Bengaluru: ಕೆಲ ದಿನಗಳ ಹಿಂದಷ್ಟೇ ತಂತ್ರಜ್ಞಾನ ದೈತ್ಯ ಗೂಗಲ್ (Technology giant Google) ಬೆಂಗಳೂರಿನಲ್ಲಿ ತನ್ನ ಹೊಸ ಕ್ಯಾಂಪಸ್ (New campus) ಅನ್ನು ಉದ್ಘಾಟಿಸಿದೆ. ಇದು ಜಾಗತಿಕವಾಗಿ (Globally) ತನ್ನ ಅತಿದೊಡ್ಡ ಕಚೇರಿಗಳಲ್ಲಿ ಒಂದಾಗಿದೆ ಎಂದು ಹೇಳಲಾಗಿದೆ. ಮಹಾದೇವಪುರದಲ್ಲಿರುವ ಗೂಗಲ್ ಅನಂತ ಕ್ಯಾಂಪಸ್ (Google Infinite Campus) 1.6 ಮಿಲಿಯನ್ ಚದರ ಅಡಿ (1.6 million sq.ft) ವಿಸ್ತೀರ್ಣದಲ್ಲಿದ್ದು, ಭಾರತದ ಅತಿದೊಡ್ಡ ಗೂಗಲ್ ಕಚೇರಿ (India’s largest Google office) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈದೀಗ ಗೂಗಲ್ನ ಹೊಸ ಕಚೇರಿ (Google’s new office) ನಿರ್ಮಾಣವಾದ ಬೆನ್ನಲ್ಲೇ ಸಾಮಾಜಿಕ ಮಾಧ್ಯಮ (Social media) ದೈತ್ಯ ಮೆಟಾ (Meta) ಬೆಂಗಳೂರಿನಲ್ಲಿ ಹೊಸ ಕಚೇರಿಯನ್ನು ಸ್ಥಾಪಿಸಲು ಸಜ್ಜಾಗಿದೆ ಎಂದು ಮನಿ ಕಂಟ್ರೋಲ್ ವರದಿ (Money Control Report) ತಿಳಿಸಿದೆ . ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನ (Facebook and Instagram) ಮಾತೃ ಕಂಪನಿಯು (The parent company) ಭಾರತದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳುತ್ತಿದ್ದಂತೆ ನಗರದಲ್ಲಿ ಎಂಜಿನಿಯರಿಂಗ್ ಮತ್ತು ಉತ್ಪನ್ನ ಪಾತ್ರಗಳಿಗೆ (Engineering and product roles) ಸಕ್ರಿಯವಾಗಿ ನೇಮಕಾತಿ ಮಾಡಿಕೊಳ್ಳುತ್ತಿದೆ. ಹಾಗಾಗಿ ಎಲ್ಲ ಕಾರಣಗಳಿಂದಲೂ ಬೆಂಗಳೂರು ಬೆಸ್ಟ್ ಜಾಗ (Bangalore is the best place) ಎಂದು ಮೆಟಾ (Meta) ಕಂಡು ಕೊಂಡಿದೆ.
ಕಳೆದ ವರ್ಷ ಮೆಟಾ ಉದ್ಯೋಗ ಕಡಿತವು (Meta job cuts) ಸಾವಿರಾರು ನೌಕರರ ಮೇಲೆ ಪರಿಣಾಮ ಭೀರಿತ್ತು. ಈ ಭಾರಿಯು ಟೆಕ್ ವಲಯದಲ್ಲಿ Layoff ನಲ್ಲಿ Meta ಕಂಪನಿ (Meta Company) ಮೊದಲ ಸ್ಥಾನದಲ್ಲಿದೆ.ಮಾರ್ಕ್ ಜುಕರ್ಬರ್ಗ್ (Mark Zuckerberg) ನೇತೃತ್ವದ ಮೆಟಾ ಕಂಪನಿಯು AI ಅಭಿವೃದ್ಧಿ (AI development), ಅನುಷ್ಠಾನದ ನಿರ್ಧಾರಗಳು (Implementation decisions) ವಿವಿಧ ವಲಯಗಳ ಉದ್ಯೋಗಿಗಳ ಕೆಲಸ ಮೇಲೆ ಪ್ರಭಾವ ಭೀರಿದೆ. ಆದರೂ ಸಹ ಹೊಸ ಇಂಜಿನಿಯರ್ ಗಳಿಗೆ ಭಾರೀ ಅವಕಾಶ ನೀಡಲಿದೆ.ಇನ್ನು ಮೆಟಾ ಈಗಾಗಲೇ ಬೆಂಗಳೂರಿನ ಎಂಬಸಿ ಗಾಲ್ಫ್ ಲಿಂಕ್ಸ್ನಿಂದ (Embassy Golf Links) ಕಾರ್ಯನಿರ್ವಹಿಸುತ್ತಿದ್ದರೂ, ಹೊಸ ಕೇಂದ್ರವನ್ನು ಸ್ಥಾಪಿಸಿ ಕೃತಕ ಬುದ್ಧಿಮತ್ತೆ-ಚಾಲಿತ ಎಂಜಿನಿಯರಿಂಗ್ನ (Artificial intelligence-driven engineering) ಮೇಲೆ ಕೇಂದ್ರೀಕರಿಸಬಯಸುತ್ತಿರುವ ಕಾರಣದಿಂದಾಗಿ ಬೆಂಗಳೂರು ಉತ್ತಮ (Bangalore is better) ಎಂಬುದಾಗಿ ನಿರ್ಣಯಿಸಿದೆ. ಹಾಗಾಗಿ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಮೆಟಾ ಅಧಿಕೃತವಾಗಿ ಕಚೇರಿಯ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದೆ.