- ಈಗಾಗಲೇ ಖರ್ಚು ವೆಚ್ಚಗಳ ಆಡಿಟ್ ಮುಕ್ತಾಯ, ಡಿಸಿಎಂಗೆ (metro ticket price hike discussion) ವರದಿ ಸಲ್ಲಿಸಿದ ಬಳಿಕ ದರ ನಿಗದಿ
- ನಿರ್ವಹಣಾ ವೆಚ್ಚ ಮತ್ತು ವಿದ್ಯುತ್ ಖರ್ಚು ಹೆಚ್ಚಳದ ಹಿನ್ನೆಲೆ ದರ ನಿಗದಿ ಸಮಿತಿ ರಚನೆ ಬಗ್ಗೆ ಚಿಂತನೆ
- ತಾತ್ಕಾಲಿಕ ರಿಲೀಫ್ ನಂತರದಲ್ಲಿ ಮತ್ತೆ ಮುನ್ನೆಲೆಗೆ ಬಂದ ದರ ಏರಿಕೆ ಚರ್ಚೆ
Bengaluru: ರಾಜಧಾನಿ ಬೆಂಗಳೂರಿನ ಜನಸಾಮಾನ್ಯರ ದೈನಂದಿನ ಸಂಚಾರಕ್ಕೆ ಪ್ರಮುಖ (metro ticket price hike discussion) ಆಧಾರವಾಗಿರುವ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೆ ದರ ಏರಿಕೆಯ ಆತಂಕ ಎದುರಾಗಿದೆ.
ಇತ್ತೀಚೆಗೆ ಶೇ.5 ರಷ್ಟು ಟಿಕೆಟ್ ದರ ಹೆಚ್ಚಳ ಘೋಷಣೆ ಮಾಡಲಾಗಿದ್ದು, ಬಳಿಕ ತಾತ್ಕಾಲಿಕವಾಗಿ ಅದನ್ನು ಸ್ಥಗಿತಗೊಳಿಸಲಾಗಿತ್ತು.
ಆದರೆ ಈಗ ಖರ್ಚು-ವೆಚ್ಚಗಳ ಕುರಿತ ಆಂತರಿಕ ಆಡಿಟ್ (Audit) ಪ್ರಕ್ರಿಯೆ ಪೂರ್ಣಗೊಂಡಿರುವ ಹಿನ್ನೆಲೆ, ದರ ಪರಿಷ್ಕರಣೆ ವಿಚಾರ ಮತ್ತೆ ಚರ್ಚೆಗೆ ಬಂದಿದೆ.

ಆಡಿಟ್ ವರದಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K.Shivakumar) ಅವರಿಗೆ ಸಲ್ಲಿಸಿದ ಬಳಿಕ ಅಂತಿಮ (metro ticket price hike discussion) ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಕೆಲವು ತಿಂಗಳಿಂದ ಮೆಟ್ರೋ ನಿರ್ವಹಣಾ ವೆಚ್ಚ, ಸಿಬ್ಬಂದಿ ಸಂಬಳ, ವಿದ್ಯುತ್ ಬಳಕೆ ಹಾಗೂ ಇತರ ಕಾರ್ಯಾಚರಣಾ ಖರ್ಚುಗಳು ಹೆಚ್ಚುತ್ತಿರುವುದಾಗಿ ಬಿಎಂಆರ್‌ಸಿಎಲ್ (BMRCL) ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದರ ಏರಿಕೆ ಅಗತ್ಯವಿದೆಯೇ ಎಂಬುದನ್ನು ಪರಿಶೀಲಿಸಲು ಸರ್ಕಾರ ಸೂಚಿಸಿದ್ದ ಆಂತರಿಕ ಆಡಿಟ್ ಪೂರ್ಣಗೊಂಡಿದೆ.
ಇದೀಗ ಆಡಿಟ್ ವರದಿ ಆಧಾರವಾಗಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ದರ ಏರಿಕೆ ಮಾಡಬೇಕಾದರೆ ಹೊಸ ದರ ನಿಗದಿ ಸಮಿತಿ ರಚನೆ ಅನಿವಾರ್ಯವಾಗಿದ್ದು, ಅದರ ಶಿಫಾರಸುಗಳ ಮೇರೆಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.
ಮೂಲಗಳ ಪ್ರಕಾರ, ಮೊದಲಿಗೆ ನಿಗದಿಯಾಗಿದ್ದ ಶೇ.5 ರಷ್ಟು ಏರಿಕೆಯ ಬದಲು ಶೇ.1 ಅಥವಾ ಶೇ.2 ರಷ್ಟು ಮಾತ್ರ ಹೆಚ್ಚಳ ಮಾಡುವ ಪರ್ಯಾಯಗಳನ್ನೂ ಪರಿಶೀಲಿಸಲಾಗುತ್ತಿದೆ.
ಆದರೆ ಇನ್ನೊಂದು ಕಡೆ, ವೆಚ್ಚದ ಒತ್ತಡ ಹೆಚ್ಚಿರುವ ಹಿನ್ನೆಲೆಯಲ್ಲಿ ಶೇ.5 ಕ್ಕಿಂತ ಹೆಚ್ಚು ಏರಿಕೆಯ ಸಾಧ್ಯತೆಯನ್ನೂ ತಳ್ಳಿಹಾಕಲಾಗುತ್ತಿಲ್ಲ. ಈ ಬಗ್ಗೆ ಅಂತಿಮ ಸ್ಪಷ್ಟತೆ ಬೋರ್ಡ್ ಸಭೆಯ ಬಳಿಕವೇ ಸಿಗಲಿದೆ.
ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಬೋರ್ಡ್ (Board) ಸಭೆ ಕರೆಯುವ ಕುರಿತು ಮನವಿ ಸಲ್ಲಿಸಲು ಮುಂದಾಗಿದ್ದಾರೆ.
ಇದರಿಂದ ಮೆಟ್ರೋ ಪ್ರಯಾಣಿಕರಲ್ಲಿ ಆತಂಕ ಹೆಚ್ಚಾಗಿದೆ. ಈಗಾಗಲೇ ಜೀವನೋಪಾಯ ವೆಚ್ಚಗಳು ಏರಿಕೆಯಾಗಿರುವ ಸಂದರ್ಭದಲ್ಲಿ ಮೆಟ್ರೋ ದರ ಹೆಚ್ಚಳವಾದರೆ ಮಧ್ಯಮ ವರ್ಗ ಹಾಗೂ ದಿನಗೂಲಿ ಕಾರ್ಮಿಕರಿಗೆ ಹೊರೆ ಹೆಚ್ಚಾಗಲಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ಅನೇಕ ಪ್ರಯಾಣಿಕರು ದರ ಏರಿಕೆ ಬದಲಾಗಿ ಪರ್ಯಾಯ ಆದಾಯ ಮಾರ್ಗಗಳನ್ನು ಹುಡುಕಬೇಕು ಎಂದು ಒತ್ತಾಯಿಸಿದ್ದಾರೆ.
ವಿಶೇಷವಾಗಿ ಪ್ರತಿದಿನ ಮೆಟ್ರೋ ಬಳಸುವ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ದರ ಹೆಚ್ಚಳದಿಂದ ತೊಂದರೆ ಅನುಭವಿಸುವ ಸಾಧ್ಯತೆ ಇದೆ.
ಒಟ್ಟಿನಲ್ಲಿ, ಆಡಿಟ್ ವರದಿ ಸಲ್ಲಿಕೆಯ ನಂತರ ಸರ್ಕಾರ ಮತ್ತು ಬಿಎಂಆರ್‌ಸಿಎಲ್ ನಡುವೆ ಚರ್ಚೆಗಳು ನಡೆಯಲಿವೆ. ದರ ಏರಿಕೆ ಅನಿವಾರ್ಯವೇ ಅಥವಾ ಕಡಿತ ಪ್ರಮಾಣದಲ್ಲಿ ಮಾಡಬೇಕೇ ಎಂಬುದು ಮುಂದಿನ ಕೆಲವು ದಿನಗಳಲ್ಲಿ ಸ್ಪಷ್ಟವಾಗಲಿದೆ.
ಆದರೆ ದರ ಏರಿಕೆ ಜಾರಿಗೆ ಬಂದರೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ಮತ್ತೊಮ್ಮೆ ರಾಜಕೀಯ ಚರ್ಚೆ ಹಾಗೂ ವಾಗ್ವಾದಗಳು ಉಂಟಾಗುವ ಸಾಧ್ಯತೆಯೂ ಇದೆ. ಈ ನಡುವೆ ಮೆಟ್ರೋ ಪ್ರಯಾಣಿಕರು ಸರ್ಕಾರದ ಅಂತಿಮ ನಿರ್ಧಾರಕ್ಕಾಗಿ ಕಾದು ನೋಡುತ್ತಿದ್ದಾರೆ.
ಇದನ್ನು ಓದಿ : https://vijayatimes.com/drugs-smuggling-seized-at-bangalore-airport/