಯ ನಾಯಕರ (Leaders of Delhi) .ಮೆಸೇಜ್ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಬಳಿಕ ಎಸ್.ಸಿ ಎಸ್ಟಿ ಸಮಾವೇಶದ (SC ST Convention) ದಿನಾಂಕ ಫಿಕ್ಸ್ ಮಾಡಲಿದ್ದಾರೆ.