- ಸುಸೈಡ್ ಸ್ಪಾಟ್ ಆಗಿ ಬದಲಾಗುತ್ತಿರುವ ನಮ್ಮ ಮೆಟ್ರೋ ನಿಲ್ದಾಣಗಳು
- ಮೆಟ್ರೋ ಆತ್ಮಹ* ತಾಣವಲ್ಲ, ಸುರಕ್ಷಿತ ಪ್ರಯಾಣದ ಮಾರ್ಗವಾಗಲಿ ಎಂದ ಪ್ರಯಾಣಿಕರು
- ದೆಹಲಿ–ಚೆನ್ನೈ ಮಾದರಿಯ ಪಿಎಸ್ಡಿ ಡೋರ್ ಭದ್ರತಾ ವ್ಯವಸ್ಥೆಗೆ ಮನವಿ (Metro stations are turning into suicide spots)
Bengaluru: ಬೆಂಗಳೂರು ನಗರವು ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದ್ದು, ಸಾವಿರಾರು ಮಂದಿ ಪ್ರತಿದಿನ ನಮ್ಮ ಮೆಟ್ರೋ(Namma Metro) ಸೇವೆಗಳನ್ನು ಬಳಸುತ್ತಿದ್ದಾರೆ.
ಆದರೆ ಇತ್ತೀಚಿನ ದಿನಗಳಲ್ಲಿ ಮೆಟ್ರೋ ಸ್ಟೇಷನ್‌ಗಳಲ್ಲಿ ಆತ್ಮಹ* ಯತ್ನಗಳ ಪ್ರಕರಣಗಳ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ 10 ಕ್ಕೂ ಹೆಚ್ಚು ಮಂದಿ ಟ್ರ್ಯಾಕ್‌ಗೆ
ಹಾರಿ ಜೀವ ತ್ಯಾಗ ಮಾಡಲು ಯತ್ನಿಸಿದ್ದು, ಕೆಲವರ ಜೀವ ಉಳಿದರೆ, ಕೆಲವು ಘಟನೆಗಳು ದುರ್ಘಟನೆಯಾಗಿವೆ. ಶನಿವಾರ ನಾಡಪ್ರಭು ಕೆಂಪೇಗೌಡ ಮೆಟ್ರೋ ಸ್ಟೇಷನ್‌ನಲ್ಲಿ
ಮತ್ತೊಂದು ಆತ್ಮಹ* ಯತ್ನ ದಾಖಲಾಗಿದೆ. 40 ವರ್ಷದ ವಿರೇಶ್ ಎಂಬ ವ್ಯಕ್ತಿ ಟ್ರ್ಯಾಕ್‌ಗೆ ಹಾರಿ ಪ್ರಾಣ ಬಲಿಯಾಗಲು ಯತ್ನಿಸಿದ್ದು, ಮೆಟ್ರೋ ಸಿಬ್ಬಂದಿಯ ತಕ್ಷಣದ ಕ್ರಮದಿಂದ ಆತನ ಜೀವ ಉಳಿಯಿತು.

ವಿರೇಶ್ ವಿಧಾನಸೌಧದ ಡಿ ಗ್ರೂಪ್ ನೌಕರನಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
2024 ಜನವರಿಯಿಂದ ಹಲವು ಮೆಟ್ರೋ ನಿಲ್ದಾಣಗಳಲ್ಲಿ ಆತ್ಮಹ* ಯತ್ನಗಳ ಸರಪಳಿ ಮುಂದುವರಿದಿದೆ. ಜನವರಿ 1 ರಂದು ಇಂದಿರಾನಗರ ಮೆಟ್ರೋ ನಿಲ್ದಾಣದಲ್ಲಿ ಮಹಿಳೆಯೊಬ್ಬರು
ಮೊಬೈಲ್ ತೆಗೆದುಕೊಳ್ಳಲು ಟ್ರ್ಯಾಕ್‌ಗೆ ಇಳಿದಿದ್ದು, ಸಿಬ್ಬಂದಿ ಸಮಯಕ್ಕೆ ಸರಿಯಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಜೀವ ಉಳಿಸಿದರು. ಅದೇ ತಿಂಗಳಲ್ಲಿ ಜಾಲಹಳ್ಳಿಯಲ್ಲಿ(Jalahalli) ಕೇರಳ ಮೂಲದ
ಶ್ಯಾರೋನ್ ಎಂಬ ಯುವಕ ಆತ್ಮಹ* ಯತ್ನ ಮಾಡಿದ್ದ. ಮಾರ್ಚ್ ತಿಂಗಳಲ್ಲಿ ಅತ್ತಿಗುಪ್ಪೆ ಮೆಟ್ರೋ(Attiguppe Metro) ಹಳಿ ಮೇಲೆ ಬಿದ್ದ 19 ವರ್ಷದ ವಿದ್ಯಾರ್ಥಿ ಧ್ರುವ್ ಟಕ್ಕರ್ ಪ್ರಾಣ ಕಳೆದುಕೊಂಡರು.
ಆಗಸ್ಟ್ ತಿಂಗಳಲ್ಲಿ ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ 35 ವರ್ಷದ ವ್ಯಕ್ತಿ ಹಳಿಗೆ ಹಾರಿ ಸಾವನ್ನಪ್ಪಿದರೆ, ಸೆಪ್ಟೆಂಬರ್‌ನಲ್ಲಿ ಜ್ಞಾನಭಾರತಿ ನಿಲ್ದಾಣದಲ್ಲಿ ಬಿಹಾರ ಮೂಲದ ಯುವಕನ ಜೀವ ಸೆಕ್ಯುರಿಟಿ ಗಾರ್ಡ್‌ನ
ತಕ್ಷಣದ ಕ್ರಮದಿಂದ ಉಳಿಯಿತು. ಇತ್ತೀಚಿನ ಆಗಸ್ಟ್ 26 ರಂದು ರಾಗಿಗುಡ್ಡ ಮೆಟ್ರೋ(Ragigudda Metro) ಸ್ಟೇಷನ್‌ನಲ್ಲಿಯೂ ಭದ್ರತಾ ಸಿಬ್ಬಂದಿಯೊಬ್ಬರು ಟ್ರ್ಯಾಕ್‌ಗೆ ಬಿದ್ದರೂ ಅದೃಷ್ಟವಶಾತ್ ಅಪಾಯ ತಪ್ಪಿದೆ.
ಈ ರೀತಿಯ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಈಗ ಪಿಎಸ್ಡಿ (Platform Screen Door) ಅಳವಡಿಕೆಗೆ ಒತ್ತಾಯಿಸುತ್ತಿದ್ದಾರೆ.
ದೆಹಲಿ, ಚೆನ್ನೈ ಮುಂತಾದ ನಗರಗಳ ಮೆಟ್ರೋ ನಿಲ್ದಾಣಗಳಲ್ಲಿ ಈಗಾಗಲೇ ಪಿಎಸ್ಡಿ ಡೋರ್‌ಗಳು ಅಳವಡಿಸಲಾಗಿದ್ದು, ಅವು ಟ್ರ್ಯಾಕ್ ಮತ್ತು ಪ್ರಯಾಣಿಕರ ನಡುವೆ ಭದ್ರತಾ ಅಂತರವನ್ನು ಒದಗಿಸುತ್ತವೆ.
ಆದರೆ ನಮ್ಮ ಮೆಟ್ರೋದಲ್ಲಿ ಇನ್ನೂ ಈ ವ್ಯವಸ್ಥೆ ಇಲ್ಲದಿರುವುದು ಬೇಸರ ತಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಮ್ಮ ಮೆಟ್ರೋ ಸೇವೆ ಪ್ರಾರಂಭವಾಗಿ ಈಗ 13 ವರ್ಷಗಳು ಕಳೆದರೂ,
ಪ್ರಯಾಣಿಕರ ಜೀವ ರಕ್ಷಣೆಗೆ ಅಗತ್ಯವಾದ ಈ ರೀತಿಯ ಸೌಲಭ್ಯಗಳನ್ನು ನೀಡುವಲ್ಲಿ ವಿಳಂಬವಾಗಿದೆ. ಪ್ರಯಾಣಿಕರು ಹೇಳುವಂತೆ, “ಪ್ರತಿ ಬಾರಿ ಇಂತಹ ಘಟನೆ ನಡೆದಾಗ ಗಂಟೆಗಟ್ಟಲೆ ಸಂಚಾರ ಸ್ಥಗಿತಗೊಳ್ಳುತ್ತದೆ.
ಇದನ್ನು ಓದಿ : ಶಾರ್ಟ್ ಲೂಪ್ ರೈಲುಗಳ ನೀಡುವಂತೆ ಬೆಂಗಳೂರಿನ ಮೆಟ್ರೋ ಪ್ರಯಾಣಿಕರ ಬೇಡಿಕೆ
ಸಾವಿರಾರು ಜನ ತೊಂದರೆ ಅನುಭವಿಸುತ್ತಾರೆ. ಸುರಕ್ಷತೆಗಾಗಿ ಪಿಎಸ್ಡಿ ಡೋರ್(PSD Door) ಅಗತ್ಯ” ಎಂದು ಪ್ರಯಾಣಿಕರು ಬಿಎಂಆರ್ ಸಿಎಲ್ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ. (Metro stations are turning into suicide spots)