• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ತುಮಕೂರಿನವರೆಗೂ ನಮ್ಮ ಮೆಟ್ರೋ ವಿಸ್ತರಣೆ: ಡಿಪಿಆರ್ ಸಿದ್ದಪಡಿಸಲು ಟೆಂಡರ್‌ ಕರೆದ BMRCL

Teju Srinivas by Teju Srinivas
in ಪ್ರಮುಖ ಸುದ್ದಿ, ಮಾಹಿತಿ, ರಾಜ್ಯ, ವಿಜಯ ಟೈಮ್ಸ್‌
ತುಮಕೂರಿನವರೆಗೂ ನಮ್ಮ ಮೆಟ್ರೋ ವಿಸ್ತರಣೆ: ಡಿಪಿಆರ್ ಸಿದ್ದಪಡಿಸಲು ಟೆಂಡರ್‌ ಕರೆದ BMRCL
0
SHARES
931
VIEWS
Share on FacebookShare on Twitter
  • ಮಾದಾವರದಿಂದ ತುಮಕೂರಿನವರೆಗೂ (Metro extension to Tumkur) ನಮ್ಮ ಮೆಟ್ರೋ ವಿಸ್ತರಣೆ
  • 59.6 ಕಿ.ಮೀ. ಮಾರ್ಗದಲ್ಲಿ 25 ಮೆಟ್ರೋ ನಿಲ್ದಾಣ ನಿರ್ಮಾಣ ಮಾಡಲಿರುವ BMRCL
  • ಡಿಪಿಆರ್ ಸಿದ್ದಪಡಿಸಲು ಟೆಂಡರ್ ಕರೆದ ಬಿಎಂಆರ್‌ಸಿಎಲ್

Bengaluru: ಬೆಂಗಳೂರು ನಗರದಿಂದ ಹೊರವಲಯ ಜಿಲ್ಲೆಗಳನ್ನೂ ಸಂಪರ್ಕಿಸುವ (Metro extension to Tumkur) ಮೆಟ್ರೋ ಯೋಜನೆ ಇದೀಗ ಮತ್ತಷ್ಟು ವೇಗ ಪಡೆದಿದೆ.

ಬೆಂಗಳೂರು–ತುಮಕೂರು ಮಾರ್ಗದಲ್ಲಿ ಮೆಟ್ರೋ ಸೇವೆ ವಿಸ್ತರಿಸುವ ಸಂಕಲ್ಪಕ್ಕೆ ಬಿಎಂಆರ್‌ಸಿಎಲ್ ಅಧಿಕೃತ ಚಾಲನೆ ನೀಡಿದೆ.

ಮಾದಾವರ ಮೆಟ್ರೋ ನಿಲ್ದಾಣದಿಂದ ನೆಲಮಂಗಲ ಮತ್ತು ದಾಬಸ್ ಪೇಟೆ ಮೂಲಕ ತುಮಕೂರು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದವರೆಗೂ ಸುಮಾರು 59.6 ಕಿ.ಮೀ. ದೂರಕ್ಕೆ ಮೆಟ್ರೋ ಟ್ರೇನ್ ಮಾರ್ಗವನ್ನು ರೂಪಿಸುವ ಯೋಜನೆಗೆ ಡೀಟೈಲ್ಡ್ ಪ್ರಾಜೆಕ್ಟ್ ರಿಪೋರ್ಟ್ (DPR) ಸಿದ್ದಪಡಿಸಲು ಟೆಂಡರ್ ಪ್ರಕಟಿಸಲಾಗಿದೆ.

Metro extension  to Tumkur

ಈ ಮಾರ್ಗದಲ್ಲಿ 25 ಹೊಸ ಮೆಟ್ರೋ ನಿಲ್ದಾಣಗಳನ್ನು ನಿರ್ಮಿಸುವ (Metro extension to Tumkur) ಪ್ರಸ್ತಾಪವಿದ್ದು, ಈಗಾಗಲೇ ಸಾಧ್ಯತೆ ಅಧ್ಯಯನ (Feasibility Study) ಪೂರ್ಣಗೊಂಡಿದೆ.

ಅಂತರ್ ಜಿಲ್ಲಾ ಸಂಪರ್ಕ ಒದಗಿಸುವ ಈ ಯೋಜನೆ ಪೂರ್ಣಗೊಳ್ಳುವ ಮೂಲಕ ಬೆಂಗಳೂರು–ತುಮಕೂರು ಸಂಚಾರ ಇನ್ನಷ್ಟು ಸುಲಭವಾಗಲಿದೆ.

ಇನ್ನು ಮೆಟ್ರೋ ವಿಸ್ತರಣೆ ನೆಲಮಂಗಲ–ತುಮಕೂರು ರಸ್ತೆ ಭಾಗವು ಗ್ರಾಮಾಂತರ ಪ್ರದೇಶಗಳ ಮೂಲಕ ಸಾಗುತ್ತದೆ.

ಮಧ್ಯದಲ್ಲಿರುವ ಡಾಬಸ್ ಪೇಟೆ ದೊಡ್ಡ ಪಟ್ಟಣವಾಗದಿದ್ದರೂ, ಇಲ್ಲಿ ನಿರ್ಮಾಣಗೊಂಡಿರುವ ಕ್ವಿನ್ ಸಿಟಿ (Satellite Town Ring Road) ಅಭಿವೃದ್ಧಿಗೆ ಈ ರೈಲು ಸಂಪರ್ಕ ಮಹತ್ತರವಾಗಿ ಸಹಕಾರಿಯಾಗಲಿದೆ.

ಅಲ್ಲದೇ ನೆಲಮಂಗಲ–ತುಮಕೂರು ನಡುವೆ ಯಾವ ರೀತಿಯ ಸಾರಿಗೆ ವ್ಯವಸ್ಥೆ ಎಲ್ಲಕ್ಕಿಂತ ಪರಿಣಾಮಕಾರಿ ಎಂಬ ಬಗ್ಗೆ ದೀರ್ಘ ಚರ್ಚೆ ನಡೆಯುತ್ತಿದೆ.

ಮೆಟ್ರೋ, ಸಬ್‌ಅರ್ಬನ್ ರೈಲು ಅಥವಾ ರ್ಯಾಪಿಡ್ ರೈಲ್ ಟ್ರಾನ್ಸಿಟ್ ಸಿಸ್ಟಮ್ (RRTS) — ಇವುಗಳಲ್ಲಿ ಯಾವುದು ಸೂಕ್ತ ಎಂಬುದನ್ನು ಡಿಪಿಆರ್‌ನಲ್ಲಿ ತೀರ್ಮಾನಿಸಲಿದ್ದು, ನೆಲಮಂಗಲದಿಂದ ತುಮಕೂರಿನವರೆಗೆ ಹೈ–ಸ್ಪೀಡ್ ಮೆಟ್ರೋ ಪರಿಕಲ್ಪನೆಯನ್ನೂ ಪರಿಗಣಿಸಲಾಗಿದೆ.

ಹೀಗಾಗಿ ಮಾದಾವರ–ನೆಲಮಂಗಲ ಭಾಗದಲ್ಲಿ ಸಾಮಾನ್ಯ ಮೆಟ್ರೋ, ಹಾಗೂ ನೆಲಮಂಗಲ–ತುಮಕೂರು ಭಾಗದಲ್ಲಿ ವೇಗದ ಮೆಟ್ರೋ ವ್ಯವಸ್ಥೆ ಇರಬಹುದು ಎಂಬ ಸೂಚನೆ ಟೆಂಡರ್ ವಿವರಗಳಿಂದ ತಿಳಿದುಬರುತ್ತಿದೆ.

ಈ ಹಿಂದೆ ಹೈದರಾಬಾದ್ ಮೂಲದ ಕಂಪನಿಗೆ ಫಿಸಿಬಿಲಿಟಿ ರಿಪೋರ್ಟ್ ತಯಾರಿಸಲು ಜವಾಬ್ದಾರಿ ನೀಡಲಾಗಿತ್ತು ಹಾಗೂ ಆ ಕಾರ್ಯಕ್ಕೆ 3 ಕೋಟಿ ರೂ. ಬಜೆಟ್ ನಿಗದಿ ಮಾಡಲಾಗಿತ್ತು.

ಈಗ, ಮಾರ್ಗ ಅಭಿವೃದ್ಧಿಗೆ ಆಗಬಹುದಾದ ಒಟ್ಟು ವೆಚ್ಚವನ್ನು 20,649 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಸರ್ಕಾರ–ಖಾಸಗಿ ಸಹಭಾಗಿತ್ವ (PPP ಮಾದರಿ) ಮೂಲಕ ಪೂರ್ಣಗೊಳಿಸಲು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಮುಂದಾಗಿದ್ದಾರೆ.

ಅವರ ಅಭಿಪ್ರಾಯದಲ್ಲಿ ಈ ಮಾರ್ಗ ಸಿದ್ಧವಾದರೆ ಉದ್ಯೋಗಾವಕಾಶ, ಉದ್ಯಮ ವಿಸ್ತರಣೆ, ಜನರ ಸಂಚಾರ ಸುಲಲಿತ ಮತ್ತು ಪ್ರದೇಶದ ಒಟ್ಟಾರೆ ಬೆಳವಣಿಗೆಗೆ ದೊಡ್ಡ ಉತ್ತೇಜನ ಸಿಗಲಿದೆ.

ಅಂತರ್ ಜಿಲ್ಲಾ ಸಂಚಾರ ಕೂಡ ಹೊಸ ವೇಗ ಪಡೆಯಲಿದ್ದು ದೀರ್ಘಾವಧಿಯ ಮೂಲಸೌಕರ್ಯ ಹೂಡಿಕೆ ಆಗಲಿದೆ.

ಆದರೆ ಈ ಕುರಿತಾಗಿ ಪ್ರಯಾಣಿಕರಿಗೆ ದರದ ಕುರಿತಾಗಿ ಪ್ರಶ್ನೆ ಎದ್ದಿದ್ದು ಬೆಂಗಳೂರು ಮೆಟ್ರೋ ಪ್ರಸ್ತುತ ಪ್ರತಿ ಕಿ.ಮೀ.ಗೆ ಸುಮಾರು 3 ರೂಪಾಯಿ ಪ್ರಯಾಣ ದರ ವಸೂಲು ಮಾಡುತ್ತದೆ.

ಆ ಲೆಕ್ಕದಲ್ಲಿ, ಮೆಜೆಸ್ಟಿಕ್‌ನಿಂದ ತುಮಕೂರು ನಗರದವರೆಗಿನ ಸುಮಾರು 70 ಕಿ.ಮೀ. ದೂರಕ್ಕೆ 200 ರೂಪಾಯಿಗೂ ಹೆಚ್ಚು ಹಣ ವಿಧಿಸಬಹುದಾದ ಸಾಧ್ಯತೆ ಇದೆ.

ಇದಕ್ಕೆ ವಿರುದ್ಧವಾಗಿ, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಇದೇ ಮಾರ್ಗಕ್ಕೆ ಕೇವಲ 91 ರೂ. ಶುಲ್ಕವಿದೆ. ಹೀಗಾಗಿ ಮೆಟ್ರೋ ಪ್ರಯಾಣ ಬಸ್ ಪ್ರಯಾಣಕ್ಕಿಂತ ಎರಡು ಪಟ್ಟು ಹೆಚ್ಚಾಗಬಹುದು ಎನ್ನುವ ಆತಂಕವೂ ಇದೆ.

ಅಂತಿಮವಾಗಿ ಈ ಯೋಜನೆ ಆರ್ಥಿಕವಾಗಿ ಸಾಧ್ಯವೋ ಇಲ್ಲವೋ ಎಂಬುದನ್ನು ಡಿಪಿಆರ್ ರಿಪೋರ್ಟ್ ಸ್ಪಷ್ಟಪಡಿಸಲಿದೆ.

ಇದನ್ನು ಓದಿ : ಕರ್ನಾಟಕದ ಮೂವರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ: ಕರಾವಳಿ ಮತ್ತು ಮಲೆನಾಡಿನಲ್ಲಿ ಭಾರೀ ಮಳೆಯ ಎಚ್ಚರಿಕೆ

Related News

ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ಬೀಗಿದ ಭಾರತ
Sports

ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ಬೀಗಿದ ಭಾರತ

December 15, 2025
ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ
ಪ್ರಮುಖ ಸುದ್ದಿ

ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ

December 15, 2025
ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ
ದೇಶ-ವಿದೇಶ

ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ

December 13, 2025
ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ
ಪ್ರಮುಖ ಸುದ್ದಿ

ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ

December 13, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.