ಹೊಸದಿಲ್ಲಿ, ಮಾ. 14: ಕೆಲಸ ಕಳೆದುಕೊಂಡು, ದುಷ್ಕರ್ಮಿಗಳಿಂದ ದರೋಡೆಗೆ ಒಳಗಾಗಿದ್ದ ವ್ಯಕ್ತಿಯೊಬ್ಬ ಐದು ತಿಂಗಳಲ್ಲಿ ಸುಮಾರು 1200 ಕಿ.ಮೀ. ನಡೆದಿರುವ ಧಾರುಣ ಘಟನೆಯೊಂದು ಬೆಳಕಿಗೆ ಬಂದಿದೆ.
ಬೆರ್ಜೊಮ್ ಬಂಡ ಪಹಾಡಿಯಾ (56) ಅವರು ದಿಲ್ಲಿಯಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದರು. ಕೋವಿಡ್ ಕಾರಣದಿಂದಾಗಿ ಕೆಲಸ ಕಳೆದುಕೊಂಡಿದ್ದ ಅವರು ಪ್ರಯಾಣದ ಬಹುತೇಕ ಅವಧಿಯಲ್ಲಿ ಊಟ, ನೀರು ಇಲ್ಲದೆ ರೈಲ್ವೆ ಟ್ರ್ಯಾಕ್ ಅನುಸರಿಸಿ ತಮ್ಮ ಜಾರ್ಖಂಡ್‌ನ ತಮ್ಮೂರಾದ ಶಿವಗಂಜ್ ತಲುಪಿದ್ದಾರೆ.
ಈ ದಾರಿಯಲ್ಲಿ ನಡೆದು ಬರುವಾಗ ಅವರ ಬಳಿ ಇದ್ದ ವಸ್ತುಗಳನ್ನು ದರೋಡೆಕೋರರು ಕಸಿದುಕೊಂಡಿದ್ದಾರೆ. ಯಾವುದೇ ಗುರುತಿನ ಚೀಟಿ ಇಲ್ಲದೆ ನಡೆದು ಬರುವಾಗ ಅವರು ರೋಟಿ ಬ್ಯಾಂಕ್ ಎನ್ನುವ ಸ್ವಯಂ ಸೇವಾ ಸಂಸ್ಥೆಯ ಸಹಾಯದಿಂದ ಆಹಾರ ಪಡೆದಿದ್ದಾರೆ. ಅವರ ನೆರವು ಪಡೆದು ಬಸ್ ಮೂಲಕ ತಮ್ಮ ಊರು ಸೇರಿದ್ದಾರೆ.