ಹಾವೇರಿ, ಡಿ. 18: ಕೊರೊನಾದಿಂದ ನಷ್ಟ ಅನುಭವಿಸುತ್ತಿದ್ದ ಮೆಣಸಿನಕಾಯಿ ಬೆಳೆದ ರೈತರು ಒಂದು ಕಡೆಯಾದರೆ, ಇನ್ನೊಂದೆಡೆ ಕೃಷಿ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವ ಬಗ್ಗೆ ರೈತರ ಹೋರಾಟಗಳು ನಡೆಯುತ್ತಿದೆ. ಕ್ವಿಂಟಲ್ಗೆ 36,999 ರೂ.ಮೆಣಸಿಕಾಯಿ ಮಾರಾಟವಾಗಿ ದಾಖಲೆ ಬರೆದಿದ್ದು, ಮೆಣಸಿನಕಾಯಿ ಬೆಳೆದ ರೈತರಿಗೆ ಸಿಹಿ ಸುದ್ದಿ ಸಿಕ್ಕಿದಂತಾಗಿದೆ.
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಬ್ಯಾಡಗಿ ಮೆಣಸಿನಕಾಯಿ 36, 999 ರೂ. ಮಾರಾಟವಾದರೆ, ಕಡ್ಡಿ ಮೆಣಸಿನಕಾಯಿ 32,009 ರೂಪಾಯಿಗೆ ಮಾರಾಟವಾಗಿದೆ. ಇದು ದರ ಏರಿಕೆಯಲ್ಲಿ ಇತಿಹಾಸದಲ್ಲೇ ದಾಖಲೆ ಬರೆದಿರುವ ಹೆಜ್ಜೆಯಾಗಿದೆ. ಕಳೆದ ಸೋಮವಾರದ ದರಕ್ಕೆ ಹೋಲಿಸಿದರೆ ಗುರುವಾರ ಮೆಣಸಿನಕಾಯಿ ದರ 1440 ರೂ. ಏರಿಕೆಯಾಗಿದೆ.