ಕನಾ೯ಟಕ,ಜೂ.18ರಾಜ್ಯದಲ್ಲಿ ಮೇಕೆದಾಟು ಆಣೆಕಟ್ಟು ಯೋಜನೆ ವಿಚಾರದಲ್ಲಿ ಸದ್ಯ ಹಸಿರು ನ್ಯಾಯ ಮಂಡಳಿಯಿಂದ ಕರ್ನಾಟಕಕ್ಕೆ ಬಿಗ್ ರಿಲೀಫ್ ನೀಡಿದೆ.ಕರ್ನಾಟಕ ವಿರುದ್ಧದ ಪ್ರಕರಣವನ್ನು ಎನ್ಜಿಟಿ((National Green Tribunal) ಮುಕ್ತಾಯಗೊಳಿಸಿದೆ.
ಪತ್ರಿಕಾ ವರದಿ ಆಧರಿಸಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿತ್ತು. ಅನುಮತಿ ಇಲ್ಲದೇ ಕಾಮಗಾರಿ ಸಿದ್ಧತೆ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಸ್ಥಳ ಪರಿಶೀಲನೆಗೆ ಜಂಟಿ ಸಮಿತಿ ರಚಿಸಲಾಗಿತ್ತು. ಅಲ್ಲದೇ ಜಂಟಿ ಸಮಿತಿಗೆ ಜುಲೈ 5 ರೊಳಗೆ ವರದಿ ನೀಡಲು ಕೆ. ರಾಮಕೃಷ್ಣನ್ ಹಾಗೂ ತಜ್ಞ ಸದಸ್ಯ ಕೆ. ಸತ್ಯಗೋಪಾಲ್ ಅವರಿದ್ದ ಪೀಠ ಸೂಚಿಸಿತ್ತು.
ಮೇಕೆದಾಟು ಯೋಜನೆಗೆ ಕೇಂದ್ರ ತಾತ್ವಿಕ ಒಪ್ಪಿಗೆ ನೀಡಿದೆ. ಸದ್ಯ ಪರಿಸರ ಅನುಮೋದನೆ ಪ್ರಕ್ರಿಯೆ ಬಾಕಿಯಿದೆ. ಮೇಕೆದಾಟು ಯೋಜನೆ ಪ್ರಶ್ನಿಸಿ ಈಗಾಗಲೇ ಅರ್ಜಿ ಸಲ್ಲಿಕೆಯಾಗಿದೆ. ತಮಿಳುನಾಡು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ.ಈ ಮಧ್ಯೆ ಚೆನ್ನೈ ಎನ್ ಜಿಟಿಯಿಂದ ಸಮಿತಿ ರಚನೆ ಸರಿಯಲ್ಲ ಎಂದು ಸರ್ಕಾರದ ಪರ ಎಜಿ ಪ್ರಭುಲಿಂಗ್ ನಾವದಗಿ ವಾದಿಸಿದ್ದರು. ವಾದ ಮನ್ನಿಸಿ ಪ್ರಕರಣವನ್ನು ಎನ್ಜಿಟಿ ಮುಕ್ತಾಯಗೊಳಿಸಿದೆ.
ಮೇಕೆದಾಟು ಯೋಜನೆ 9 ಸಾವಿರ ಕೋಟಿ ರೂ ವೆಚ್ಚದ ಯೋಜನೆಯಾಗಿದ್ದು. ಇದರಿಂದ 4.75 ಟಿಎಂಸಿ ನೀರು ಬಳಕೆ ಉದ್ದೇಶ ಹೊಂದಲಾಗಿದೆ. ಈ ಯೋಜನೆ ರಾಮನಗರ ಹಾಗೂ ಚಾಮರಾಜನಗರ ಜಿಲ್ಲಾ ಗಡಿ ಭಾಗಕ್ಕೆ ಬರುತ್ತೆ. ಇದರಿಂದ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಹೊಂದಲಾಗಿದ್ದು ಜೊತೆಗೆ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಉದ್ದೇಶವನ್ನೂ ಹೊಂದಿದೆ. ಆದರೆ ತಮಿಳುನಾಡು ಯೋಜನೆಗೆ ಆಕ್ಷೇಪ ಎತ್ತಿ ಸುಪ್ರೀಂಕೋರ್ಟ್ ಮೊರೆ ಹೋಗಿದೆ.